ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಆನ್ಲೈನ್ ಮೂಲಕ ಮಾದಕ ವಸ್ತು ಮಾರಾಟ

|
Google Oneindia Kannada News

ಬೆಂಗಳೂರು, ಮಾರ್ಚ್ 9: 'ಬೆಂಗಳೂರಿನ ಶಾಲಾ ಕಾಲೇಜುಗಳ ಆವರಣದಲ್ಲಿ ಹಾಡು ಹಗಲಲ್ಲೇ ಗಾಂಜಾ ಹಾಗೂ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ' ಎಂದು ಸರ್ವಜ್ಞನಗರ ಶಾಸಕ ಕೆಜೆ ಜಾರ್ಜ್ ಬೇಸರ ಬೇಸರ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಈ ಬಗ್ಗೆ ಚರ್ಚಿಸಿದ ಶಾಸಕ ಕೆ.ಜೆ. ಜಾರ್ಜ ''ಸರ್ವಜ್ಞನಗರ ವಿಧಾನಸಭೆ ವ್ಯಾಪ್ತಿಯ ಶಾಲಾ ಕಾಲೇಜುಗಳ ಆವರಣದಲ್ಲಿ ಹಾಡು ಹಗಲಲ್ಲೇ ಗಾಂಜಾ ಹಾಗೂ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ. ಕೆಲವು ಪೊಲೀಸರು ಈ ದಂಧೆಯೊಂದಿಗೆ ಕೈ ಜೋಡಿಸಿದ್ದಾರೆ. ಇಂಟರ್ನೆಟ್ ಮೂಲಕವೂ ಮಾದಕ ವಸ್ತುಗಳ ಆನ್ ಲೈನ್ ಮಾರಾಟ ನಡೆಯುತ್ತಿದೆ. ಕೆಲವು ವ್ಯಕ್ತಿಗಳು ಮಾದಕ ವಸ್ತುಗಳ ಮಾರಾಟವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ'' ಎಂದು ಅಳಲು ತೋಡಿಕೊಂಡಿದ್ದಾರೆ.

ಗೃಹ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಗಾಂಜಾ ಹಾವಳಿ!ಗೃಹ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಗಾಂಜಾ ಹಾವಳಿ!

ಇದಕ್ಕೂ ಮುಂಚೆ ಮಾತನಾಡಿದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಪ್ರಿಯಾಂಕ ಖರ್ಗೆ ಅವರು ''ಜನವಸತಿ ಪ್ರದೇಶಗಳು, ಶಾಲಾಕಾಲೇಜು ಆವರಣ, ಮಂದಿರದ ಸಮೀಪದಲ್ಲೂ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಲೈಸೆನ್ಸ್ ನೀಡಲಾಗಿದೆ'' ಎಂದು ಅಬಕಾರಿ ಇಲಾಖೆಯ ವಿರುದ್ಧ ಆರೋಪಿಸಿದರು.

Drug Selling In Online At Bangalore KJ George alleged

'ಕಲಬುರಗಿ ನಗರಕ್ಕೆ 111 ಬಾರ್ ಲೈಸೆನ್ಸ್ ನೀಡಲಾಗಿದೆ ಕಲ್ಬುರ್ಗಿ ನಗರದಲ್ಲಿ ಕಿರಾಣಿ ಅಂಗಡಿಗಳಲ್ಲೂ ಮದ್ಯಮಾರಾಟವಾಗುತ್ತಿದೆ' ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಅಬಕಾರಿ ಸಚಿವ ನಾಗೇಶ್ 'ನಿಯಮ ಉಲ್ಲಂಘಿಸಿ ಮದ್ಯ‌ಮಾರಾಟದ ಬಗ್ಗೆ ಮಾಹಿತಿ ಇಲ್ಲ' ಎಂದರು.

ಡ್ರಗ್ಸ್ ಮಾಹಿತಿ ಕೊಟ್ರೆ ಪಾಲು ಕೊಡ್ತೀರಾ? ಎಂದವನಿಗೆ ದಂಗು ಬಡಿಸಿದ ಪೊಲೀಸರುಡ್ರಗ್ಸ್ ಮಾಹಿತಿ ಕೊಟ್ರೆ ಪಾಲು ಕೊಡ್ತೀರಾ? ಎಂದವನಿಗೆ ದಂಗು ಬಡಿಸಿದ ಪೊಲೀಸರು

ಮಧ್ಯ‌ಪ್ರವೇಶಿಸಿದ ಸ್ಪೀಕರ್ ಕಾಗೇರಿ, 'ಇಡೀ ರಾಜ್ಯಾದ್ಯಂತ ಈ ಸಮಸ್ಯೆ ಇದೆ, ನೀವು ಅಧಿಕಾರಿಗಳಿಗೆ ಟಾರ್ಗೆಟ್ ನೀಡುತ್ತಿರುವುದೇ ಇದಕ್ಕೆಲ್ಲ ಕಾರಣ. ಇದನ್ನು ನಿಯಂತ್ರಿಸದೇ ಹೋದರೆ ತೊಂದರೆಯಾಗುತ್ತದೆ' ಎಂದು ಸೂಚಿಸಿದರು.

ಬೆಂಗಳೂರಿನಲ್ಲಿ ಎಂಜಿನಿಯರ್, ಮೆಡಿಕಲ್ ವಿದ್ಯಾರ್ಥಿಗಳೇ ಟಾರ್ಗೆಟ್!ಬೆಂಗಳೂರಿನಲ್ಲಿ ಎಂಜಿನಿಯರ್, ಮೆಡಿಕಲ್ ವಿದ್ಯಾರ್ಥಿಗಳೇ ಟಾರ್ಗೆಟ್!

ಅಬಕಾರಿ ಸಚಿವರ ಸಹಾಯಕ್ಕೆ ಧಾವಿಸಿದ ಗೃಹ ಸಚಿವ ಬೊಮ್ಮಾಯಿ ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದರು.

English summary
Karnataka Assembly Session: Ex home minister KJ George alleged in session that drug selling mafia going on online at Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X