• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ಸ್ ಪ್ರಕರಣ; ವಿರೇನ್ ಖನ್ನಾಗೆ ಪಾಲಿಗ್ರಾಫ್ ಪರೀಕ್ಷೆ

|

ಬೆಂಗಳೂರು, ಅಕ್ಟೋಬರ್ 02: ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾರಾಗಿರುವ ವಿರೇನ್ ಖನ್ನಾಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತದೆ. ಸಿಸಿಬಿ ಪೊಲೀಸರು ಬಂಧಿಸಿರುವ ವಿರೇನ್ ಖನ್ನಾ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವಿರೇನ್ ಖನ್ನಾಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಿದೆ.

ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ; ಮುಂದೇನು?

ಪೊಲೀಸರ ವಿಚಾರಣೆ ಸಮಯದಲ್ಲಿ ವಿರೇನ್ ಖನ್ನಾ ನಿಖರವಾದ ಮಾಹಿತಿ ನೀಡಿಲ್ಲ. ಹಲವಾರು ಅಂಶಗಳನ್ನು ಮರೆ ಮಾಚುತ್ತಿದ್ದಾನೆ ಎಂದು ಎಂದು ಪೊಲೀಸರು ಹೇಳಿದ್ದರು. ಅದಕ್ಕಾಗಿ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತಿದೆ.

ಬೆಂಗಳೂರಲ್ಲಿ ಡ್ರಗ್ಸ್‌; ದೆಹಲಿಯಲ್ಲಿ ವಿರೇನ್ ಖನ್ನಾ ಬಂಧನ

ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪಾಲಿಗ್ರಾಫ್ ಪರೀಕ್ಷೆಗಳನ್ನು ನಡೆಸುವ ಉಪಕರಣಗಳಿವೆ. ಸಿಸಿಬಿ ಪೊಲೀಸರು ಆರೋಪಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಲಿದ್ದಾರೆ.

ವೀರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಪತ್ತೆ!

ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣಕ್ಕೆ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ವಿರೇನ್ ಖನ್ನಾ ಬಂಧಿಸಲಾಗಿತ್ತು. ಬಳಿಕ ಸಿಸಿಬಿ ಪೊಲೀಸರು ಆತನನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು.

   ಒಂದು ದಿನಾನೂ ಕಡ್ಡಿ ಕರ್ಪೂರ ಹಚ್ಲಿಲ್ಲಾ!! | Oneindia Kannada

   ವಿರೇನ್ ಖನ್ನಾ ಮೂಲತಃ ಬೆಂಗಳೂರಿನ ನಿವಾಸಿ. ಟೆಕ್ಕಿಯಾಗಿದ್ದ ಈತ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಆ ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆ ಆಗುತ್ತಿತ್ತು ಎಂಬ ಆರೋಪಗಳಿವೆ. ಸಿಸಿಬಿ ಪೊಲೀಸರು ವಿರೇನ್ ಖನ್ನಾ ನಿವಾಸದ ಮೇಲೆ ದಾಳಿ ಮಾಡಿದಾಗ ಪೊಲೀಸರ ಸಮವಸ್ತ್ರ ಸಿಕ್ಕಿತ್ತು.

   English summary
   Court approved to conduct polygraph test for Viren Khanna who arrested by CCB police in connection with the sandalwood drug case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X