ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮಪುರದಲ್ಲಿ 40 ಕೆ.ಜಿ. ಗಾಂಜಾ ವಶ, ಮೂವರ ಬಂಧನ

|
Google Oneindia Kannada News

ಬೆಂಗಳೂರು, ಅ.1: ಗಾಂಜಾ ಮಾರಾಟ ಮಾಡಲು ಆಟೋದಲ್ಲಿ ಸಾಗಾಟ ಮಾಡುತ್ತಿದ್ದ ಮೂರು ಆರೋಪಿಗಳ ಬಂಧಿಸಲಾಗಿದ್ದು, 40 ಕೆ.ಜಿ. ಗಾಂಜಾ ವಶ ಪಡಿಸಿಕೊಳ್ಳಲಾಗಿದೆ.

ಯಶವಂತಪುರ ಕಡೆಯಿಂದ ಮಲ್ಲೇಶ್ವರ ರೈಲ್ವೆ ಪ್ಯಾರಲಲ್ ರಸ್ತೆಯ ಮೂಲಕ ಶ್ರೀರಾಮಪುರ ಅಯ್ಯಪ್ಪ ದೇವಸ್ಥಾನದ ಕಡೆಗೆ ಒಂದು ಆಟೋ ರಿಕ್ಷಾ ಮತ್ತು ಎರಡು ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾರೆಂದು ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಸಿಕ್ಕಿದೆ.

ಎಸಿಪಿ ರೀನಾ ಮಾರ್ಗದರ್ಶನ, ಜೆಸಿ ನಗರದಲ್ಲಿ 45 ಕೆಜಿ ಗಾಂಜಾ ವಶ ಎಸಿಪಿ ರೀನಾ ಮಾರ್ಗದರ್ಶನ, ಜೆಸಿ ನಗರದಲ್ಲಿ 45 ಕೆಜಿ ಗಾಂಜಾ ವಶ

ಬಂಧಿತರ ವಿವರ: 1) ಕಾರ್ತಿಕ್ @ ಕಬಾಲಿ, 31 ವರ್ಷ, ಎಲ್. ಪುರ, ಬೆಂಗಳೂರು 2) ವಿಕ್ಕಿ ಎಂ., 23 ವರ್ಷ, ಕೊರಮಂಗಲ, ಬೆಂಗಳೂರು 3) ಪ್ರೇಮಕುಮಾರ್ 21 ವರ್ಷ, ವಿನಾಯಕ ನಗರ, ಕೂಡ್ಲು, ಬೆಂಗಳೂರು ಎಂಬುವರುಗಳನ್ನು ದಸ್ತಗಿರಿ ಆರೋಪಿಗಳ ವಶದಲ್ಲಿದ್ದ ಸುಮಾರು 40 ಕೆ.ಜಿ. ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ 1-ಆಟೋ ರಿಕ್ಷಾ ಮತ್ತು 2 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಶ್ರೀರಾಮಪುರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಜಾಮೀನಿನ ಮೇಲೆ ಹೊರ ಬಂದ ಮೇಲೂ ಕೃತ್ಯ

ಜಾಮೀನಿನ ಮೇಲೆ ಹೊರ ಬಂದ ಮೇಲೂ ಕೃತ್ಯ

ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಆರೋಪಿ ಕಾರ್ತೀಕ್ @ ಕಬಾಲಿ ಕಬ್ಬಿಣದ ವರ್ಕ್ ಶಾಪ್‍ನಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಈತನ ಮೇಲೆ 2019 ನೇ ಸಾಲಿನಲ್ಲಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಮಾಡುವ 2 ಪ್ರಕರಣಗಳು ದಾಖಲಾಗಿರುತ್ತದೆ. ಈ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರ ಬಂದು ಇದೇ ಕೃತ್ಯವನ್ನು ಮುಂದುವರೆಸಿಕೊಂಡು ಬಂದಿರುತ್ತಾನೆ.

ಡಿಜೆ ಮ್ಯೂಸಿಕ್ ಪ್ಲೇಯರ್ ಪೆಡ್ಲರ್ ಆಗಿದ್ದಾನೆ

ಡಿಜೆ ಮ್ಯೂಸಿಕ್ ಪ್ಲೇಯರ್ ಪೆಡ್ಲರ್ ಆಗಿದ್ದಾನೆ

ಮತ್ತೊಬ್ಬ ಆರೋಪಿ ವಿಕ್ಕಿ ಎಂ., ಕೋರಮಂಗಲದ ಕ್ಲಬ್ ವೊಂದರಲ್ಲಿ ಡಿಜೆ ಮ್ಯೂಸಿಕ್ ಪ್ಲೇಯರ್ ಆಗಿ ಮಾಡಿಕೊಂಡಿರುತ್ತಾನೆ. ಆರೋಪಿ ಪ್ರೇಮ್‍ಕುಮಾರ್ ಅಮೆಜಾನ್ ಕಂಪನಿಯಲ್ಲಿ ಡಿಲೆವರಿ ಬಾಯ್ ಕೆಲಸ ಮಾಡಿಕೊಂಡಿದ್ದು, ಕಾರ್ತಿಕ್ ಜೊತೆಯಲ್ಲಿ ಸೇರಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದಾಗಿ ತಿಳಿಸಿರುತ್ತಾನೆ.

ಬಸವೇಶ್ವರ ಬಸ್ ನಿಲ್ದಾಣ ಬಳಿ ಗಾಂಜಾ ವಶ, ಇಬ್ಬರು ವಶಕ್ಕೆಬಸವೇಶ್ವರ ಬಸ್ ನಿಲ್ದಾಣ ಬಳಿ ಗಾಂಜಾ ವಶ, ಇಬ್ಬರು ವಶಕ್ಕೆ

ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ

ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ

ಆರೋಪಿ ಕಾರ್ತೀಕ್ ಎಂಬುವನು ದಸಪಲಾ, ನಯಾಗರ್ ಜಿಲ್ಲೆ, ಒಡಿಸ್ಸಾಕ್ಕೆ ರೈಲಿನಲ್ಲಿ ಹೋಗಿ ವ್ಯಕ್ತಿಯೊಬ್ಬರಿಂದ ಖರೀದಿಸಿ, ರೈಲಿನ ಮೂಲಕ ಗಾಂಜಾವನ್ನು ಬೆಂಗಳೂರಿಗೆ ತಂದು, ನಂತರ ಮೇಲ್ಕಂಡ ಆರೋಪಿಗಳು ಸೇರಿ ಹಂಚಿಕೊಂಡು ಶ್ರೀರಾಮಪುರ, ರಾಜಾಜಿನಗರ, ಸುಬ್ರಮಣ್ಯನಗರ, ಶೇಷಾದ್ರಿಪುರಂ, ಬಸವೇಶ್ವರನಗರ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದಾಗಿ ತಿಳಿಸಿರುತ್ತಾನೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. '

Recommended Video

ನಾವು Dalitರಾಗಿರೋದು ನಮ್ ತಪ್ಪಾ | Hathras case | Oneindia Kannada
ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡ

ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡ

ಈ ಪ್ರಕರಣದಲ್ಲಿ ಕೆ.ಎಸ್. ವೆಂಕಟೇಶ್ ನಾಯ್ಡು, ಮಲ್ಲೇಶ್ವರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸುನೀಲ್ ವೈ ನಾಯಕ್, ಪೊಲೀಸ್ ಇನ್ಸ್‍ಪೆಕ್ಟರ್, ಶ್ರೀರಾಮಪುರ ಪೊಲೀಸ್ ಠಾಣೆ, ಗಿರೀಶ್ ನಾಯಕ್ ಪಿಎಸ್‍ಐ ಹಾಗೂ ವೆಂಕಟಪ್ಪ ಎಎಸ್‍ಐ, ಮೋಹನ್ ಕುಮಾರ್ ನಾಯಕ್ ಹೆಚ್.ಸಿ.8023, ನಟರಾಜ್ ಹೆಚ್.ಸಿ.7480, ಶ್ರೀ ಚೆಲುವೇಗೌಡ, ಹೆಚ್.ಸಿ.10131, ಸಿದ್ದು ಲಮಾಣಿ, ಹೆಚ್.ಸಿ.9500, ಹನುಮೇಶ ಪಿ.ಸಿ.14227, ಶರಣರೆಡ್ಡಿ ಪಿ.ಸಿ.15657, ಕರ್ಣ ಪಿ.ಸಿ. 11845, ಮತ್ತು ಆನಂದ ಪಿ.ಸಿ. 14158 ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

English summary
Drug mafia: Srirampura Police arrested three drug peddlers and 40 KG ganja & auto rickshaw seized
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X