ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಬ್ಬಿಂಗ್ ಮೇಲಿದ್ದ ನಿಷೇಧ ತೆರವು, ಮುಂದೇನು?

By Mahesh
|
Google Oneindia Kannada News

ಬೆಂಗಳೂರು, ಫೆ. 12: ಪರಭಾಷೆಯಲ್ಲಿನ ಜ್ಞಾನ ಮತ್ತು ಮನರಂಜನೆಯನ್ನು ಕನ್ನಡಿಗರು ಕನ್ನಡದಲ್ಲಿ ಪಡೆಯಲಾಗದಂತೆ ಮಾಡಿದ್ದ ಡಬ್ಬಿಂಗ್ ಮೇಲಿದ್ದ ನಿಷೇಧವನ್ನು ಭಾರತೀಯ ಸ್ಪರ್ಧಾ ಆಯೋಗ ಈಗಾಗಲೇ ತೆರವುಗೊಳಿಸಿದೆ. ಮುಂದೇನು? ಎಂಬ ಪ್ರಶ್ನೆಗೆ ಈ ಬಾರಿಯ ತಿಂಗಳ ಅಂಗಳ ಕಾರ್ಯಕ್ರಮದಲ್ಲಿ ಉತ್ತರ ಸಿಗಲಿದೆ.

ಕಾನೂನು ಬದ್ಧವಾಗಿ ಡಬ್ಬಿಂಗ್ ಮಾಡಬೇಕು ಅನ್ನುವವರಿಗೆ ಈಗ ಎಲ್ಲ ಆಯ್ಕೆಯೂ ಲಭ್ಯವಿದೆ. ಕನ್ನಡವನ್ನು ಕಟ್ಟಿ ಹಾಕಿ, ಕನ್ನಡಿಗರು ಕನ್ನಡದಿಂದಲೇ ದೂರವಾಗುವಂತೆ ಮಾಡುತ್ತಿದ್ದ ಡಬ್ಬಿಂಗ್ ಮೇಲಿನ ನಿಷೇಧ ಇನ್ನೇನು ಕೆಲ ಕಾಲದಲ್ಲಿ ತೆರವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಕಾನೂನು ಕೈಗೆತ್ತಿಕೊಂಡಾದರೂ ಡಬ್ಬಿಂಗ್ ತಡೆಯುತ್ತೇವೆ ಅನ್ನುವವರ ಅಬ್ಬರವೂ ಕುಗ್ಗಿದೆ.[ನಿರ್ಮಾಪಕರ ಹೋರಾಟದ ಹಿಂದಿನ ಲೆಕ್ಕಾಚಾರನೇ ಬೇರೆ!]

Dubbing ban likely to be revoked soon an event to debate

ಡಬ್ಬಿಂಗ್ ಹೊಸ್ತಿಲಲ್ಲಿ ಕನ್ನಡ ಸಮಾಜ ನಿಂತಿರುವ ಈ ಹೊತ್ತಿನಲ್ಲಿ ಡಬ್ಬಿಂಗ್ ಯಾಕೆ ಕನ್ನಡಕ್ಕೆ ಬೇಕು, ಭಾಷಾ ಹಮ್ಮುಗೆಯ ಒಂದು ಸಾಧನವಾಗಿ ಡಬ್ಬಿಂಗ್ ಅನ್ನು ಹಲವು ನುಡಿ ಜನಾಂಗಗಳು ಬಳಸಿಕೊಂಡಿರುವ ಬಗೆ ಹೇಗಿದೆ? ಮುಂದಿನ ದಿನಗಳಲ್ಲಿ ಡಬ್ಬಿಂಗ್ ಸಾಧ್ಯ ಮಾಡಬಹುದಾದ ಕನ್ನಡದ ಸಾಧ್ಯತೆಗಳೇನು? ಡಬ್ಬಿಂಗ್ ಅನ್ನು ಕನ್ನಡವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬಳಸಿಕೊಳ್ಳುವ ಬಗೆಯೇನು? [ಸಿನಿಮಾ ಡಬ್ಬಿಂಗ್‌ ಕಲೆಯ ಭ್ರಷ್ಟಾಚಾರವಷ್ಟೇ: ಭೈರಪ್ಪ]

ಮುಂತಾದ ಪ್ರಶ್ನೆಗಳ ಸುತ್ತ ಈ ಬಾರಿಯ ತಿಂಗಳ ಅಂಗಳ ಕಾರ್ಯಕ್ರಮ ನಡೆಯಲಿದ್ದು, "ಡಬ್ಬಿಂಗ್ - ಕನ್ನಡಿಗರ ಆಯ್ಕೆ ಸ್ವಾತಂತ್ರ್ಯದ ಹಕ್ಕೊತ್ತಾಯ" ಹೊತ್ತಗೆಯ ಬರಹಗಾರರಾದ ಆನಂದ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. [ಡಬ್ಬಿಂಗ್ ವಿರೋಧಿಗಳಿಗೆ ಸಾಮಾನ್ಯ ಪ್ರೇಕ್ಷಕನ ಪ್ರಶ್ನೆ]

ಫೆಬ್ರವರಿ 14ರ ಬೆಳಿಗ್ಗೆ 11ರಿಂದ 12 ವರೆಗೆ ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಹೆಚ್ಚಿನ ವಿವರಕ್ಕೆ ಫೇಸ್ ಬುಕ್ಕಿನಲ್ಲಿರುವ ಇವೆಂಟ್ ಕೊಂಡಿ ನೋಡಿ.

English summary
Dubbing ban likely to be revoked soon as competition commission of India has taken back dubbing ban in Kannada film Industry. Now, Kannadigas can demand freedom of viewership, Anand will present a book during the event scheduled on Feb 14, 2016 at Total Kannada Shop, Jayanagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X