ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 32 ವಿಮಾನಗಳ ಹಾರಾಟಕ್ಕೆ ರಾಜ್ಯ ಸರ್ಕಾರ ತಡೆ

|
Google Oneindia Kannada News

ಬೆಂಗಳೂರು, ಮೇ 25: ಕರ್ನಾಟಕ ಸರ್ಕಾರವು ಹಾಕಿರುವ ಕೆಲವು ನಿರ್ಬಂಧಗಳಿಂದಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 32 ವಿಮಾನಗಳ ಹಾರಾಟ ರದ್ದಾಗಿದೆ.

Recommended Video

ಲಾಕ್ ಡೌನ್ ನಲ್ಲಿ ಮಧುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿ!! | Exercise is must in Lockdown | Oneindia Kannada

ಚೆನ್ನೈ, ಮಂಗಳೂರು, ವಿಶಾಖಪಟ್ಟಣಂ, ಕೊಲ್ಕತ್ತ, ಗೋವಾ, ಇಂದೋರ್, ಹೈದರಾಬಾದ್,ಮುಂಬೈ, ವಿಜಯವಾಡ, ಜೈಪುರಕ್ಕೆ ತೆರಳಬೇಕಿದ್ದ ವಿಮಾನಗಳು ರದ್ದಾಗಿವೆ.

ಕಲಬುರಗಿ-ಬೆಂಗಳೂರು ವಿಮಾನ ಸೇವೆ ಪುನರಾರಂಭಕಲಬುರಗಿ-ಬೆಂಗಳೂರು ವಿಮಾನ ಸೇವೆ ಪುನರಾರಂಭ

ಏರ್‌ಪೋರ್ಟ್ ಮಾಹಿತಿ ಪ್ರಕಾರ ಸಾಕಷ್ಟು ನಗರಗಳಿಗೆ ಇಲ್ಲಿಂದ ವಿಮಾನ ಹಾರಾಟ ನಡೆಸಲಿದೆ ಆದರೆ ಅಲ್ಲಿಂದ ಬರುವ ವಿಮಾನಗಳಿಗೆ ತಡೆ ಹೇರಿದೆ.

Due To Restrictions By Karnataka Government 32 Flights From KIAL Cancelled

ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಅಂತಿಮ ಹಂತದಲ್ಲಿ ತಡೆಹಿಡಿಯಲಾಯಿತು.

ಪ್ರಯಾಣಿಕರು ಬೋರ್ಡಿಂಗ್ ಆಗುವಾಗ ವಿಮಾನ ಹಾರಾಟಕ್ಕೆ ನಿರ್ಬಂಧವಿರುವುದಾಗಿ ಮಾಹಿತಿ ನೀಡಲಾಗಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಬೋರ್ಡಿಂಗ್ ಪಾಸ್ ಸ್ಕ್ಯಾನ ಮಾಡುವಾಗ ನಿಮ್ಮ ಬೋರ್ಡಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿದ್ದಾರೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಪ್ರಯಾಣಿಕರು ಹೇಳಿದ್ದಾರೆ.
ಕೊರೊನಾವೈರಸ್‌ ಲಾಕ್‌ಡೌನ್‌ನಿಂದಾಗಿ ನಿಂತಿದ್ದ ವಿಮಾನ ಹಾರಾಟ ಸತತ 62 ದಿನಗಳ ನಿರ್ಬಂಧದ ಬಳಿಕ ದೇಶೀಯ ವಿಮಾನಗಳ ಹಾರಾಟ ಇಂದು ಅಂದರೆ ಮೇ 25ರಿಂದ ದೇಶಾದ್ಯಂತ ಆರಂಭಗೊಂಡಿದೆ.

ರೆಡ್ ಝೋನ್ ಚೆನ್ನೈನಿಂದಲೇ ಬಂತು ಬೆಂಗಳೂರಿಗೆ ಮೊದಲ ವಿಮಾನ ರೆಡ್ ಝೋನ್ ಚೆನ್ನೈನಿಂದಲೇ ಬಂತು ಬೆಂಗಳೂರಿಗೆ ಮೊದಲ ವಿಮಾನ

ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ತಮ್ಮ ರಾಜ್ಯಕ್ಕೆ ಸಧ್ಯಕ್ಕೆ ವಿಮಾನ ಹಾರಾಟ ಬೇಡ ಎಂದು ಹೇಳಿವೆ.ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಹೊರ ಹೋಗುವ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ.

ಫ್ಲೈಟ್ ಕ್ರ್ಯೂ ಸೇರಿದಂತೆ ಯಾರಿಗೂ ಪಿಪಿಇ ಕಿಟ್ ಇನ್ನೂ ಲಭ್ಯವಾಗಿಲ್ಲ. ರೆಡ್‌ಝೋನ್ ಚೆನ್ನೈಯಿಂದ ಮೊದಲ ವಿಮಾನ ಬೆಂಗಳೂರಿಗೆ ಬಂದಿದೆ. ಬೆಂಗಳೂರಿನಿಂದ ಬೆಳಗಾವಿಗೆ ಮೊದಲ ವಿಮಾನ ಹಾರಾಟ ನಡೆಸಿದೆ.

English summary
As many as 32 flights flying out of Bengaluru have been cancelled due to restrictions imposed by the Karnataka government. As per reports, flights from Chennai, Mangalore, Vishakapatnam, Kolkata, Goa, Indore, Hyderabad, Mumbai, Vijayawada, Jaipur amongst other cities got cancelled on Monday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X