ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಲಕರೇ ಹುಷಾರ್: ಬೆಂಗಳೂರಲ್ಲಿ ಹೆಚ್ಚುತ್ತಿವೆ ಡ್ರಗ್ಸ್ ಸೇವನೆ ಪ್ರಕರಣ

By Nayana
|
Google Oneindia Kannada News

ಬೆಂಗಳೂರು, ಜೂನ್‌ 26: ದಿನದಿಂದ ದಿನಕ್ಕೆ ಮಾದಕ ವಸ್ತುಗಳ ಸೇವನೆ ಮಾಡುವವರ ಸಂಖ್ಯೆ ಏರಿಕೆಯಾಗುತ್ತಿದೆ. 2017ರಲ್ಲಿ 1127 ಪ್ರಕರಣಗಳು ದಾಖಲಾಗಿದೆ ಎಂದು ನಿವೃತ್ತ ಡಿಜಿ, ಐಜಿಪಿ ಅಜಯ್‌ ಕುಮಾರ್‌ ಸಿಂಹ ತಿಳಿಸಿದ್ದಾರೆ.

ಮಾದಕ ವಸ್ತುಗಳ ನಿರ್ಬಂಧ ದಿನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಲೆ, ಕಾಲೇಜುಗಳಲ್ಲಿ ಮಿತಿಮೀರಿದ ದಂದೆ ನಡೆಯುತ್ತಿದೆ. 2015ರಲ್ಲಿ 334, 2016ರಲ್ಲಿ 653, 2017ರಲ್ಲಿ 1127 ಪ್ರಕರಣಗಳು ದಾಖಲಾಗಿದೆ, ವರ್ಷದಿಂದ ಪ್ರಕರಣಗಳು ಹೆಚ್ಚಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಮಾದಕ ವ್ಯಸನಿಗಳಾಗಬೇಡಿ, ಆರೋಗ್ಯವಂತರಾಗಿ:ಪರಮೇಶ್ವರ್ ಮಾದಕ ವ್ಯಸನಿಗಳಾಗಬೇಡಿ, ಆರೋಗ್ಯವಂತರಾಗಿ:ಪರಮೇಶ್ವರ್

ಒಂದೇ ವರ್ಷದ ಅವಧಿಯಲ್ಲಿ ಅರ್ಧದಷ್ಟು ಕೇಸ್ ಗಳು ಹೆಚ್ಚು ಡ್ರಗ್ಸ್ ಸೇವನೆಯಲ್ಲಿ ಕಾಲೇಜು ವಿಧ್ಯಾರ್ಥಿಗಳು, ಯುವಕ ಯುವತಿಯರೇ ಅಧಿಕ ರಾಜ್ಯ ಪೊಲೀಸ್ ಇಲಾಖೆಯಿಂದ ಮಾಹಿತಿ ಬಹಿರಂಗಗೊಂಡಿದೆ. ನಾವೆಲ್ಲಾ ಪ್ರತಿದಿನ ಕಾನೂನು ಬಗ್ಗೆ ತಿಳಿದುಕೊಂಡು ಸೆಕ್ಷನ್ ಗಳು ಅರಿವು ನಮಗಿದೆ.

Drug addiction increase in Bangalore: Police report reveals

ಸೆಕ್ಷನ್ ಗಳು ಗೊತ್ತಿದ್ದರೇ ಸಾಲದು, ಯಾವುದೇ ವಿಚಾರದ ಕುರಿತು ಪರಿಹಾರ ಸೂಚಿಸುವ ಮನೋಭಾವ ಇರಬೇಕು ಸೈಕಾಲಜಿ ಮೂಲಕ ಕಾರ್ಯನಿರ್ವಹಿಸುವ ಅಗತ್ಯವಿದೆ ಹೀಗಂತ ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ರಾಜ್ಯದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ ಮಾದಕ ವಸ್ತುಗಳ ನಿರ್ಬಂಧ ಕಾನೂನು‌ ಅನುಷ್ಠಾನ ಕುರಿತ ಕಾರ್ಯಾಗಾರ ಮಾದಕ ವಸ್ತುಗಳ ನಿರ್ಬಂಧ ಕಾನೂನು ಕುರಿತ ಕೈಪಿಡಿ‌ ಬಿಡುಗಡೆ ಮಾಡಲಾಯಿತು. ಡಿಜಿ, ಐಜಿಪಿ ನೀಲಮಣಿ ಎನ್.ರಾಜು ಭಾಗಿಯಾಗಿದ್ದರು.

English summary
Drugs and nicotine cases have been increased in the last one year in Bangalore and 1,127 cases were registered under NDPS section. There were only 653 cases were registered in 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X