ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕಾರಿನಲ್ಲಿ ಉಸಿರುಗಟ್ಟಿ ಮೃತರಾದ ಜೋಡಿ

|
Google Oneindia Kannada News

ಬೆಂಗಳೂರು, ಜೂನ್ 09: ಮನೆಯ ಗ್ಯಾರೇಜ್ ನಲ್ಲಿ ಪಾರ್ಕ್ ಮಾಡಲಾಗಿದ್ದ ಕಾರ್ ವೊಂದರಲ್ಲಿ ಜೋಡಿಯೊಂದು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ.

29 ವರ್ಷದ ಉದ್ಯಮಿಯೊಬ್ಬ 28 ವರ್ಷದ ತನ್ನ ಪ್ರೇಯಸಿಯೊಂದಿಗೆ ಬುಧವಾರ ರಾತ್ರಿ ಮನೆಯ ಗ್ಯಾರೇಜ್ ನಲ್ಲಿದ್ದ ಟೊಯೋಟಾ ಇನ್ನೋವಾ ಕಾರಿನಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಕಾರಿನ ಇಂಜಿನ್ ಸ್ಟಾರ್ಟ್ ಮಾಡಿ, ಎಸಿ ಆನ್ ಮಾಡಲಾಗಿತ್ತು. ನಂತರ ಆಕ್ಸಿಜನ್ ಕೊರತೆ ಉಂತಾಗಿದ್ದಲ್ಲದೆ, ಈ ಜೋಡಿ ಕಾರ್ಬನ್ ಮೋನಾಕ್ಸೈಡ್ ಅನ್ನು ಸೇವಿಸಿದ್ದರಿಂದ ಮೃತರಾಗಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಅಪಾರ್ಟ್ ಮೆಂಟ್ ನೆಲಮಹಡಿಯಲ್ಲಿ ಕಾರಿಗೆ ಬೆಂಕಿ: ತಾಯಿ ಮಗ ಸಜೀವ ದಹನ ಅಪಾರ್ಟ್ ಮೆಂಟ್ ನೆಲಮಹಡಿಯಲ್ಲಿ ಕಾರಿಗೆ ಬೆಂಕಿ: ತಾಯಿ ಮಗ ಸಜೀವ ದಹನ

ಖಾಸಗೀತನಕ್ಕೆ ಧಕ್ಕೆಯಾಗಬಾರದಾದ್ದರಿಂದ ಮೃತ ಜೋಡಿಯ ಕುರಿತು ಮಾಹಿತಿ ನೀಡಲು ಕುಟುಂಬಸ್ಥರು ಮತ್ತು ಪೊಲೀಸರು ನಿರಾಕರಿಸಿದ್ದಾರೆ.

Duo suffocates to death inside parked car Bengaluru

ಇಬ್ಬರು ಜೋಡಿಯ ನಡುವಲ್ಲಿ ಸಂಬಂಧ ಇತ್ತು ಎಂಬ ಶಂಕೆ ವ್ಯಕ್ತವಾಗಿದ್ದು, ರಾತ್ರಿ ಇಬ್ಬರೂ ಕಾರಿನಲ್ಲೇ ನಿದ್ರಿಸಿದ್ದಿರಬಹುದು. ಈ ಸಂದರ್ಭದಲ್ಲಿ ಇಂಜಿನ್ ಆನ್ ಇದ್ದರಿಂದ ಮತ್ತು ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗುತ್ತಿದ್ದರಿಂದ ನಿದ್ದೆಯಲ್ಲೇ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.

English summary
Duo who were sleeping inside parked Toyota Innova car, suffocates to death. The incident took place in Nagarbhavi in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X