ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡುಂಜೋ ಬ್ಯಾಗ್‌ ಬಳಸಿ ಡ್ರಗ್ ಮಾರಾಟ ಮತ್ತೊಂದು ಡ್ರಗ್ ಜಾಲ ಪತ್ತೆ: ಆರೋಪಿಗಳ ಬಂಧನ

|
Google Oneindia Kannada News

ಬೆಂಗಳೂರು: ನ. 14: ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ ಜಾಲದ ನಾನಾ ಮುಖಗಳು ಬಯಲಿಗೆ ಬರುತ್ತಿವೆ. ಪೊಲೀಸರಿಗೆ ಅನುಮಾನ ಬಾರದಂತೆ ಡುಂಜೋ ಬ್ಯಾಗ್‌ ಬಳಿಸಿ ಮಾದಕ ವಸ್ತುಗಳನ್ನು ಸಾಗಿಸಿ ಮಾರಾಟ ಮಾಡುತ್ತಿದ್ದ ಗ್ಹಾಂಗ್ ನ್ನು ಮೈಕೋ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

ಮಾಸ್ಕ್‌ ಹಾಕದೇ ದಂಡ ಕಟ್ಟುವಾಗ ಸಿಕ್ಕಿಬಿದ್ದ ಖೋಟಾ ನೋಟು ಜಾಲಮಾಸ್ಕ್‌ ಹಾಕದೇ ದಂಡ ಕಟ್ಟುವಾಗ ಸಿಕ್ಕಿಬಿದ್ದ ಖೋಟಾ ನೋಟು ಜಾಲ

ಆಯುಷ್ ಪಾಂಡೆ, ರೋಹಿತ್ ರಾಮ್‌, ನೂರ್‌ ಆಲಿ ಬಂಧಿತ ಆರೋಪಿಗಳು. ಇವರಿಂದ 23 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂತರ್ಜಾಲದ ಡಾರ್ಕ್‌ವೆಬ್‌ ತಾಣಗಳಿಂದ ಮಾದಕ ವಸ್ತುಗಳನ್ನು ಕೊರಿಯರ್ ಮೂಲಕ ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದರು.

Drug rocket busted by Mico Layout police : Dunzo Bag used for drug supply

Recommended Video

ದೀಪಾವಳಿ ಸಮಯದಲ್ಲಿ ಮೋದಿ ಮಾಡಿದ್ದಾದರೂ ಏನು? | Oneindia Kannada

ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಡುಂಜೋ ಡೆಲಿವರಿ ಸೇವೆಯ ಬ್ಯಾಗ್‌ ಗಳನ್ನು ಬಳಸಿ ಗ್ರಾಹಕರಿಗೆ ತಲುಪಿಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹೊಸ ವರ್ಷದ ಸಂಭ್ರಮಕ್ಕೆ ವಿದೇಶದಿಂದ ಚರಸ್ ಮಾದಕ ವಸ್ತುವುಳ್ಳ ಚಾಕ್ಲೇಟ್್ಗಳನ್ನು ತರಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ಬಳಿಯಿದ್ದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಮೊಬೈಲ್‌ ಸಂಪರ್ಕ ಆಧರಿಸಿ ಇವರಿಂದ ಮಾದಕ ವಸ್ತು ತರಿಸಿಕೊಳ್ಳುತ್ತಿದ್ದ, ಮಾರಾಟ ಮಾಡುತ್ತಿದ್ದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

English summary
Three Drug peddlers arrested by Mico Layout police and seized 23 Lakh worth drug from accused persons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X