ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಬೈ ಮಳೆ: ಬೆಂಗಳೂರು ಏರ್‌ಪೋರ್ಟ್‌ಗೆ ಕೆಲವು ವಿಮಾನಗಳು ಡೈವರ್ಟ್

|
Google Oneindia Kannada News

ಬೆಂಗಳೂರು, ಜು.2: ಮುಂಬೈನಲ್ಲಿ ಕಳೆದ ಒಂದು ವಾರದಿಂದ ಆರಂಭವಾಗಿರುವ ಮಳೆ ಪ್ರವಾಹವಾಗಿ ಪರಿವರ್ತನೆಯಾಗುತ್ತಿದೆ. ಹಾಗಾಗಿ ಮುಂಬೈಗೆ ತೆರಳಬೇಕಿದ್ದ ಕೆಲ ವಿಮಾನಗಳು ಮಾರ್ಗ ಬದಲಾಯಿಸಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

Due to Mumbai rain flights have been diverted to KIA

ಮತ್ತೆ 'ಮಹಾ' ಕುಸಿತ, 12 ಮಂದಿ ಸಾವು,13 ಮಂದಿಗೆ ಗಂಭೀರ ಗಾಯಮತ್ತೆ 'ಮಹಾ' ಕುಸಿತ, 12 ಮಂದಿ ಸಾವು,13 ಮಂದಿಗೆ ಗಂಭೀರ ಗಾಯ

ಮುಂಬೈನಲ್ಲಿ ರೈಲ್ವೆ ನಿಲ್ದಾಣ, ಏರ್‌ಪೋರ್ಟ್‌, ರಸ್ತೆಗಳು ಎಲ್ಲವೂ ನೀರಿನಿಂದ ತುಂಬಿ ಹೋಗಿದೆ. ಮತ್ತು ಹೆಚ್ಚಿನ ಮಳೆ ಇರುವ ಕಾರಣ ವಿಮಾನ ಹಾರಾಟವೂ ಕಷ್ಟವಾಗಿರುವುದರಿಂದ ಮಾರ್ಗ ಬದಲಾವಣೆ ಮಾಡಲಾಗಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಟಿಕೆಟ್ ಕೌಂಟರ್ ಕೂಡ ಬಂದ್ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಏರ್‌ಪೋರ್ಟ್‌ ಸಂಪರ್ಕಿಸಬೇಕಿದೆ.

ಈ ಕುರಿತು ಖುದ್ದು ಬೆಂಗಳೂರು ಏರ್‌ಪೋರ್ಟ್ ಅಧಿಕಾರಿಗಳೇ ಟ್ವೀಟ್ ಮಾಡಿದ್ದು, ಮುಂಬೈನಲ್ಲಿ ಭಾರಿ ಮಳೆಯಿರುವುದರಿಂದ ಹಲವು ವಿಮಾನಗಳು ಬೆಂಗಳೂರು ಏರ್‌ಪೋರ್ಟ್‌ಗೆ ಮಾರ್ಗ ಬದಲಾಯಿಸಿವೆ.

ಪ್ರಯಾಣಿಕರ ಅಡಚಣೆಗಾಗಿ ವಿಷಾಧಿಸುತ್ತೇವೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮುಂಬೈನಲ್ಲಿ ಈಗಾಗಲೇ ರೈಲು ಸಂಚಾರ ಸ್ಥಗಿತಗೊಳಿಸಲಾಗಿದ್ದು, ಶಾಲಾ ಕಾಲೇಜು, ಕಚೇರಿಗಳಿಗೂ ರಜೆ ಘೋಷಿಸಲಾಗಿದೆ.

ನಿತ್ಯ ಮಳೆಯಿಂದಾಗಿ ಕಟ್ಟಡ ಕುಸಿತ ಇನ್ನಿತರೆ ಅವಘಡಗಳು ಸಂಭವಿಸುತ್ತಲೇ ಇವೆ. ಜನರು ಮನೆಯಿಂದ ಹೊರ ಬರಲಾರದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಮನೆಯಿಂದ ರಸ್ತೆಗಿಳಿಸದೆ ಗಂಟಲು ವರೆಗೂ ನೀರು ನಿಂತಿದೆ. ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ.

English summary
Due to heavy rainin Mumbai many flights have been diverted to Kempegowda international Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X