• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ಸ್ ಜಾಲದ ಹಿಂದಿನ ರಾಜಕಾರಣಿ ಯಾರು? ನಟಿ ರಮ್ಯಾ ಪ್ರಶ್ನೆಗೆ ಪೊಲೀಸರು ಉತ್ತರಿಸುವರೇ?

|

ಬೆಂಗಳೂರು, ಸೆ 9: ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿರುವ ಡ್ರಗ್ಸ್ ಪ್ರಕರಣ, ಇನ್ನೋರ್ವ ನಟಿ ಸಂಜನಾ ಗಲ್ರಾನಿಯ ಬಂಧನವಾಗುವ ಮೂಲಕ, ಮತ್ತೊಂದು ಆಯಾಮವನ್ನು ಪಡೆದುಕೊಂಡಿದೆ.

   Congress ನಾಯಕರ ಜೊತೆ Ragini ಹಾಗು Sanjjanaa - BJP tweet | Oneindia Kannada

   ಈಗಾಗಲೇ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಯ ಬಂಧನವಾಗಿದೆ. ಈ ನಡುವೆ, ನಟಿ ಮತ್ತು ಮಾಜಿ ಎಐಸಿಸಿ ಸಾಮಾಜಿಕ ತಾಣದ ಮುಖ್ಯಸ್ಥೆ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಈ ವಿಚಾರದಲ್ಲಿ ಟ್ವೀಟ್ ಒಂದನ್ನು ಮಾಡಿದ್ದಾರೆ.

   ರಾಹುಲ್ ಗಾಂಧಿ ವಿರುದ್ಧ ಮಾಜಿ ಸಂಸದೆ ರಮ್ಯಾ ಕಿಡಿ!

   ಇಂಗ್ಲಿಷ್ ಪತ್ರಿಕೆಯ ವರದಿಯೊಂದನ್ನು ಉಲ್ಲೇಖಿಸುತ್ತಾ, ಮರಿಜುವಾನಾ (ಮಾದಕ ಪದಾರ್ಥ) ಹೊಂದಿದ್ದ ಟ್ರಕ್ ಯಾವ ರಾಜಕಾರಣಿಯದ್ದು ಎಂದು ಬೆಂಗಳೂರು ಪೊಲೀಸ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿ ರಮ್ಯಾ ಟ್ವೀಟ್ ಮಾಡಿದ್ದಾರೆ.

   ಭಿನ್ನಮತೀಯರ ಬಗ್ಗೆ ಕಿಡಿಕಾರಿದ ಮಾಜಿ ಸಂಸದೆ ರಮ್ಯಾ

   ಈ ನಡುವೆ, ನಿನ್ನೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದ ಸಂಜನಾ ವಿಚಾರಣೆಯ ವೇಳೆ, ಹಲವು ಸೆಲೆಬ್ರಿಟಿಗಳ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ರಮ್ಯಾ ಮಾಡಿರುವ ಟ್ವೀಟ್ ಏನು?

   ಸಿಸಿಬಿ ಪೊಲೀಸರ ಭರ್ಜರಿ ಬೇಟೆ

   ಸಿಸಿಬಿ ಪೊಲೀಸರ ಭರ್ಜರಿ ಬೇಟೆ

   ಆಗಸ್ಟ್ ಕೊನೆಯ ವಾರದಲ್ಲಿ ಸಿಸಿಬಿ ಟ್ರಕ್ ವೊಂದನ್ನು ವಶ ಪಡಿಸಿಕೊಂಡಿತ್ತು. ಅದರಲ್ಲಿ ಒಂದು ಕೋಟಿ ಮೌಲ್ಯದ 204ಕೆಜಿ ಮರಿಜುವಾನಾ ಡ್ರಗ್ಸ್ ಇತ್ತು. ಬೆಂಗಳೂರು ಹೊರ ವಲಯದ ದೇವನಹಳ್ಳಿಯಲ್ಲಿ ಈ ಘಟನೆ ನಡೆದಿತ್ತು ಮತ್ತು ಈ ಸಂಬಂಧ ಮೂವರನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು.

   ರಮ್ಯಾ ಟ್ವೀಟ್

   ರಮ್ಯಾ ಟ್ವೀಟ್

   ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಿಂದ, ಮರಿಜುವಾನಾ ತುಂಬಿಕೊಂಡು ಬಂದಿದ್ದ ಟ್ರಕ್ ಇದಾಗಿತ್ತು ಮತ್ತು ಇದು ಬೇನಾಮಿ ಹೆಸರನಲ್ಲಿರುವ ಪ್ರಮುಖ ರಾಜಕಾರಣಿಯದ್ದು ಎಂದು ಆಂಗ್ಲ ಪತ್ರಿಕೆಯ ಲೇಖನದಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಫಾರ್ವರ್ಡ್ ಮಾಡಿ ರಮ್ಯಾ ಟ್ವೀಟ್ ಮಾಡಿದ್ದಾರೆ.

   ಯಾಕೆ ಲೇಖನದಲ್ಲಿ ಆ ರಾಜಕಾರಣಿಯ ಹೆಸರನ್ನು ಉಲ್ಲೇಖಿಸಿಲ್ಲ

   ಯಾಕೆ ಲೇಖನದಲ್ಲಿ ಆ ರಾಜಕಾರಣಿಯ ಹೆಸರನ್ನು ಉಲ್ಲೇಖಿಸಿಲ್ಲ

   ವಶ ಪಡಿಸಿಕೊಳ್ಳಲಾಗಿರುವ ಟ್ರಕ್ ಪ್ರಮುಖ ರಾಜಕಾರಣಿಯವರದ್ದು ಎಂದು ಬರೆಯಲಾಗಿದೆ, ಯಾಕೆ ಲೇಖನದಲ್ಲಿ ಆ ರಾಜಕಾರಣಿಯ ಹೆಸರನ್ನು ಉಲ್ಲೇಖಿಸಿಲ್ಲ. ಯಾರು ಆ ರಾಜಕಾರಣಿ, ಆತನನ್ನು ಬಂಧಿಸಲಾಯಿತೇ ಎಂದು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ರಮ್ಯಾ ಟ್ವೀಟ್ ಮಾಡಿದ್ದಾರೆ.

   ಸ್ಯಾಂಡಲ್ ವುಡ್

   ಸ್ಯಾಂಡಲ್ ವುಡ್

   ಸ್ಯಾಂಡಲ್ ವುಡ್ ನಲ್ಲಿನ ಡ್ರಗ್ಸ್ ಜಾಲವನ್ನು ಬಯಲುಗೆಳೆಯಲು ಆ ರಾಜಕಾರಣಿ ಪ್ರಯತ್ನಿಸುತ್ತಿದ್ದಾರೆ. ಅದರಲ್ಲಿ ಹಲವರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಪ್ರಮುಖ ನಟರು ನಿಧನ ಹೊಂದಿದ ನಂತರ ಸ್ಯಾಂಡಲ್ ವುಡ್ ಅನಾಥವಾಗಿದೆ. ಹಾಗಾಗಿ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅವರು ಬಾಸ್ ಆಗಲು ಹೊರಟಿದ್ದಾರೆ ಎಂದು ಲೇಖನದಲ್ಲಿ ಬರೆಯಲಾಗಿದೆ.

   English summary
   Drugs: Who Is That Politician, Has He Arrested? Actress Cum Politician Ramya Aliyas Divya Spandana Questions.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X