ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಫಿ ಪ್ರಿಯರಿಂದ ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ

By ಮಲೆನಾಡಿಗ
|
Google Oneindia Kannada News

ಬೆಂಗಳೂರಿನ ಜನಕ್ಕೆ ಆನ್ ಲೈನ್ ನಿಂದ ಖರೀದಿಸುವುದನ್ನು ಹೊಸದಾಗಿ ಯಾರೂ ಹೇಳಿಕೊಡಬೇಕಿಲ್ಲ. ಅದರೆ, ಹೊಸ ಹೊಸ ಉತ್ಪನ್ನಗಳು, ಹೊಸ ಹೊಸ ಐಡಿಯಾಗಳು ಬಂದಾಗ ಅದನ್ನು ಅಪ್ಪಿಕೊಂಡು ಮೆರೆಸುವುದರಲ್ಲಿ ಬೆಂಗಳೂರಿಗರು ಇತರೆ ನಗರಗಳಿಗೆ ಸದಾ ಕಾಲ ಪೈಪೋಟಿ ನೀಡುತ್ತಾರೆ.

ಆನ್ ಲೈನ್ ಮೂಲಕ ಕಾಫಿ ಆರ್ಡರ್ ಮಾಡಿ ನಿಮ್ಮ ಡೆಸ್ಕ್ ಗೆ ತರಿಸಿಕೊಳ್ಳಬಹುದು ಎಂದು ಕೆಲ ತಿಂಗಳುಗಳ ಕೆಳಗೆ ಫೇಸ್ ಬುಕ್ ನಲ್ಲಿ ಜಾಹೀರಾತು ಬಂದಾಗ ಕಾಫಿ ಪ್ರಿಯರ ಕಣ್ಣರಳಿತ್ತು.[ಬೆಂಗಳೂರಿನಲ್ಲೇ ಸ್ಟಾರ್ ಬಕ್ಸ್ ಕಾಫಿ ಸವಿಯಿರಿ]

ಹೌದು, ಕಾಫಿ ಪ್ರಿಯರಾದ ಚೈತನ್ಯ ಚಿತ್ತ ಹಾಗೂ ಅವರ ಪತ್ನಿ ಡಿ ಲಕ್ಷ್ಮಿ ಅವರ ಕಾಫಿ ಬೇಡಿಕೆ ಈಗ ಸಣ್ಣ ಸ್ಟಾರ್ ಅಪ್ ಆಗಿ ಬೆಳೆದಿದೆ. ಇವರ ಜೊತೆಗೆ ನಂತರ ಗೆಳೆಯ ರಕ್ಷಿತ್ ಕೇಜ್ರಿವಾಲ್ ಕೈಜೋಡಿಸಿದ್ದಾರೆ. [ಕಾಫಿ ಕಪ್ಪು ವಿಧಿವಶವಾದ ಪ್ರಸಂಗ]

ಈಗ ಬೆಂಗಳೂರಿನ ಪ್ರಮುಖ ಕಾಫಿ ಶಾಪ್ ಗಳಲ್ಲಿ ಸಿಗುವ ಅಂತಾರಾಷ್ಟ್ರೀಯ ಗುಣಮಟ್ಟದ ಕಾಫಿ ಫ್ಲೇವರ್ ಗಳು 'ಡ್ರಾಪ್ ಕಫೆ'(DropKaffe) ವೆಬ್ ಸೈಟ್ ಮೂಲಕ ಗ್ರಾಹಕರನ್ನು ತಲುಪುತ್ತಿದೆ. [ಕೆಫೆ ಕಾಫಿ ಡೇ vs ಟಾಟಾ ಸ್ಟಾರ್ ಬಕ್ಸ್]

ಆನ್ಲೈನ್ ಕಾಫಿ ಹೇಗೆ? ಏಕೆ?: ಬೆಂಗಳೂರಿನ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ನಿರತ ಕಾಫಿ ಪ್ರಿಯ ಮನಸ್ಸುಗಳಿಗೆ ಆಗಾಗ ಕಾಫಿ ಬ್ರೇಕ್ ಬೇಕಾಗುತ್ತದೆ. ಅದರೆ, ಕಾಫಿ ತಯಾರಿಸುವುದು ಒಂದು ಕಲೆ ಅದು ಎಲ್ಲರಿಗೂ ಕರಗತವಾಗಿರುವುದಿಲ್ಲ. ಇನ್ನು ಕಚೇರಿಯ ಕಾಫಿ ವೆಂಡಿಂಗ್ ಮಷೀನ್ ಆಗಲಿ, ಇನ್ ಸ್ಟಂಟ್ ಕಾಫಿಯಾಗಲಿ ನಾಲಿಗೆಯನ್ನು ತಣಿಸದು. [ಕಾಫಿ-ಕನ್ನಡಪ್ರೀತಿಯ ಕೊಂಡಿ ಕಳಚಿಕೊಂಡಿತು]

ಇಂಥ ಸಂದರ್ಭದಲ್ಲಿ ಆನ್ ಲೈನ್ ಮೂಲಕ ನಿಮ್ಮ ನೆಚ್ಚಿನ ಕಾಫಿ ಆಯ್ಕೆ ಮಾಡಿ ಪಡೆಯುವ ಸೌಲಭ್ಯವನ್ನು ಡ್ರಾಪ್ ಕಫೆ (DropKaffe) ನೀಡುತ್ತಿದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ, ಎಲ್ಲೆಲ್ಲಿ ಲಭ್ಯವಿದೆ ಮುಂತಾದ ವಿವರ ಮುಂದಿದೆ.

ವೆಬ್ ಸೈಟ್ ಮೂಲಕ ಗ್ರಾಹಕರನ್ನು ತಲುಪುತ್ತಿದೆ

ವೆಬ್ ಸೈಟ್ ಮೂಲಕ ಗ್ರಾಹಕರನ್ನು ತಲುಪುತ್ತಿದೆ

ಕಾಫಿ ಪ್ರಿಯರಾದ ಚೈತನ್ಯ ಚಿತ್ತ ಹಾಗೂ ಅವರ ಪತ್ನಿ ಡಿ ಲಕ್ಷ್ಮಿ ಅವರ ಕಾಫಿ ಬೇಡಿಕೆ ಈಗ ಸ್ಟಾರ್ಟ್ ಅಪ್ ಗೆ ರಕ್ಷಿತ್ ಕೇಜ್ರಿವಾಲ್ ಕೈಜೋಡಿಸಿದ್ದಾರೆ. ಜಗತ್ತಿನಲ್ಲಿ ನೀರು ಬಿಟ್ಟರೆ ಕಾಫಿಯನ್ನೇ ಜನ ಹೆಚ್ಚಾಗಿ ಹೀರುತ್ತಾರೆ. ಆನ್ ಲೈನ್ ಮೂಲಕ ಕಾಫಿ ನೀಡುವ ಸೌಲಭ್ಯ ಎಲ್ಲೂ ಕಂಡು ಬರಲಿಲ್ಲ. ಹೀಗಾಗಿ ಹೊಸತನವನ್ನು ಪರಿಚಯಿಸಿದ ಹೆಮ್ಮೆಯಿದೆ ಎಂದು ಚೈತನ್ಯ ಹೇಳಿದ್ದಾರೆ.

ಹೊಸತನವನ್ನು ಪರಿಚಯಿಸಿದ ಹೆಮ್ಮೆ

ಹೊಸತನವನ್ನು ಪರಿಚಯಿಸಿದ ಹೆಮ್ಮೆ

ಡೆಸ್ಕ್ ಇಂದ ಪ್ಯಾಂಟ್ರಿಗೆ ಹೋಗಿ ಕಾಲ ಕಳೆಯುವ ಸಮಯ ಲೆಕ್ಕಾಚಾರವಾಗುವ ಸಂದರ್ಭವೂ ಇರುವುದರಿಂದ ಆನ್ ಲೈನ್ ಮೂಲಕ ಕಾಫಿ ಆರ್ಡರ್ ಮಾಡಿ ನಿಮ್ಮ ಡೆಸ್ಕ್ ಗೆ ಕುಳಿತು ಹೀರುವ ಸೌಲಭ್ಯ ಎಲ್ಲರಿಗೂ ತಕ್ಷಣಕ್ಕೆ ಹಿಡಿಸುತ್ತದೆ. ಹೀಗಾಗಿ ಈ ವ್ಯವಸ್ಥೆ ಕಾರ್ಯರೂಪಕ್ಕೆ ತರಲಾಯಿತು.

ಆರ್ಡರ್ ಮಾಡುವುದು ಹೇಗೆ ?

ಆರ್ಡರ್ ಮಾಡುವುದು ಹೇಗೆ ?

DropKaffe ವೆಬ್ ಸೈಟಿಗೆ ಹೋದ ತಕ್ಷಣ ನಿಮ್ಮ ಇಮೇಲ್ ನೀಡಬೇಕಾಗುತ್ತದೆ. ಚಂದಾದಾರರಾದ ಮೇಲೆ ನಿಮ್ಮ ಆಯ್ಕೆಯನ್ನು ಮೆನು ನೋಡಿ ಗುರುತಿಸಬಹುದು. ಬೇರೆ ಎಲ್ಲಾ ಇ ಕಾಮರ್ಸ್ ತಾಣಗಳಂತೆ ನಿಮ್ಮ ಹೆಸರು, ವಿಳಾಸ, ಇಮೇಲ್, ಸಂಪರ್ಕ ಸಂಖ್ಯೆ ಪಡೆದುಕೊಳ್ಳಲಾಗುತ್ತದೆ.

ಆನ್ ಲೈನ್ ಶಾಪ್ ಅವಧಿ ಹಾಗೂ ಮೆನು

ಆನ್ ಲೈನ್ ಶಾಪ್ ಅವಧಿ ಹಾಗೂ ಮೆನು

ಆನ್ ಲೈನ್ ಶಾಪ್ ಅವಧಿ: ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆ ತನಕ.
ಏನೇನು ಸಿಗುತ್ತೆ: ಫಿಲ್ಟರ್ ಕಾಫಿ, ಅಮೆರಿಕಾನೋ, ಕೆಫೆ ಲಾಟ್ಟೆ, ಮಿಲ್ಕ್ ಶೇಕ್, ಸ್ಯಾಂಡ್ ವಿಚ್, ಚಿಲ್ಲಿ ಚಿಕನ್ ಬರ್ಗರ್,

ಬೆಲೆ ರೇಂಜ್, ಎಲ್ಲೆಲ್ಲಿ ಲಭ್ಯವಿದೆ

ಬೆಲೆ ರೇಂಜ್, ಎಲ್ಲೆಲ್ಲಿ ಲಭ್ಯವಿದೆ

ಎಲ್ಲೆಲ್ಲಿ ಲಭ್ಯವಿದೆ: ಕೋರಮಂಗಲ, ಇಂದಿರಾನಗರ, ಎಚ್ ಎಸ್ ಆರ್ ಲೇಔಟ್, ಬೊಮ್ಮನಹಳ್ಳಿ, ದೊಮ್ಮಲೂರು, ಇಜಿಎಲ್ ನಲ್ಲಿ ಲಭ್ಯವಿದೆ.

ಬೆಲೆ ರೇಂಜ್: ಫಿಲ್ಟರ್ ಕಾಫಿ 50 ರು ಮಿಕ್ಕ ಕಾಫಿ ಫ್ಲೇವರ್ ಗಳು 100 ರು ಒಳಗೆ, ಸ್ಯಾಂಡ್ ವಿಚ್, ಬರ್ಗರ್ ಕೂಡಾ 90 ರಿಂದ 120 ರು ಒಳಗಿದೆ.

ಮೊಬೈಲ್ ಫೋನಿನಲ್ಲೂ ಲಭ್ಯವಿದೆ

ಮೊಬೈಲ್ ಫೋನಿನಲ್ಲೂ ಲಭ್ಯವಿದೆ

ಜೊಮಾಟೋ ಅಪ್ಲಿಕೇಷನ್ ನಲ್ಲೂ ಡ್ರಾಪ್ ಕಫೆ ಕಾಣಿಸಿಕೊಂಡಿದೆ. ದಿನದ ಸ್ಪೇಷಲ್ ಜೊತೆಗೆ ವಾರದ ಮೆನು ಕಾರ್ಡ್ ಕೂಡಾ ಇಲ್ಲಿ ಲಭ್ಯವಿರುತ್ತದೆ. ಇಷ್ಟೇ ಕಪ್ ಆರ್ಡರ್ ಮಾಡಬೇಕು ಎಂಬ ನಿಯಮವೂ ಇಲ್ಲ, ನಗದು ಅಥವಾ ಕಾರ್ಡ್ ಬಳಸಿ ಪಾವತಿ ಮಾಡಬಹುದು. ಆರ್ಡರ್ ಮಾಡಿದ 1 ಗಂಟೆಯೊಳಗೆ ಬಿಸಿ ಬಿಸಿ ಕಾಫಿ ಅಥವಾ ಐಸ್ ಕೋಲ್ಡ್ ಕಾಫಿ ನಿಮ್ಮ ಡೆಸ್ಕ್ ನಲ್ಲೇ ಲಭ್ಯ.

ಡೆಲಿವರಿ ಹುಡುಗರು- ಕಾಫಿ ಏಂಜೆಲ್

ಡೆಲಿವರಿ ಹುಡುಗರು- ಕಾಫಿ ಏಂಜೆಲ್

ಎಂಟಕ್ಕೂ ಅಧಿಕ ಕಾಫಿ ಡೆಲಿವರಿ ಹುಡುಗರು ಫ್ಲಾಸ್ಕ್ ನಿಂದ ಕಾಫಿ ಬಗ್ಗಿಸಿ ನಿಮಗೆ ನೀಡುವ ಕಾಫಿ ಏಂಜೆಲ್ ಗಳಾಗಿ ನಿಮ್ಮ ಮುಂದಿರುತ್ತಾರೆ. ಇನ್ನೇಕೆ ತಡ ಕಾಫಿ ಆರ್ಡರ್ ಮಾಡಿ ಎಂಜಾಯ್ ಮಾಡಿ!

Array

ಪರಿಸರ ಸ್ನೇಹಿ ಪ್ಯಾಕಿಂಗ್ ಬಳಕೆ

ಪರಿಸರ ಸ್ನೇಹಿ ಪ್ಯಾಕಿಂಗ್ ಬಳಕೆ ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಿರುವ ಸಂಸ್ಥೆ.

ಆನ್ ಲೈನ್ ಕಾಫಿ ಕೆಫೆ ಸಂಪರ್ಕ

ಆನ್ ಲೈನ್ ಕಾಫಿ ಕೆಫೆ ಸಂಪರ್ಕ

ಟ್ವಿಟ್ಟರ್ ಖಾತೆ: @dropkaffe
ಫೇಸ್ ಬುಕ್ ಐಡಿ: https://www.facebook.com/dropkaffe
ಸಂಪರ್ಕ ಸಂಖ್ಯೆ: 080-49653059
ವೆಬ್ ಸೈಟ್ : http://dropkaffe.com/

English summary
DropKaffe is an online cafe' that brings you great coffee, all day cafe style food, snacks and other beverages. One can order for a South-Indian special filter or Americano along with variety of veg and Non veg burgers and Cookies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X