ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್ ಬಸ್: ಇ-ಬುಕಿಂಗ್‌ಗೆ ಪ್ರಯಾಣಿಕರ ನಿರಾಸಕ್ತಿ

|
Google Oneindia Kannada News

ಬೆಂಗಳೂರು,ಜನವರಿ 25: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವಾಯುವಜ್ರ ಬಸ್‌ಗಳನ್ನು ಇ-ಬುಕಿಂಗ್ ಮೂಲಕ ಬುಕ್ ಮಾಡುವ ಅವಕಾಶವಿದ್ದರೂ, ಪ್ರಯಾಣಿಕರು ಮುಂದೆಬರುತ್ತಿಲ್ಲ.

ಬಸ್‌ಗಳಲ್ಲಿ ಆಸನಗಳನ್ನು ಕಾಯ್ದಿರಿಸಲು ಅವತಾರ್ ತಂತ್ರಾಂಶದಲ್ಲಿ ಬಿಎಂಟಿಸಿ ಅವಕಾಶ ಕಲ್ಪಿಸಿದ್ದರೂ, ಬೆರಣಿಕೆಯಷ್ಟು ಜನರು ಮಾತ್ರ ಈ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.

ಆನ್‌ಲೈನ್‌ ಮೂಲಕ ವಿದ್ಯಾರ್ಥಿ ಬಸ್‌ ಪಾಸ್‌ ಪಡೆಯಿರಿ:ಬಿಎಂಟಿಸಿಆನ್‌ಲೈನ್‌ ಮೂಲಕ ವಿದ್ಯಾರ್ಥಿ ಬಸ್‌ ಪಾಸ್‌ ಪಡೆಯಿರಿ:ಬಿಎಂಟಿಸಿ

ಕೊರೊನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕೂಡ ಕಡಿಮೆಯಾಗಿದ್ದು, ಇದರಿಂದ ವಿಮಾನ ನಿಲ್ದಾಣಕ್ಕೆ ತೆರಳುವವರ ಸಂಖ್ಯೆ ಕೂಡ ಕಡಿಮೆಯಾಗಿದೆ ಎಂದಿದ್ದಾರೆ.

E-Bookings For Buses From Bengaluru To Kempegowda International Airport Still Low

ಕಳೆದ ಮಾರ್ಚ್ ನಲ್ಲಿ 120 ಬಸ್ ಗಳು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದವು. ಆದರೀಗ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಬಸ್ ಗಳ ಸಂಖ್ಯೆ ಕೂಡ 61ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಕೇವಲ 63 ಆನ್ ಲೈನ್ ಬುಕಿಂಗ್‌ ಆಗಿದ್ದವು. ಇದರಲ್ಲಿ 47 ಟಿಕೆಟ್ ಗಳು ನಗರದ ವಿವಿಧ ಭಾಗಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತೆರಳಿದ ಬಸ್ ಗಳಲ್ಲಿ ಬುಕ್ ಆಗಿದ್ದವು, ವಿಮಾನ ನಿಲ್ದಾಣದಿಂದ ಮರಳಿ ನಗರಕ್ಕೆ ಹಿಮ್ಮುಖವಾಗಿ ಬಂದ ಬಸ್ ಗಳಲ್ಲಿ ಕೇವಲ 16 ಟಿಕೆಟ್ ಗಳಷ್ಟೇ ಬುಕ್ ಆಗಿದ್ದವು.

Recommended Video

ಮೈಸೂರು:ಪೊಲೀಸರು ರೈತರ ಟ್ರ್ಯಾಕ್ಟರ್ ತಡೆದರೆ ಸ್ಥಳದಲ್ಲೇ ರಸ್ತೆ ತಡೆದು ಪ್ರತಿಭಟನೆ-ರೈತ ಸಂಘ ಎಚ್ಚರಿಕೆ | Oneindia Kannada

ಈ ತಿಂಗಳು (ಜನವರಿ 18ರವರೆಗೆ) ಕೇವಲ 43 ಟಿಕೆಟ್ ಗಳು ಮಾತ್ರವೇ ಬುಕ್ ಆಗಿವೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ವಿಮಾನ ನಿಲ್ದಾಣಕ್ಕೆ 5,000 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಕೊರೊನಾ ಸಾಂಕ್ರಾಮಿಕ ರೋಗಕ್ಕೂ ಮುನ್ನ ಈ ಸಂಖ್ಯೆ 12,000 ಇತ್ತು.

English summary
Though it has been more than a month since Bangalore Metropolitan Transport Corporation (BMTC) started online booking to boost occupancy on Vayu Vajra buses, there are few takers for the previously popular and profitable service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X