ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡುಮಾಂಟ್ ಹೊಸ ಬಗೆಯ ಐಸ್ ಕ್ರೀಮ್ ಸವಿಯಿರಿ: ಬಿಗ್ಬಾಸ್ ಕವಿತಾ

|
Google Oneindia Kannada News

ಬೆಂಗಳೂರು, ಜುಲೈ 19: ಇದುವರೆಗೆ ಮಾರ್ಕೆಟ್‍ನಲ್ಲಿ ವಿವಿಧ ಬಗೆಯ ಮಿಲ್ಕ್ ಶೇಕ್ಸ್, ಡ್ರಿಂಕ್ಸ್ & ಐಸ್‍ಕ್ರೀಮ್‍ಗಳು ಬಂದಿವೆ. ಅದ್ಭುತವಾದ ರುಚಿ ಹಾಗೂ ಸ್ವಚ್ಛವಾದ ಹಾಲಿನ ಪ್ಲೇವರ್ ಹೊಂದಿರುವಂತಹವು ಇಲ್ಲವೆಂದೇ ಹೇಳಬಹುದು. ಇದೀಗ ಆ ಸ್ಥಾನವನ್ನು ತುಂಬಲು ಹೊಚ್ಚಹೊಸ ರುಚಿಯೊಂದಿಗೆ ಐಸ್‍ಕ್ರೀಮ್ ಮತ್ತು ಮಿಲ್ಕ್ ಶೇಕ್‍ಗಳೊಂದಿಗೆ ಮಾರುಕಟ್ಟೆಗೆ ಬಂದಿದೆ ಡುಮಾಂಟ್. ಡುಮಾಂಟ್ ಹೊಸ ಮಳಿಗೆಯನ್ನು ಬಿಗ್ ಬಾಸ್ ಖ್ಯಾತಿಯ ಕವಿತಾ ಅವರು ಉದ್ಘಾಟಿಸಿದರು.

ಮಾವಿನ ಸ್ವಾದ ಸವಿಯಬೇಕಾದರೆ ಮಾವಿನ ಹಣ್ಣನ್ನೇ ತಿನ್ನಬೇಕು. ಆದರ ಬದಲಾಗಿ ಕೃತಕ ಮಾವಿನ ಪ್ಲೇವರ್ ತಿಂದ್ರೆ ಮಾವು ತಿಂದ ಅನುಭವ ಆಗೋದಿಲ್ಲ. ಐಸ್‍ಕ್ರೀಮ್‍ನ್ನ ತಿನ್ನೋವಾಗಲೂ ಇಷ್ಟಪಟ್ಟು ಇದೇ ಪ್ಲೇವರ್ ಬೇಕು ಅಂತ ತಗೊಳ್ತೇವೆ. ಆದ್ರೆ ಅವು ಸಂಪೂರ್ಣ ಆ ಪ್ಲೇವರ್ ನಲ್ಲಿ ಇರೋದಿಲ್ಲ. ಬಹುತೇಕ ಸಲ ಮಿಲ್ಕ್ ಶೇಕ್ ಕುಡಿದಾಗ್ಲೂ ಏನೋ ಕುಡಿದೆವು ಅಂತ ಅಂದ್ಕೊಬೇಕಷ್ಟೇ.

Dumont launches new Flavors of Ice-creams

ಆದ್ರೆ ನೇರವಾಗಿ ರೈತರಿಂದ ಶೇಖರಿಸಿದ ಹಣ್ಣು, ಹಾಲಿನಿಂದ ಐಸ್‍ಕ್ರೀಮ್, ಮಿಲ್ಕ್ ಶೇಕ್ ತಯಾರಿಸಿ ಗ್ರಾಹಕರಿಗೆ ಒದಗಿಸಲು ಮುಂದಾಗಿದೆ ಡುಮಾಂಟ್. ಬೆಂಗಳೂರಿನ ಕೋಡಿಹಳ್ಳಿಯ ಸ್ಟರ್ಲಿಂಗ್ ಮ್ಯಾಕ್ ಹೋಟೆಲ್‍ನಲ್ಲಿ ಡುಮಾಂಟ್ ಐಸ್‍ಕ್ರೀಮ್ ಅಂಡ್ ಮಿಲ್ಕ್ ಶೇಕ್ ಪ್ರೀ ಲಾಂಚ್ ಕಾರ್ಯಕ್ರಮ ನಡೆಯಿತು. ಮ್ಯೂಜಿಕ್ ವಿತ್ ಮಿಲ್ಕ್ ಶೇಕ್ ಹೆಸರಿನಲ್ಲಿ ನಡೆದ ವಿನೂತನ ಕಾರ್ಯಕ್ರಮ ನಗರದ ಜನತೆಯನ್ನ ಆಕರ್ಷಿಸಿತು.

Dumont launches new Flavors of Ice-creams

ಡುಮಾಂಟ್ ಐಸ್‍ಕ್ರೀಮ್ ಅಂಡ್ ಮಿಲ್ಕ್ ಶೇಕ್ ಪ್ರೀ ಲಾಂಚ್ ಕಾರ್ಯಕ್ರಮದಲ್ಲಿ ಸಂಸ್ಥೆ ಎಂಡಿ ಸುನೀಲ್ ಮಾತನಾಡಿ, "ದಕ್ಷಿಣ ಭಾರತದಲ್ಲಿ ಎಲ್ಲೂ ಸಿಗದ ಸುಮಾರು 15 ಬಗೆಯ ಪ್ಲೇವರ್ ಗಳನ್ನು ಡುಮಾಂಟ್ ಪರಿಚಯಿಸುತ್ತಿದೆ. ಒಂದ್ಕಡೆ ಐಸ್ ಕ್ರೀಮ್, ಮತ್ತೊಂದ್ಕಡೆ ಮಿಲ್ಕ್ ಶೇಕ್ ಸಹ ತಯಾರಿಸುತ್ತಿರೋ ಸಂಸ್ಥೆಗಳು ಗುಣಮಟ್ಟ ಕಾಯ್ದುಕೊಳ್ತಿರೋ ಬೆರಳೆಣಿಕೆಯಷ್ಟು ಸಂಸ್ಥೆಗಳಲ್ಲಿ ಡುಮಾಂಟ್ ಸಹ ಒಂದು. ರುಚಿ, ಶುಚಿ, ಕ್ವಾಲಿಟಿ, ಕ್ವಾಂಟಿಟಿ ವಿಷಯದಲ್ಲಿ ಎಳಷ್ಟೂ ರಾಜಿಯಾಗದೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಡುಮಾಂಟ್. ಬೆಂಗಳೂರು, ಹೈದರಾಬಾದ್ ಮತ್ತು ವಿಜಯವಾಡದಲ್ಲಿ ಇದೇ ತಿಂಗಳ 19 ರಿಂದ ಸ್ಟೋರ್ ಗಳು ಗ್ರಾಹಕರ ಸೇವೆಗೆ ಲಭ್ಯವಿರಲಿವೆ" ಎಂದರು.

English summary
Dumont launched new Flavors at Sterling MAC Hotel, HAL old airport rd, kodihalli, Bengaluru on 17th July 2019. Bigg Boss Kannada fame Kavitha inaugurated the new shop and flavors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X