ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆಯ ಸೂಟ್ ತಲುಪಿಸದ ಕೊರಿಯರ್‌ ಕಂಪನಿಗೆ ದಂಡ!

|
Google Oneindia Kannada News

ಬೆಂಗಳೂರು,ಆಗಸ್ಟ್‌ 08: ಹೈದರಾಬಾದ್‌ನಿಂದ ಬೆಂಗಳೂರಿಗೆ ಮದುವೆ ಸೂಟ್ ತಲುಪಿಸಲು ವಿಫಲವಾದ ಖಾಸಗಿ ಕೊರಿಯರ್ ಸೇವೆ ಡಿಟಿಡಿಸಿ ಎಕ್ಸ್‌ಪ್ರೆಸ್ ಲಿಮಿಟೆಡ್‌ಗೆ ದಂಡ ವಿಧಿಸಲಾಗಿದೆ.

ಬೆಂಗಳೂರು (ನಗರ) ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಕೊರಿಯರ್ ಕಂಪನಿಗೆ ಶೇಕಡಾ 10 ಬಡ್ಡಿಯ ಜೊತೆಗೆ ಸುಮಾರು 12,000 ಪಾವತಿಸಲು ಆದೇಶಿಸಿದೆ ಎಂದು ವರದಿ ಹೇಳಿದೆ.

ಸಿದ್ದರಾಜು ಎಂಬುವವರು ಬೆಂಗಳೂರಿನ ಪ್ರಮೋದ್ ಲೇಔಟ್‌ನ ವ್ಯಕ್ತಿ. ಸಿದ್ದರಾಜು ಮತ್ತು ಹೈದರಾಬಾದ್‌ನ ಮನೀಶ್ ಶರ್ಮಾ ಸಹೋದ್ಯೋಗಿಗಳಾಗಿದ್ದು, 2017ರಲ್ಲಿ ಮನೀಶ್ ಶರ್ಮಾ ಮದುವೆ ಹೈದರಾಬಾದ್​ನಲ್ಲಿ ನಿಶ್ಚಯವಾಗಿತ್ತು.

 DTDC Courier Company fined for not delivering wedding suit

ಈ ವೇಳೆ ಗೆಳೆಯನಿಗೆ ಸೂಟ್ ಉಡುಗೊರೆಯಾಗಿ ನೀಡುತ್ತೇನೆ ಎಂದು ಸಿದ್ದರಾಜು ಮಾತು ನೀಡಿದ್ದರು. ಡಿಟಿಡಿಸಿ ಮೂಲಕ ತನ್ನ ಸ್ನೇಹಿತರಿಗೆ ಮದುವೆಯ ಸೂಟ್ ಕಳುಹಿಸಿದ್ದಾರೆ. ಸ್ನೇಹಿತನ ಮದುವೆಯನ್ನು ಡಿಸೆಂಬರ್ 2019ಕ್ಕೆ ನಿಗದಿಪಡಿಸಲಾಗಿತ್ತು ಆದರೆ ಡಿಟಿಡಿಸಿ ಕೊರಿಯರ್‌ ಅವರು ಪ್ಯಾಕೇಜ್ ತಲುಪಿಸಲು ವಿಫಲರಾದರು.

ಕಾಣ ಕೇಳಿ ಸಂಪರ್ಕಿಸಿದಾಗ ಡಿಟಿಡಿಸಿಗೆ ಕಳುಹಿಸಿದ್ದ ವಸ್ತು ಕಳೆದುಹೋಗಿದೆ ಅಥವಾ ಕಳ್ಳತನವಾಗಿದೆ ಎಂದು ಹೇಳಿದರು. ಈ ಸಮಸ್ಯೆಯು ದೇವರ ಮಹಿಮೆಯಾಗಿರಬಹುದು. ಹೀಗಾಗಿ ಗ್ರಾಹಕರಿಗೆ ಯಾವುದೇ ಮರುಪಾವತಿ ಅಥವಾ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಡಿಟಿಡಿಸಿ ಹೇಳಿದೆ.

ಗಣೇಶ್ ಚತುರ್ಥಿ; ವಾರ್ಡ್‌ಗೊಂದು ಗಣೇಶ ಎಂಬ ನಿಯಮ ವಾಪಸ್ಗಣೇಶ್ ಚತುರ್ಥಿ; ವಾರ್ಡ್‌ಗೊಂದು ಗಣೇಶ ಎಂಬ ನಿಯಮ ವಾಪಸ್

ಬಳಿಕ ಸಿದ್ದೇಶ ದೂರು ಸಲ್ಲಿಸಿದ್ದು, ಗ್ರಾಹಕ ಆಯೋಗವು ಕೊರಿಯರ್ ಕಂಪನಿಗೆ 11,495 ಪಾವತಿಸಲು ಸೂಚಿಸಿತು. ಅಲ್ಲದೆ ದಾವೆಯ ವೆಚ್ಚ 10 ಪ್ರತಿಶತದಷ್ಟು ವಾರ್ಷಿಕ ಬಡ್ಡಿಯೊಂದಿಗೆ ಪೂರ್ವಾನ್ವಯವಾಗಿ ಅನ್ವಯಿಸುವಂತೆ ಅದು ಹೇಳಿತು. 500 ರುಪಾಯಿ ಬುಕಿಂಗ್ ಶುಲ್ಕವನ್ನು ಮರುಪಾವತಿಸುವಂತೆ ಕಂಪನಿಗೆ ಸೂಚಿಸಲಾಯಿತು.

 DTDC Courier Company fined for not delivering wedding suit

ಇದಲ್ಲದೆ, ಮರುಪಾವತಿಯ ಜೊತೆಗೆ ಆಯೋಗವು ಡಿಟಿಡಿಸಿಗೆ 25,000 ಪರಿಹಾರ ಶುಲ್ಕ ಮತ್ತು 10,000 ವ್ಯಾಜ್ಯ ಶುಲ್ಕವನ್ನು ಪಾವತಿಸಲು ಆದೇಶ ನೀಡಿದೆ.

English summary
DTDC Express Limited, a private courier service, has been fined for failing to deliver a wedding suit from Hyderabad to Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X