ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮಾರ್ಚ್‌ನಂತೆ ಏಪ್ರಿಲ್‌ನಲ್ಲೂ ಶೇ.50ರಷ್ಟು ತಗ್ಗಿದ ವಾಯುಮಾಲಿನ್ಯ

|
Google Oneindia Kannada News

ಬೆಂಗಳೂರು, ಮೇ 28: ಕೊರೊನಾವೈರಸ್ ಹರಡುವ ಭೀತಿಯಿಂದ ಬೆಂಗಳೂರಿನ ಜನ ಮನೆಯಲ್ಲಿಯೇ ಇದ್ದಾರೆ. ಈ ಲಾಕ್‌ಡೌನ್ ಪರಿಸರಕ್ಕೆ ಮಾತ್ರ ವರವಾಗಿದೆ. ಪರಿಣಾಮ ವಾಯುಮಾಲಿನ್ಯ ಶೇ.50ರಷ್ಟು ಕಡಿಮೆಯಾಗಿದೆ.

ಮಾರ್ಚ್‌ನಂತೆಯೇ ಏಪ್ರಿಲ್‌ನಲ್ಲಿ ಕೂಡ ಬೆಂಗಳೂರಿನ ವಾಯುಮಾಲಿನ್ಯದಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು. ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳ ವಾಯುಮಾಲಿನ್ಯ ಶೇ.50ರಷ್ಟು ಕುಸಿತವಾಗಿದೆ.

ಬೆಂಗಳೂರು: ದಾಖಲೆ ಮಟ್ಟಕ್ಕೆ ಕುಸಿತಕಂಡ ವಾಯು ಮಾಲಿನ್ಯಬೆಂಗಳೂರು: ದಾಖಲೆ ಮಟ್ಟಕ್ಕೆ ಕುಸಿತಕಂಡ ವಾಯು ಮಾಲಿನ್ಯ

ಈ ಬಗ್ಗೆ ಎನ್ ಜಿಒ ಗ್ರೀನ್ ಪೀಸ್ ವರದಿ ನೀಡಿದ್ದು, ಬೆಂಗಳೂರಿನಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ಏಪ್ರಿಲ್ ತಿಂಗಳ ವಾಯುಮಾಲಿನ್ಯ ಸರಾಸರಿಯಲ್ಲಿ ಬರೊಬ್ಬರಿ ಶೇ.50ರಷ್ಟು ಕುಸಿತ ಕಂಡುಬಂದಿದೆ.

Due To Lockdown Air pollution Reduced In Bengaluru in April

ಎನ್ ಜಿಒ ಗ್ರೀನ್ ಪೀಸ್ ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು. ಚೆನ್ನೈ, ಹೈದರಾಬಾದ್ ನ ವಾಯುಮಾಲಿನ್ಯದ ಕುರಿತು ಕೇಂದ್ರೀಯ ಮಾಲೀನ್ಯ ನಿಯಂತ್ರಣ ಇಲಾಖೆಯ ದತ್ತಾಂಶಗಳನ್ನು ಆಧರಿಸಿ 2019 ಮತ್ತು 2020 ಏಪ್ರಿಲ್ ತಿಂಗಳ ವರದಿ ತಯಾರಿಸಿದೆ. ವರದಿಯಲ್ಲಿ ಏಪ್ರಿಲ್ ತಿಂಗಳ ವಾಯುಮಾಲಿನ್ಯ ಪ್ರಮಾಣ ಶೇ.50ರಷ್ಚು ಕಡಿತವಾಗಿದೆ.

ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ದೇಶದ ಪ್ರಮುಖ ನಗರಗಳಲ್ಲಿನ ಕೈಗಾರಿಕಗಳು ಸ್ಥಬ್ಧವಾಗಿದ್ದು, ವಾಹನಗಳ ಸಂಖ್ಯೆ ಕೂಡ ಗಣನೀಯವಾಗಿ ಇಳಿಕೆಯಾಗಿದೆ. ಇದಲ್ಲದೆ ವಿಮಾನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಇದರಿಂದ ನೈಟ್ರೋಜನ್ ಡೈಆಕ್ಸೈಡ್ (NO2) ಮತ್ತು ಪಿಎಂ2.5 ಪ್ರಮಾಣ ತಗ್ಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2019ರ ಏಪ್ರಿಲ್ ನಲ್ಲಿ NO2 ಪ್ರಮಾಣ 33.36mcg/m3ರಷ್ಟಿತ್ತು. 12.00mcg/m3ಯಷ್ಟಿದೆ. ಪಿಎಂ 2.5 ಪ್ರಮಾಣ 2019ರ ಏಪ್ರಿಲ್ ನಲ್ಲಿ 51.05mcg/m3ರಷ್ಟಿತ್ತು. 2020ರ ಏಪ್ರಿಲ್ ನಲ್ಲಿ 24.72mcg/m3ರಷ್ಟಿದೆ ಎಂದು ಹೇಳಲಾಗಿದೆ.

ಇಂಧನ ಉರಿಸಿದಾಗ ಬಿಡುಗಡೆಯಾಗುವ ನೈಟ್ರೋಜನ್ ಡೈಆಕ್ಸೈಡ್ (NO2) ಮತ್ತು ಪಿಎಂ2.5 ಪ್ರಮಾಣದಲ್ಲಿ ಶೇ.50ರಷ್ಟು ಕುಸಿತ ಕಂಡುಬಂದಿದೆ. ಈ ಪೈಕಿ ಪಿಎಂ 2.5 ಮಾನವನ ಉಸಿರಾಟದ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ.

English summary
The air quality over Bengaluru has improved sharply, with air pollutants cut by more than half in April, when the lockdown was in force, according to an analysis of air pollution data by NGO Greenpeace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X