ಡ್ರಗ್ಸ್ ಪ್ರಕರಣ; ಕನ್ನಡ ಬಿಗ್ ಬಾಸ್ ಸ್ಪರ್ಧಿ ಬಂಧನ
ಬೆಂಗಳೂರು, ಅಕ್ಟೋಬರ್ 20 : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಬಿಗ್ಬಾಸ್ ಮಾಜಿ ಸ್ಪರ್ಧಿ ಆಡಂ ಪಾಷಾರನ್ನು ಎನ್ಸಿಬಿ ಬಂಧಿಸಿದೆ. ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ.
ಬೆಂಗಳೂರು ಎನ್ಸಿಬಿ ವಿಭಾಗದ ಪೊಲೀಸರು ಆಡಂ ಪಾಷಾರನ್ನು ಬಂಧಿಸಿದ್ದಾರೆ. ಮಾದಕ ವಸ್ತುಗಳನ್ನು ಖರೀದಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಆಡಂ ಪಾಷಾರನ್ನು ಬಂಧಿಸಲಾಗಿದೆ. ಕಳೆದ ಬಾರಿಯ ಬಿಗ್ ಬಾಸ್ನಲ್ಲಿ ಆಡಂ ಪಾಷಾ ಸ್ಪರ್ಧಿಯಾಗಿದ್ದರು.
ಡ್ರಗ್ಸ್ ಪ್ರಕರಣ: ವಿವೇಕ್ ಒಬೆರಾಯ್ ಮನೆ ಮೇಲೆ ಸಿಸಿಬಿ ದಾಳಿ
ಎನ್ಸಿಬಿ ಪೊಲೀಸರು ಡ್ರಗ್ ಪೆಡ್ಲರ್ ಅನಿಕಾಳನ್ನು ಬಂಧಿಸಿದ್ದರು. ಆಕೆಯು ನೀಡಿದ ಮಾಹಿತಿ ಅನ್ವಯ, ದೂರವಾಣಿ ಕರೆಗಳ ಮಾಹಿತಿ ಅನ್ವಯ ಆಡಂ ಪಾಷಾರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಅಷ್ಟು ಗುಣಮಟ್ಟದ ಡ್ರಗ್ಸ್ ನಿಮಗೆಲ್ಲಿ ಸಿಗುತ್ತದೆ?: ರಾಹುಲ್ ಗಾಂಧಿಗೆ ಸಚಿವನ ಪ್ರಶ್ನೆ
ಬೆಂಗಳೂರಿನಲ್ಲಿ ಸೆಪ್ಟೆಂಬರ್ನಲ್ಲಿ ಎನ್ಸಿಬಿ ಅಧಿಕಾರಿಗಳು ಡಿ. ಅನಿಕಾಳನ್ನು ಬಂಧಿಸಿದ್ದರು. ಬಾಲಿವುಡ್ ಮತ್ತು ಸ್ಯಾಂಡಲ್ವುಡ್ ನಟ, ನಟಿಯರಿಗೆ ಈಕೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದಳು ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು.
ಡ್ರಗ್ಸ್ ಪ್ರಕರಣ: ವಾಟ್ಸಾಪ್ ಚಾಟ್ಗಳು ಸುರಕ್ಷಿತವಾಗಿಲ್ಲವೇ?
ನೈಜೀರಿಯಾ ಮೂಲದ ವ್ಯಕ್ತಿಯೊಬ್ಬರ ಅನಿಕಾ ಬಾಯ್ ಫ್ರೆಂಡ್ ಆಗಿದ್ದು, ಆತನ ಸಹಾಯದಿಂದ ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್ಗಳ ಸಂಪರ್ಕ ಅನಿಕಾಗೆ ಸಿಕಿತ್ತು. ಪಾರ್ಟಿಗಳಿಗೆ ಈಕೆ ಎಷ್ಟು ಪ್ರಮಾಣದಲ್ಲಿ ಬೇಕಾದರೂ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಳು.
ಆಗಸ್ಟ್ 21ರಂದು ದೆಹಲಿ ಮತ್ತು ಮುಂಬೈ ಪೊಲೀಸರು ಅನಿಕಾ ಕಾರ್ಯಚಟುವಟಿಕೆ ಕುರಿತು ಮಾಹಿತಿ ನೀಡಿದ್ದರು. ಈ ಮಾಹಿತಿಯ ಅನ್ವಯ ಅನಿಕಾ ಬಂಧಿಸಲಾಗಿತ್ತು. ಕಿರುತೆರೆಯಲ್ಲಿಯೂ ಕೆಲವು ಕಾಲ ಕೆಲಸ ಮಾಡಿದ್ದ ಅನಿಕಾ ನಟ ನಟಿಯರ ಪರಿಚಯವನ್ನು ಮಾಡಿಕೊಂಡಿದ್ದಳು.
ತಮಿಳುನಾಡು ಮೂಲದ ಅನಿಕಾ ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡಿದ್ದಳು. ಬಳಿಕ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಳು. ಹೊರಮಾವು, ದೊಡ್ಡಗುಬ್ಬಿ ಪ್ರದೇಶದಲ್ಲಿದ್ದ ಈಕೆಗೆ ಅಲ್ಲಿಯೇ ಡ್ರಗ್ಸ್ ಲೋಕದ ಪರಿಚಯವಾಗಿತ್ತು.
Recommended Video
ಡ್ರಗ್ಸ್ ಪೂರೈಕೆಯಿಂದ ಭಾರಿ ಹಣ ಲಭಿಸುತ್ತಿದ್ದರಿಂದ ಅದನ್ನೇ ಅನಿಕಾ ಮತ್ತು ಆಕೆಯ ಬಾಯ್ ಫ್ರೆಂಡ್ ಉದ್ಯೋಗ ಮಾಡಿಕೊಂಡಿದ್ದರು. ಅಂತರಾಷ್ಟ್ರೀಯ ಮಟ್ಟದ 20ಕ್ಕೂ ಹೆಚ್ಚು ಡ್ರಗ್ಸ್ ಪೆಡ್ಲರ್ಗಳ ಜೊತೆ ಅನಿಕಾ ಸಂಪರ್ಕ ಹೊಂದಿದ್ದಳು