ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿ: ಡಿವಿಎಸ್ ಪರೋಕ್ಷ ಆರೋಪ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 2: ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲ ಅದೇ ಬ್ರ್ಯಾಂಡ್‌ಗೆ ಸೇರುತ್ತಾರೆ ಎನ್ನುವ ಮೂಲಕ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರು ನೆರೆ ಪರಿಹಾರಕ್ಕೆ ಆಸಕ್ತಿ ತೋರದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿಯ 'ಸ್ಟಾರ್ ಪ್ರಚಾರಕ' ಚಕ್ರವರ್ತಿ ಸೂಲಿಬೆಲೆ ಅವರನ್ನು 'ದೇಶದ್ರೋಹಿ' ಎಂದು ಪರೋಕ್ಷವಾಗಿ ತೆಗಳಿದ್ದಾರೆ.

ನಗರದಲ್ಲಿ ಮಾತನಾಡಿದ ಸದಾನಂದಗೌಡ, ಚಕ್ರವರ್ತಿ ಸೂಲಿಬೆಲೆ ಅವರು ಮಾಡಿದ್ದ ಟ್ವೀಟ್‌ಗೆ ಪ್ರತಿಯಾಗಿ ವಾಗ್ದಾಳಿ ನಡೆಸಿದರು.

ಮೋದಿಯನ್ನು ಬೈದರೆ ಆಕಾಶಕ್ಕೆ ಉಗುಳಿದಂತೆ: ಪ್ರತಾಪ್ ಸಿಂಹಮೋದಿಯನ್ನು ಬೈದರೆ ಆಕಾಶಕ್ಕೆ ಉಗುಳಿದಂತೆ: ಪ್ರತಾಪ್ ಸಿಂಹ

'ಯಾರೋ ಕುಳಿತುಕೊಂಡು ಟ್ವೀಟ್ ಮಾಡುತ್ತಾರೆ. ಮಂತ್ರಿಗಿರಿ ಭಿಕ್ಷೆ ಎಂದು ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು ಈ ರೀತಿ ಮಾಡುತ್ತಾರೆ. ಈ ಬಗೆಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲ ಅದೇ ಬ್ರಾಂಡ್‌ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್‌ಗಳಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ. ಇಂತಹ ಮಾತುಗಳು ಮತ್ತು ಜನರಿಂದ ಬಹಳ ನೋವಾಗಿದೆ' ಎಂದು ಡಿವಿಎಸ್ ಹೇಳಿದರು.

ಮೋದಿಯಿಂದ ನಿರಾಶೆ ಎಂದ ಸೂಲಿಬೆಲೆ

ಮೋದಿಯಿಂದ ನಿರಾಶೆ ಎಂದ ಸೂಲಿಬೆಲೆ

ಚುನಾವಣೆಯ ಸಂದರ್ಭಗಳಲ್ಲಿ ಬಿಜೆಪಿಯ ಪರ ಭಾಷಣಗಳನ್ನು ಮಾಡುತ್ತಿದ್ದ ಚಕ್ರವರ್ತಿ ಸೂಲಿಬೆಲೆ ಅವರು ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ನಿಭಾಯಿಸಿದ ಬಗೆಯಿಂದ ತೀವ್ರ ನಿರಾಶೆಯಾಗಿದೆ. ಆದರೆ ಅವರ ಮೇಲಿನ ನನ್ನ ಪ್ರೀತಿ ಒಂದುಹಿಡಿಯಷ್ಟು ಕೂಡ ಕಡಿಮೆಯಾಗಿಲ್ಲ ಎಂದು ಸೂಲಿಬೆಲೆ ಹೇಳಿದ್ದರು.

ವರದಿ ಬಗ್ಗೆ ನಿರ್ಮಲಾ ಮಾಹಿತಿ

ವರದಿ ಬಗ್ಗೆ ನಿರ್ಮಲಾ ಮಾಹಿತಿ

ಪ್ರವಾಹ ಪೀಡಿತ ಪ್ರದೇಶಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಇಲ್ಲಸಲ್ಲದ ಕಥೆ ಹೇಳಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿರುವವರ ಬಗ್ಗೆ ನಮಗೆ ಕನಿಕರವಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಆಗಬೇಕಾದ ತಕ್ಷಣ ಪರಿಹಾರ, ಮಧ್ಯಂತರ ಪರಿಹಾರ ಮತ್ತು ದೀರ್ಘಕಾಲೀನ ಪರಿಹಾರದ ಬಗ್ಗೆ ಬೇಕಾದ ವರದಿಗಳನ್ನು ತಯಾರಿಸಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಮಾಹಿತಿ ನೀಡಿದ್ದಾರೆ ಎಂದು ಡಿವಿಎಸ್ ಪ್ರತಿಕ್ರಿಯೆ ನೀಡಿದ್ದರು.

ನೆರೆ ಪರಿಹಾರ ನೀಡದ ಮೋದಿ ವಿರುದ್ಧ ಬಿಜೆಪಿ ಶಾಸಕ ವಾಗ್ದಾಳಿನೆರೆ ಪರಿಹಾರ ನೀಡದ ಮೋದಿ ವಿರುದ್ಧ ಬಿಜೆಪಿ ಶಾಸಕ ವಾಗ್ದಾಳಿ

ಜನರ ಸಂಕಷ್ಟದ ನಿರ್ಲಕ್ಷ್ಯ ಇಲ್ಲ

ಜನರ ಸಂಕಷ್ಟದ ನಿರ್ಲಕ್ಷ್ಯ ಇಲ್ಲ

ಪ್ರವಾಹದಿಂದ ತೊಂದರೆಗೀಡಾದವರಿಗೆ ತಕ್ಷಣ ಆಗಬೇಕಾದ ಪರಿಹಾರವನ್ನು ನಮ್ಮ ರಾಜ್ಯ ಸರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈಗಾಗಲೇ ಕೈಗೊಂಡಿದೆ. ಉಳಿದ ಮಧ್ಯಂತರ ಮತ್ತು ದೀರ್ಘಕಾಲೀನ ಪರಿಹಾರದ ಬಗ್ಗೆ ಸಧ್ಯದಲ್ಲೇ ವರದಿ ಆಧರಿಸಿ ಕೇಂದ್ರ ಸರಕಾರದಿಂದ ಪರಿಹಾರ ಘೋಷಣೆ ಆಗಲಿದೆ. ನಮ್ಮದು ಜನರಿಂದ ಆಯ್ಕೆಯಾದ ಸರಕಾರ ಜನರಿಗೋಸ್ಕರ ಇರುವ ಸರಕಾರ, ಸಂಕಷ್ಟದಲ್ಲಿರುವವರ ಬೇನೆ ಬಗ್ಗೆ ನಮಗೆ ಅರಿವಿದೆ ಇದರಲ್ಲಿ ಯಾವುದೇ ನಿರ್ಲಕ್ಷ ಇಲ್ಲ. ಈ ಬಗ್ಗೆ ನಾನು ನಿರಂತರ ಸಂಬಂಧಪಟ್ಟ ಕೇಂದ್ರ ಸರಕಾರದ ಇಲಾಖೆಗಳ ಮಂತ್ರಿಗಳ ಸಂಪರ್ಕದಲ್ಲಿದ್ದೇನೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಾವು ನೊಂದವರ ಪರ ಜವಾಬ್ದಾರಿಯಿಂದ ವಿಮುಖವಾಗುವ ಪ್ರಶ್ನೆಯೇ ಇಲ್ಲ ಎಂದು ಸದಾನಂದಗೌಡ ಮತ್ತೊಂದು ಟ್ವೀಟ್ ಮಾಡಿದ್ದರು.

ಮಂತ್ರಿಗಿರಿ ಜನರ ಭಿಕ್ಷೆ

ಮಂತ್ರಿಗಿರಿ ಜನರ ಭಿಕ್ಷೆ

Lol! This man came now. ಸದಾನಂದಗೌಡರೇ ನೊಂದಿರುವ ಉತ್ತರ ಕರ್ನಾಟಕದ ಜನರನ್ನು ದಾರಿ ತಪ್ಪಿಸುವವರು ಎನ್ನುವಷ್ಟು ಧಾರ್ಷ್ಟ್ಯ ತೋರಿರುವ ನಿಮ್ಮ ಬಗ್ಗೆ ನಾಡಿಗೇ ಕನಿಕರವಿದೆ. ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ. ಪ್ರವಾಹ ಕಳೆದು ಜನ ಬದುಕು ಕಟ್ಟಿಕೊಳ್ಳುವ ಕಾಲಕ್ಕೂ ಬರದ ಪರಿಹಾರ ಯಾವ ಪುರುಷಾರ್ಥಕ್ಕೆ? ಎಂದು ಸೂಲಿಬೆಲೆ ಕಟುವಾಗಿ ಪ್ರಶ್ನಿಸಿದ್ದರು.

ವೈಯಕ್ತಿಕೆ ನಿಂದನೆಗೆ ಉತ್ತರವಿಲ್ಲ

ವೈಯಕ್ತಿಕೆ ನಿಂದನೆಗೆ ಉತ್ತರವಿಲ್ಲ

ಟೀಕೆ- ಟಿಪ್ಪಣಿ, ವಿಮರ್ಶೆ, ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ಅದು ಯಾವ ಮಟ್ಟದಲ್ಲಿರಬೇಕು ಅನ್ನೋದು ಗೊತ್ತಿರಬೇಕು. ಅದು ಬಿಟ್ಟು ವೈಯುಕ್ತಿಕ ನಿಂದನೆ ಇಳಿಯುವವರ ಬಗ್ಗೆ ನನ್ನ ಬಳಿ ಉತ್ತರವಿಲ್ಲ. ಸಂತ್ರಸ್ತರ ಕಣ್ಣೀರು ಒರೆಸಿದ್ದೇವೆ. ಅವರು ನಮ್ಮವರು ಅವರ ಕ್ಷೇಮ, ಭವಿಷ್ಯ ನಮ್ಮ ಜವಾಬ್ದಾರಿ.

ಜನರನ್ನು ಪ್ರಚೋದನೆ ಮಾಡುವುದಲ್ಲ

ಜನರನ್ನು ಪ್ರಚೋದನೆ ಮಾಡುವುದಲ್ಲ

ಮಂತ್ರಿಗಿರಿ ಭಿಕ್ಷೆ ಅಂತ ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು. ಈ ರೀತಿಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲಾ ಅದೇ ಬ್ರಾಂಡ್‌ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್‍ನಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ ಎಂದು ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

English summary
Union Minister Dv Sadananda Gowda slams Chakravarthy sulibele over his comments against central government handling Karnataka flood issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X