• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ಸ್, ಕ್ಯಾಸಿನೋ, ಸಂಜನಾ ಮತ್ತು ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ಶಾಸಕನ ನಂಟು

|

ಇಂದ್ರಜಿತ್ ಲಂಕೇಶ್ ಹಚ್ಚಿದ ಡ್ರಗ್ಸ್ ಕಿಡಿ, ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸುತ್ತಿರುವುದು ಒಂದೆಡೆಯಾದರೆ, ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಗುಮಾನಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

   ಜಮೀರ್ ಅಹಮದ್ ಮತ್ತು ಸಂಜನಾ ಇಬ್ಬರೇ ಕೊಲಂಬೊ ಹೋಗಿದ್ರು | Oneindia Kannad

   ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ ಎನ್ನುವಂತೆ, ಆಯಕಟ್ಟಿನ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ, ಡ್ರಗ್ಸ್ ದಂಧೆ ಈ ಮಟ್ಟಿಗೆ ಬೇರೂರಲು ಸಾಧ್ಯವೇ ಇಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

   ಡ್ರಗ್ಸ್, ನಟಿ ರಾಗಿಣಿ ಅರೆಸ್ಟ್: ಇಕ್ಕಟ್ಟಿನಲ್ಲಿ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ

   ಮಾದಕ ನಟಿ ರಾಗಿಣಿ ದ್ವಿವೇದಿ, ತನಗೆ ಮಾದಕ ದ್ರವ್ಯದ ಜೊತೆಗಿನ ನಂಟನ್ನು ಸಿಸಿಬಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿಯು ಹಲವು ಮಾಧ್ಯಮದಲ್ಲಿ ಈಗಾಗಲೇ ವರದಿಯಾಗಿದೆ. ಇನ್ನು, ಆಕೆಯ ಮನೆಯ ಮೇಲೆ ರೈಡ್ ನಡೆದ ಸಂದರ್ಭದಲ್ಲೂ ಡ್ರಗ್ಸ್ ಸಿಕ್ಕಿದೆ ಎನ್ನುವ ಮಾಹಿತಿಯೂ ಓಡಾಡುತ್ತಿದೆ.

   ಕುಮಾರಸ್ವಾಮಿ ಅದ್ಯಾವ ಡ್ರಗ್ಸ್ ತೆಗೆದುಕೊಂಡು ಇಷ್ಟು ದಿನ ಮಲಗಿದ್ರು?

   ಇವೆಲ್ಲದರೆ ನಡುವೆ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ನಟಿ ಸಂಜನಾ ಗಲ್ರಾನಿ, ಶ್ರೀಲಂಕಾದಲ್ಲಿ ಏನೇನು ಮಾಡಿದ್ದರು ಎನ್ನುವ ವಿಚಾರ ಮತ್ತು ಬೆಂಗಳೂರು ಕಾಂಗ್ರೆಸ್ ಶಾಸಕರೊಬ್ಬರ ನಂಟಿನ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಆದರೆ, ವಿಪರ್ಯಾಸ ಏನಂದರೆ, ಇತ್ತ, ಸಂಜನಾ ಜೊತೆ ಪ್ರಶಾಂತ್ ಇರುವ ಫೋಟೋ ಕೂಡಾ ಭಾರೀ ವೈರಲ್ ಆಗಿದೆ. ಒನ್ ಇಂಡಿಯಾ/ಫಿಲ್ಮೀಬೀಟ್ ಗೆ ಪ್ರಶಾಂತ್ ಸಂಬರಗಿ ನೀಡಿದ ಸಂದರ್ಶನದ, ಹೈಲೆಟ್ಸ್ ಹೀಗಿದೆ:

   ನಾನು ಎಲ್ಲೂ ಸಂಜನಾ ಅವರ ಹೆಸರನ್ನು ಪ್ರಸ್ತಾವಿಸಿರಲಿಲ್ಲ

   ನಾನು ಎಲ್ಲೂ ಸಂಜನಾ ಅವರ ಹೆಸರನ್ನು ಪ್ರಸ್ತಾವಿಸಿರಲಿಲ್ಲ

   "ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎನ್ನುವುದನ್ನು ನಾನು ಉಲ್ಲೇಖ ಮಾಡಿದ್ದೆ. ನಾನು ಎಲ್ಲೂ ಸಂಜನಾ ಅವರ ಹೆಸರನ್ನು ಪ್ರಸ್ತಾವಿಸಿರಲಿಲ್ಲ. ಅವರು ನನ್ನನ್ನು ನಾಯಿ, ಹಂದಿ ಅಂದರು, ಹಂದಿ ಅಂದರೆ ವರಾಹ ಸ್ವಾಮಿ. ನನ್ನನ್ನು ಆ ರೀತಿ ಕರೆದಿದ್ದಕ್ಕೆ ನನಗೆ ಬೇಸರವಿಲ್ಲ. ಆದರೆ, ಅವರಿಗೊಂದು ನನ್ನ ಪ್ರಶ್ನೆ, ಜೂನ್ 8, 2019ರಂದು, ಶ್ರೀಲಂಕಾದ ಕೊಲೊಂಬೋದಲ್ಲಿ ಬಾಲಿ ಎನ್ನುವ ಕ್ಯಾಸಿನೋದಲ್ಲಿ ಅವರು ಬಾಲಿವುಡ್ ನಟ ವಿವೇಕ್ ಓಬೆರಾಯ್ ಜೊತೆ ಕಾಣಿಸಿಕೊಂಡಿದ್ದು ಹೌದು ತಾನೇ" ಎಂದು ಪ್ರಶಾಂತ್ ಸಂಬರಗಿ ಪ್ರಶ್ನಿಸಿದ್ದಾರೆ.

   ಬಿಳಿಸೂಟ್ ಹಾಕಿಕೊಂಡು ಇದ್ದವರು ಸಯ್ಯದ್ ಫೈಜುಲ್ಲಾ

   ಬಿಳಿಸೂಟ್ ಹಾಕಿಕೊಂಡು ಇದ್ದವರು ಸಯ್ಯದ್ ಫೈಜುಲ್ಲಾ

   "ಅವರ ಪಕ್ಕ ವೇದಿಕೆಯಲ್ಲಿ ಬಿಳಿಸೂಟ್ ಹಾಕಿಕೊಂಡು ಇದ್ದವರು ಸಯ್ಯದ್ ಫೈಜುಲ್ಲಾ, ಅವರು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ರೈಟ್ ಹ್ಯಾಂಡ್. ಜಮೀರ್ ಅಹ್ಮದ್ ಮತ್ತು ಸಂಜನಾ ಅವರ ಪಾಸ್ಪೋರ್ಟ್ ಅನ್ನು ತಾಳೆ ಹಾಕಿದರೆ, ಅವರಿಬ್ಬರೂ, ಕೊಲೊಂಬೋದಲ್ಲಿದ್ದರು ಎನ್ನುವುದು ಧೃಡಪಡುತ್ತದೆ. ನನ್ನ ಮೇಲೆ ಆರೋಪ ಮಾಡುವ ಬದಲು ಸಂಜನಾ, ಈ ವಿಚಾರದಲ್ಲಿ ಕರ್ನಾಟಕದ ಜನತೆಗೆ ಉತ್ತರ ಕೊಡಲಿ" ಎಂದು, ಪ್ರಶಾಂತ್ ಅವರು ಸಂಜನಾಗೆ ತಾಕೀತು ಮಾಡಿದ್ದಾರೆ.

   ಡ್ರಗ್ಸ್ ವ್ಯವಹಾರ ನಡೆಯುವುದು ಗ್ಯಾಂಬ್ಲಿಂಗ್ ದುಡ್ಡಿನಿಂದಲೇ

   ಡ್ರಗ್ಸ್ ವ್ಯವಹಾರ ನಡೆಯುವುದು ಗ್ಯಾಂಬ್ಲಿಂಗ್ ದುಡ್ಡಿನಿಂದಲೇ

   "ನಾನು ಹೇಳಿದ ಈ ವಿಚಾರವನ್ನು ಇಟ್ಟುಕೊಂಡು ವಿಚಾರಣೆ ನಡೆಸಿದರೆ ಡ್ರಗ್ಸ್ ಮತ್ತು ಗ್ಯಾಂಬ್ಲಿಂಗ್ ಮಾಫಿಯಾಗೆ ಇರುವ ಸಂಬಂಧ ಹೊರಬರುತ್ತದೆ. ಡ್ರಗ್ಸ್ ಗಳು, ಹವಾಲ ದುಡ್ಡು, ದುಬೈ ಫಂಡಿಂಗ್ ಮತ್ತು ಕರಾಚಿ ಡಿಸ್ಟ್ರಿಬ್ಯೂಶನ್ ಮೂಲಕ, ಪಂಜಾಬ್ ಗೆ ಎಂಟ್ರಿ ಕೊಟ್ಟು, ಭಾರತದಲ್ಲಿ ವ್ಯಾಪಿಸುವ ಬಗ್ಗೆ (ಡಿಕೆ ಲಿಂಕ್) ಹಲವು ಬಾರಿ ಉಲ್ಲೇಖಿಸಿದ್ದೇನೆ. ಡ್ರಗ್ಸ್ ವ್ಯವಹಾರ ನಡೆಯುವುದು ಗ್ಯಾಂಬ್ಲಿಂಗ್ ದುಡ್ಡಿನಿಂದಲೇ" ಎಂದು ಪ್ರಶಾಂತ್ ಹೇಳಿದ್ದಾರೆ.

   ಜಮೀರ್ ಅಹ್ಮದ್ ಮತ್ತು ಸಂಜನಾ, ಶ್ರೀಲಂಕಾಗೆ ಹೋಗಲಿ

   ಜಮೀರ್ ಅಹ್ಮದ್ ಮತ್ತು ಸಂಜನಾ, ಶ್ರೀಲಂಕಾಗೆ ಹೋಗಲಿ

   "ಜಮೀರ್ ಅಹ್ಮದ್ ಮತ್ತು ಸಂಜನಾ, ಶ್ರೀಲಂಕಾಗೆ ಹೋಗಲಿ, ಅದು ಅವರ ಖಾಸಗಿ ಬದುಕು. ಜಮೀರ್, ಶ್ರೀಲಂಕಾದಲ್ಲಿ ಕ್ಯಾಸಿನೋದಲ್ಲಿ ಕಳೆದುಕೊಂಡ ಭಾರೀ ಮೊತ್ತದ ಹಣವನ್ನು ಅಲ್ಲಿಗೆ ಸಾಗಿಸಿದ್ದು ಹೇಗೆ ಎನ್ನುವುದಿಲ್ಲಿ ಪ್ರಶ್ನೆ. ಅಂತರಾಷ್ಟ್ರೀಯ ಗ್ಯಾಂಬ್ಲಿಂಗ್ ಸಂಸ್ಥೆಯ ಜೊತೆಗೆ, ಮಾಡೆಲ್ ಆಗಿ ಸಂಜನಾಗೆ ಇರುವ ಒಡನಾಟಿಕೆಯ ಫೋಟೋ ನಮಗೆ ಲಭ್ಯವಾಗಿದೆ. ಚಿಯರ್ ಗರ್ಲ್ ರೂಪದಲ್ಲಿ ಸಂಜನಾ ನನಗೆ ಪರಿಚಯವಾಗಿದ್ದು ಹೌದು" ಎಂದು ಪ್ರಶಾಂತ್ ಸಂದರ್ಶನದ ವೇಳೆ ಒಪ್ಪಿಕೊಂಡಿದ್ದಾರೆ.

   ಸಂಜನಾ, ಪ್ರಶಾಂತ್ ಸಂಬರಗಿ

   ಸಂಜನಾ, ಪ್ರಶಾಂತ್ ಸಂಬರಗಿ

   "ವಿವೇಕ್ ಓಬೆರಾಯ್, ಸಂಜನಾ, ಫೈಜುಲ್ಲಾ ಮತ್ತು ಇತರಿಬ್ಬರು ಇರುವ ವೇದಿಕೆಯ ವಿಡಿಯೋ ಒಂದನ್ನು ಪ್ರಶಾಂತ್ ಸಂಬರಗಿ ಬಿಡುಗಡೆ ಮಾಡಿದ್ದಾರೆ. ಆದರೆ, ಅದರಲ್ಲಿ ಜಮೀರ್ ಅಹ್ಮದ್ ಕಾಣಿಸಿಕೊಂಡಿಲ್ಲ. ಪ್ರಶಾಂತ್, ಇಷ್ಟೆಲ್ಲಾ ಮಾಧ್ಯಮಗಳ ಮುಂದೆ ಆರೋಪಿಸುವ ಬದಲು, ನಿಯತ್ತಾಗಿ, ತನಗಿರುವ ದಾಖಲೆಗಳನ್ನು ಸಿಸಿಬಿ ಅಧಿಕಾರಿಗಳಿಗೆ ನೀಡಬಹುದಿತ್ತಲ್ಲವೇ ಎನ್ನುವ ಪ್ರಶ್ನೆಯೂ ಕಾಡುವುದು ಸಹಜ.

   English summary
   Drugs Scandal In Sandalwood: Latest Allegation Of Social Worker Prashanth Sambargi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X