ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 3: ನಗರದಲ್ಲಿ ವಾಹನಗಳ ಸಂಖ್ಯೆ ವಿಪರೀತವಾಗಿದ್ದು, ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ, ಇದಕ್ಕೆ ಸಂಚಾರಿ ಪೊಲೀಸರಿಂದ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಹಾಗಾಗು ಟ್ರಾಫಿಕ್‌ ಮೇಲೆ ನಿಗಾ ಇಡಲು ಡ್ರೋಣ್‌ ಬಳಕೆಗೆ ಪೊಲೀಸರು ಮುಂದಾಗಿದ್ದಾರೆ.

ನಗರದ ಪ್ರಮುಖ ಜಂಕ್ಷನ್‌, ವೃತ್ತ ಹಾಗೂ ವಾಹನ ಹೆಚ್ಚಿರುವ ಪ್ರದೇಶಗಳಲ್ಲಿ ಈ ಡ್ರೋಣ್‌ ಬಳಕೆ ಮಾಡಲಾಗುತ್ತದೆ. ಸಿಗ್ನಲ್‌ ವ್ಯವಸ್ಥೆ ಇದ್ದರೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ, ವಾಹನಗಳ ಸಾಂದ್ರತೆಯ ನಿಖರ ಮಾಹಿತಿ ಕೊರತೆಯಿಂದಾಗಿ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ.

ಬೆಂಗಳೂರಿನ ಭಯಾನಕ ಟ್ರಾಫಿಕ್‌: 4 ವರ್ಷದಲ್ಲಿ ಸತ್ತವರೆಷ್ಟು?ಬೆಂಗಳೂರಿನ ಭಯಾನಕ ಟ್ರಾಫಿಕ್‌: 4 ವರ್ಷದಲ್ಲಿ ಸತ್ತವರೆಷ್ಟು?

ಇದಕ್ಕೀಗ ಪರಿಹಾರ ಕಂಡುಕೊಳ್ಳಲು ದಟ್ಟಣೆ ಹೆಚ್ಚಾಗಿರುವ ಜಾಗದಲ್ಲಿ ಡ್ರೋಣ್‌ ಮೂಲಕ ಚಿತ್ರೀಕರಣ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಅದನ್ನು ಸಂಚಾರ ನಿಯಂತ್ರಣ ಕೇಂದ್ರದಲ್ಲಿ ವಿಶ್ಲೇಷಿಸಿ ಹೊಸ ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Drone survey on Bengaluru traffic density soon!

ಬೆಂಗಳೂರಲ್ಲಿ 70 ಲಕ್ಷಕ್ಕೂ ಹೆಚ್ಚು ವಾಹನಗಳಿವೆ ಒಳ ಭಾಗದಲ್ಲಿ 25 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕೆ-ಸ್ಟೆಪ್ಸ್‌ ಮುಂದಾಳತ್ವದಲ್ಲಿ ಡ್ರೋಣ್‌ ಚಿತ್ರೀಕರಣ ಯೋಜನೆಯನ್ನು ಆರಂಭಿಸಲಾಗುತ್ತಿದೆ.

ಆಂಧ್ರದಲ್ಲಿ ಇಂತಹ ಪ್ರಯೋಗ ಯಶಸ್ವಿಯಾಗಿದೆ. ದಟ್ಟಣೆ ಸ್ಥಳಗಳಲ್ಲಿ ಡ್ರೋಣ್‌ ಬಳಕೆಯಿಂದಾಗಿ ಶೇ.20 ರಷ್ಟು ಟ್ರಾಫಿಕ್‌ ಸುಧಾರಿಸಿದೆ. ವಾಹನ ಸವಾರರಲ್ಲೂ ಜಾಗೃತಿ ಮೂಡಿದ್ದು, ತಪ್ಪು ಮಾಡಿದರೆ ದಂಡ ತೆರಬೇಕಾಗುತ್ತದೆ ಎಂಬ ಎಚ್ಚರಿಕೆ ಮೂಡುತ್ತದೆ.

English summary
Bengaluru city police have come forward to conduct drone camera survey on city traffic density. This survey will help police to analyse live traffic situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X