ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿಗೆ ತಂತ್ರಜ್ಞಾನ ವಿವರಿಸಲು ಕಬ್ಬನ್ ಪಾರ್ಕ್ ಠಾಣೆ ಸಿದ್ಧ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 24 : ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ವಿಡಿಯೋ ಕಾನ್ಫರೆನ್ಸ್‌ಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಸಿದ್ಧಗೊಂಡಿದೆ. ಪೊಲೀಸ್‌ ಠಾಣೆಯಲ್ಲಿನ ಮಾಹಿತಿ ತಂತ್ರಜ್ಞಾನದ ಅನುಷ್ಠಾನದ ಬಗ್ಗೆ ಮಾಹಿತಿ ಪಡೆಯಲು ಮೋದಿ ಆ.26ರಂದು ವಿಡಿಯೋ ಕಾನ್ಫರೆನ್ಸ್‌ ನಡೆಸಲಿದ್ದಾರೆ.

ಸಿಸಿಟಿಎನ್‌ಎಸ್ ಯೋಜನೆ ಅನ್ವಯ ಡಿಜಿಟಲೀಕರಣಗೊಂಡ ಪೊಲೀಸ್ ಠಾಣೆಗಳ ಜೊತೆ ಪ್ರಧಾನಿ ಮೋದಿ ಆ.26ರ ಬುಧವಾರ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಕಬ್ಬನ್‌ ಪಾರ್ಕ್ ಠಾಣೆ, ಅಸ್ಸಾಂ, ಉತ್ತರ ಪ್ರದೇಶದ ಎರಡು ಠಾಣೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. [ಕಬ್ಬನ್ ಪಾರ್ಕ್ ಠಾಣೆಗೆ ಮೋದಿ ಭೇಟಿ]

Crime and Criminal Tracking Network & Systems (CCTNS) ಯೋಜನೆಯಡಿ ಪೊಲೀಸ್ ಠಾಣೆಗಳನ್ನು ಆಧುನೀಕರಣಗೊಳಿಸಲು ಮತ್ತು ಡಿಜಿಟಲ್ ಆಡಳಿತಕ್ಕೆ ಒಳಪಡಿಸಲು ಮೂರು ಠಾಣೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಠಾಣೆಗಳ ಜೊತೆ ಮೋದಿ ಬುಧವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಲಿದ್ದಾರೆ.

ಸಿಸಿಟಿಎನ್‌ಎಸ್ ಯೋಜನೆ ಅನ್ವಯ ಕಬ್ಬನ್ ಪಾರ್ಕ್ ಠಾಣೆ ಡಿಜಿಟಲೀಕರಣಗೊಂಡಿದ್ದು, ಠಾಣೆಯ ಆಡಳಿತ ವ್ಯವಸ್ಥೆಗಾಗಿ ಪ್ರತ್ಯೇಕ ತಂತ್ರಾಶ ರೂಪಿಸಲಾಗಿದೆ. ಎಚ್‌ಪಿ ಕಂಪನಿ ಈ ತಂತ್ರಾಶವನ್ನು ನಿರ್ವಹಣೆ ಮಾಡುತ್ತಿದೆ. ಠಾಣೆಯಲ್ಲಿನ ಪ್ರಕರಣಗಳ ತನಿಖಾ ಹಂತಗಳು ಆನ್‌ಲೈನ್ ಮೂಲಕ ಲಭ್ಯವಿದೆ.

ಮೋದಿ ಜೊತೆ ಸಂವಾದಕ್ಕೆ ಸಿದ್ಧತೆ : ಮೋದಿ ಜೊತೆಗಿನ ಸಂವಾದಕ್ಕೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಸಕಲ ಸಿದ್ಧತೆಯಾಗಿದೆ. ಠಾಣೆಯ ಇನ್ಸ್‌ಪೆಕ್ಟರ್ ಸಿ.ಬಾಲಕೃಷ್ಣ ಅವರು ಮೋದಿ ಅವರಿಗೆ ಠಾಣೆಯಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಗೃಹ ಸಚಿವ ಕೆಜೆ ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್, ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್, ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3.30ರಿಂದ 5.30ರ ತನಕ ವಿಡಿಯೋ ಕಾನ್ಫರೆನ್ಸ್ ನಡೆಯಲಿದೆ.

English summary
The Cubbon Park police station are excited about the e-meeting with the Prime Minister Narendra Modi on Wednesday, August 26. Cubbon Park police station which has adapted smart policing will be inspected by the PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X