• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿವಿಜಿ 'ಸಾಕ್ಷ್ಯಚಿತ್ರ' ಅನಾವರಣ, ಉಚಿತವಾಗಿ ಸಿಡಿ ಪಡೆಯಿರಿ!

By Mahesh
|

ಬೆಂಗಳೂರು, ಮಾರ್ಚ್ 17: ಕಳೆದ 11 ವರ್ಷಗಳಿಂದ ಬೆಂಗಳೂರಿನ ಸಮಾಜ ಸೇವಕರ ಸಮಿತಿಯು ಮಾರ್ಚ್17 ರ ಡಿ.ವಿ.ಜಿ ಯವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಡಿ.ವಿ.ಜಿ ಯವರ 129ನೇ ಜನ್ಮ ದಿನಾಚರಣೆ ಯನ್ನು ವಿಶೇಷವಾಗಿ ಆಚರಿಸುತ್ತಿದ್ದು ಡಿ.ವಿ.ಜಿ ಕುರಿತು ತಯಾರಿಸಿದ "ವಿರಕ್ತ ರಾಷ್ಟ್ರಕ" ಸಾಕ್ಷ್ಯಚಿತ್ರದ ಲೋಕಾರ್ಪಣೆ ಮಾಡಲಾಗುತ್ತಿದೆ.

ಹಿರಿಯ ಕಥೆಗಾರರು, ವಿಮರ್ಶಕರಾದ ಕೆ.ಸತ್ಯನಾರಾಯಣ ರವರು 'ಡಿ.ವಿ.ಜಿ ಯವರ ಪರಿಕಲ್ಪನೆಯಲ್ಲಿ 'ವಿರಕ್ತ ರಾಷ್ಟ್ರಕ' ಎಂಬುದರ ಕುರಿತು ಮಾತನಾಡಲಿದ್ದಾರೆ ಮತ್ತು ರವಿ ಹೆಗಡೆ, ಸಂಪಾದಕರು, ಉದಯವಾಣಿ ದಿನಪತ್ರಿಕೆ ಇವರು 'ಡಿವಿಜಿ ಮತ್ತು ಪತ್ರಿಕೋದ್ಯಮ' ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

ಈ ಬಾರಿಯ ಕಾರ್ಯಕ್ರಮಗಳು

* ಸಮಿತಿ ಚಿತ್ರೀಕರಿಸಿರುವ 'ಡಿವಿಜಿ ಸಾಕ್ಷ್ಯಚಿತ್ರ' ದ ಸಿ.ಡಿ ಬಿಡುಗಡೆ. ಸಮಾರಂಭಕ್ಕೆ ಹಾಜರಾಗುವ ಎಲ್ಲರಿಗೂ ಉಚಿತವಾಗಿ ಸಿ.ಡಿಯನ್ನು ವಿತರಿಸಲಾಗುವುದು

* ಪಿ. ಶಶಿಧರ, ಕರ್ನಾಟಕ ಸಂಗೀತ ಕಲಾವಿದರಿಂದ ಡಿ.ವಿ.ಜಿ ಯವರ ಕೃತಿಗಳ ಗಾಯನ

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ,.ಬಿ.ಪಿ.ವಾಡಿಯ ರಸ್ತೆ

ದಿನಾಂಕ: 17 ಮಾರ್ಚ್ ಗುರುವಾರ

ಸಮಯ: ಸಂಜೆ 5.30 ಗಂಟೆಗೆ..

 'ಡಿವಿಜಿ ಸಾಕ್ಷ್ಯಚಿತ್ರ' ದ ಸಿ.ಡಿ ಬಿಡುಗಡೆಯಾಗುತ್ತಿದೆ

'ಡಿವಿಜಿ ಸಾಕ್ಷ್ಯಚಿತ್ರ' ದ ಸಿ.ಡಿ ಬಿಡುಗಡೆಯಾಗುತ್ತಿದೆ

ಡಿವಿಜಿ-129 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ನಮ್ಮ ಸಮಾಜ ಸೇವಕರ ಸಮಿತಿ ಚಿತ್ರೀಕರಿಸಿರುವ 'ಡಿವಿಜಿ ಸಾಕ್ಷ್ಯಚಿತ್ರ' ದ ಸಿ.ಡಿ ಬಿಡುಗಡೆಯಾಗುತ್ತಿದೆ. ಈ ಸಾಕ್ಷ್ಯಚಿತ್ರದ ವಿಶೇಷವೆಂದರೆ ಇದರಲ್ಲಿ ಡಿವಿಜಿಯವರ ನೇರ ಶಿಷ್ಯರು, ಅವರ ಹತ್ತಿರದ ಒಡನಾಡಿಗಳು, ಅವರ ಕುಟುಂಬದವರು, ಅವರ ಸಾಹಿತ್ಯ ಪ್ರಚಾರದಲ್ಲಿ ತೊಡಗಿರುವವರು ಹೀಗೆ ಅನೇಕ ಹಿರಿಯರು ಅವರ ಹತ್ತಿರದವರು ಡಿವಿಜಿಯವರ ಬದುಕು ಬರಹದ ಕುರಿತು ಮಾತನಾಡಿದ್ದಾರೆ.

ಡಿವಿಜಿಯವರನ್ನುಬಲ್ಲ ಗಣ್ಯರ ಮಾತುಗಳಿವೆ

ಡಿವಿಜಿಯವರನ್ನುಬಲ್ಲ ಗಣ್ಯರ ಮಾತುಗಳಿವೆ

ಪ್ರೊ. ಜಿ. ವೆಂಕಟಸುಬ್ಬಯ್ಯ, ಎಲ್.ಎಸ್. ಶೇಷಗಿರಿರಾಯರು, ಎಂ.ವಿ. ಕೃಷ್ಣಸ್ವಾಮಿ, ಡಾ.ಬಿ.ಪಿ.ರಾಧಾಕೃಷ್ಣ, ಶಿಷ್ಯರೂ ಒಡನಾಡಿಗಳೂ ಆದ ವಿದ್ವಾನ್ ರಂಗನಾಥ ಶರ್ಮರು, ಡಾ. ಎಸ್.ಆರ್. ರಾಮಸ್ವಾಮಿ, ರಾಮಚೈತನ್ಯ, ಸರಸ್ವತಿ ವೆಂಕಟರಮಣನ್, ಕುಟುಂಬದವರಾದ ಚಂದ್ರಮೌಳಿ, ಮೊಮ್ಮಗ ನಟರಾಜನ್, ಮೊಮ್ಮಗಳು ಚಂಪಕ,

ಅವರ ಸಾಹಿತ್ಯ ಪ್ರಚಾರದಲ್ಲಿ ತೊಡಗಿರುವ ಡಾ.ರಾ. ಗಣೇಶ್, ಎಚ್. ಎಸ್. ಲಕ್ಷ್ಮೀನಾರಾಯಣ ಭಟ್, ಡಾ. ಜಿ.ಬಿ. ಹರೀಶ್, ಶ್ರೀ ಗೋಪಾಲಕೃಷ್ಣೇಗೌಡ ಸೇರಿದಂತೆ 20 ಕ್ಕೂ ಹೆಚ್ಚು ಹಿರಿಯರು, ಡಿವಿಜಿಯವರನ್ನು ಬಲ್ಲವರು ಡಿವಿಜಿ ಬದುಕು- ಬರಹದ ಕುರಿತು ಮಾತನಾಡಿದ್ದಾರೆ.

ಸಾಕ್ಷ್ಯಚಿತ್ರದ ಮುಖ್ಯ ಉದ್ದೇಶವೇನು?

ಸಾಕ್ಷ್ಯಚಿತ್ರದ ಮುಖ್ಯ ಉದ್ದೇಶವೇನು?

ಇಂದಿನ ಯುವಸಮುದಾಯಕ್ಕೆ ಡಿವಿಜಿಯವರನ್ನು ತಲುಪಿಸುವ ಸದುದ್ದೇಶದೊಂದಿಗೆ ಪೂರ್ತಿ ಯುವಕರೇ ಕೂಡಿ ಮಾಡಿರುವ ಪ್ರಯತ್ನ ವಿದು. ಇದರ ಭಾಗವಾಗಿ ನಾವು ಮಾಡಿರುವ ಒಟ್ಟು ಚಿತ್ರೀಕರಣ ಸುಮಾರು ಹದಿನೈದು ತಾಸುಗಳು. 2010 ರಲ್ಲೇ ಇದು ಬಿಡುಗಡೆಗೊಂಡಿದ್ದರೂ ಆರ್ಥಿಕ ಕೊರತೆಯ ಕಾರಣದಿಂದ ಸಿ.ಡಿ ಮಾಡಲು ಸಾಧ್ಯವಾಗಿರಲಿಲ್ಲ. ಡಿವಿಜಿಯವರ ಜನ್ಮದಿನವಾದ ಮಾರ್ಚ್ 17 ರ ಡಿವಿಜಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಇದನ್ನು ಬಿಡುಗಡೆಗೊಳಿಸಿ ಸಮಾಜಕ್ಕೆ ತಲುಪಿಸುವ ಸಂಕಲ್ಪ ಮಾಡಿದ್ದೇವೆ.

ಡಿವಿಜಿ ಅಭಿಮಾನಿಗಳ ಧನಸಹಾಯದ ಬೆಂಬಲ

ಡಿವಿಜಿ ಅಭಿಮಾನಿಗಳ ಧನಸಹಾಯದ ಬೆಂಬಲ

ಸಿ.ಡಿ ತಯಾರಿಕೆಗೆ ಕನಕರಾಜು ಅವರ ನೇತೃತ್ವದ 'ಡಿವಿಜಿ ಬಳಗ' ದ ಡಿವಿಜಿ ಅಭಿಮಾನಿಗಳು ಧನಸಹಾಯದ ಬೆಂಬಲ ನೀಡಿದ್ದಾರೆ. ನಾಳಿನ ಕಾರ್ಯಕ್ರಮಕ್ಕೆ ಬಂದವರಿಗೆ ಸಿ.ಡಿ ಉಚಿತವಾಗಿ ಸಿಗಲಿದೆ. ಆ ಮಹಾಮಹಿಮ ಧೀಮಂತರ ಬದುಕಿನ ಹಿರಿಮೆಯನ್ನು ಅರಿಯಲು ಈ ಸಾಕ್ಷ್ಯಚಿತ್ರ ಸಹಾಯ ಮಾಡುತ್ತದೆ ಎಂಬ ನಂಬಿಕೆ ನಮ್ಮದು. ನಿಮ್ಮ ಹಾರೈಕೆಯಿರಲಿ ಎಂದು ಸಮಾಜ ಸೇವಕರ ಸಮಿತಿಯ ರಾಜ್ ಕುಮಾರ್, ರಾಘವೇಂದ್ರ ಅಗರ್ಖೆಡ್, ರಾಮಚಂದ್ರ ಹೆಗಡೆ ಅವರು ಕೋರಿದ್ದಾರೆ.

ಸಮಾಜ ಸೇವಕರ ಸಮಿತಿ ವಿಳಾಸ

ಸಮಾಜ ಸೇವಕರ ಸಮಿತಿಯ ವಿಳಾಸ ಹಾಗೂ ಪರಿಚಯಾತ್ಮಕ ವಿಡಿಯೋ ತುಣುಕು

DVG Blog link : http://dvgundappa.blogspot.in/

Website: http://thesssglobal.org/

Facebook page : https://www.facebook.com/SamajaSevakaraSamithi/?fref=ts

Contact Numbers:

Rajkumar - 94481 71069

Raghavendra - 98866 83008

Email: sssamaja@gmail.com

Address: Samaja Sevakara Samithi(R)

c/o C.N.Nagaraj, # 171, S.C.Road,

Basavanagudi,

Bengaluru - 560004.

Landmark: Behind Netkallappa circle bus stop. (Next to SBI ATM)

English summary
Padmabhushan Dr. DV Gundappa's Birth anniversary is organised by Samaja Sevakara Samithi, Bengaluru, Writer K Sathyanarayana and Jounalist Ravi Hegde are the chie guest for the function. On this eve a free copy of Documentary CD produced by Samithi will be distributed to public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X