• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಡಿಯೂರಪ್ಪ ಕೊಟ್ಟ ಒಂದು ಭರವಸೆ, ಮುನಿರತ್ನಗೆ ಭರ್ಜರಿ ಜಯ ತಂದುಕೊಟ್ಟಿತೇ?

|

ಬೆಂಗಳೂರು, ನ 11: ಹಲವು ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯದ ಎರಡು ಅಸೆಂಬ್ಲಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಎರಡರಲ್ಲೂ ಬಿಜೆಪಿ ಗೆಲ್ಲುವ ಮೂಲಕ ಶಕ್ತಿ ಪ್ರದರ್ಶನ ಮಾಡಿದೆ.

ಅದರಲ್ಲೂ ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಿರೀಕ್ಷೆಯಲ್ಲಿ ಇದ್ದಿದ್ದರೂ, ಇಷ್ಟು ಲೀಡ್ ನಲ್ಲಿ ಜಯ ಸಿಗಬಹುದು ಎಂದು ನಿರೀಕ್ಷಿಸಿರಲಿಲ್ಲ. ಈ ಮಾತನ್ನು ಖುದ್ದು ಗೆದ್ದ ಅಭ್ಯರ್ಥಿ ಮುನಿರತ್ನ ಕೂಡಾ ಒಪ್ಪಿಕೊಂಡಿದ್ದಾರೆ.

ಹೆಣ್ಣಿನ ಕಣ್ಣೀರು, ಸಿಂಗಲ್ ಟೇಕ್ ವರ್ಕೌಟ್ ಆಗಿಲ್ಲ: ಮುನಿರತ್ನ ನಾಗಾಲೋಟ

ಈ ಉಪಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಯ ಹಿರಿಯ ಮುಖಂಡರ ಪ್ರತಿಷ್ಠೆಗೆ ಕಾರಣವಾಗಿತ್ತು. ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾದ ನಂತರ ಎದುರಾದ ಮೊದಲ ಚುನಾವಣೆ ಇದಾಗಿತ್ತು. ಅಲ್ಲದೇ, ರಾಜರಾಜೇಶ್ವರಿ ನಗರ ಕ್ಷೇತ್ರ ಅವರ ಸಹೋದರ ಡಿ.ಕೆ.ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವಂತದ್ದು ಕೂಡಾ..

ಆರ್.ಆರ್.ನಗರದ ಚುನಾವಣಾ ಉಸ್ತುವಾರಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ, ತಮ್ಮ ಸಂಪುಟ ಸಹದ್ಯೋಗಿ ಆರ್. ಅಶೋಕ್ ಮತ್ತು ಶಾಸಕ ಅರವಿಂದ ಲಿಂಬಾವಳಿಗೆ ವಹಿಸಿದ್ದರು. ಆದರೆ, ಇವೆಲ್ಲವನ್ನೂ ಮೀರಿ, ಯಡಿಯೂರಪ್ಪ ನೀಡಿದ ಭರವಸೆಯೇ ಮುನಿರತ್ನ ಭರ್ಜರಿ ಜಯಕ್ಕೆ ಕಾರಣವಾಯಿತು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಉಪಚುನಾವಣೆಯಲ್ಲಿ ಜೆಡಿಎಸ್ ಅಸ್ತಿತ್ವವನ್ನು ಒಪ್ಪಿಕೊಂಡ ಸಿದ್ದರಾಮಯ್ಯ

ಆರ್.ಆರ್.ನಗರದಲ್ಲಿ ರೋಡ್ ಶೋ

ಆರ್.ಆರ್.ನಗರದಲ್ಲಿ ರೋಡ್ ಶೋ

ಆರ್.ಆರ್.ನಗರದ ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸುತ್ತಾರೋ ಇಲ್ಲವೋ ಎನ್ನುವುದೇ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ದೊಡ್ಡ ಪ್ರಶ್ನೆಯಾಗಿತ್ತು. ಕೊನೆಗೂ, ಪ್ರಚಾರಕ್ಕೆ ಇಳಿದ ಯಡಿಯೂರಪ್ಪ ಮೊದಲು ಶಿರಾದಲ್ಲಿ ನಂತರ ಆರ್.ಆರ್.ನಗರದಲ್ಲಿ ರೋಡ್ ಶೋ ನಡೆಸಿದರು.

ನಟ ದರ್ಶನ್ ರೋಡ್ ಶೋ ನಡೆಸಿದ ಮರುದಿನ

ನಟ ದರ್ಶನ್ ರೋಡ್ ಶೋ ನಡೆಸಿದ ಮರುದಿನ

ನಟ ದರ್ಶನ್ ರೋಡ್ ಶೋ ನಡೆಸಿದ ಮರುದಿನ ಯಡಿಯೂರಪ್ಪ ಪ್ರಚಾರ ಸಭೆ ಮತ್ತು ರೋಡ್ ಶೋ ನಡೆಸಿದ್ದರು. ಆರ್.ಆರ್.ನಗರದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ನಿಂದ ಮಧ್ಯಾಹ್ನ 12.30ಕ್ಕೆ ಬಿಎಸ್ವೈ ಪ್ರಚಾರ ಆರಂಭಿಸಿ ಮತಯಾಚನೆ ನಡೆಸಿದ್ದರು. ಈ ವೇಳೆ, ಯಡಿಯೂರಪ್ಪ ಕ್ಷೇತ್ರದ ಜನತೆಗೆ ಭರವಸೆಯೊಂದನ್ನು ನೀಡಿದ್ದರು.

ಐವತ್ತು ಸಾವಿರ ಅಂತರದಿಂದ ಮುನಿರತ್ನ ಅವರನ್ನು ಗೆಲ್ಲಿಸಿ

ಐವತ್ತು ಸಾವಿರ ಅಂತರದಿಂದ ಮುನಿರತ್ನ ಅವರನ್ನು ಗೆಲ್ಲಿಸಿ

ಬಹಿರಂಗ ಪ್ರಚಾರಕ್ಕೆ ಒಂದು ದಿನ ಮುನ್ನ ಸುಮಾರು ಐದು ತಾಸು ಆರ್.ಆರ್.ನಗರದಲ್ಲಿ ಪ್ರಚಾರ ನಡೆಸಿದ ಯಡಿಯೂರಪ್ಪ, ಮುನಿರತ್ನ ಪರವಾಗಿ ಮತಯಾಚಿಸಿದರು. "ಐವತ್ತು ಸಾವಿರ ಅಂತರದಿಂದ ಮುನಿರತ್ನ ಅವರನ್ನು ಗೆಲ್ಲಿಸಿ, ಅವರು ಗೆದ್ದರೆ, ಅವರು ನಮ್ಮ ಸಂಪುಟದಲ್ಲಿ ಸಚಿವರಾಗುತ್ತಾರೆ. ಕ್ಷೇತ್ರದ ಅಭಿವೃದ್ದಿಗೆ ಇದು ಸಹಕಾರಿಯಾಗಲಿದೆ" ಎಂದು ಯಡಿಯೂರಪ್ಪ ಹೇಳಿದ್ದರು.

ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು

ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು

"ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು. ಇನ್ನುಳಿದ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ನಡೆಯಬೇಕಿದೆ. ಮುನಿರತ್ನ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ, ಅವರನ್ನು ಗೆಲ್ಲಿಸಿ. ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ತಂದು ಮುನಿರತ್ನ ಈ ಕ್ಷೇತ್ರವನ್ನು ಅಭಿವೃದ್ದಿಗೊಳಿಸಲಿದ್ದಾರೆ. ನಿಮ್ಮ ಸಹಕಾರ ಬೇಕು"ಎಂದು ಯಡಿಯೂರಪ್ಪ ಜನತೆಯಲ್ಲಿ ಮನವಿ ಮಾಡಿದ್ದರು.

   ಕುಷನ್ ಸೋಫಾ ಹಾಗೆ ಮಾತಾಡಸತ್ತೆ!! | DK Ravi Mother | Oneindia Kannada

   English summary
   During RR Nagar Bypoll Campaign, CM Yediyurappa Assurance Made Big Impact,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X