ಸಂಚಾರಿ ನಿಯಮ ಉಲ್ಲಂಘಿಸಿದರೆ ಡಿಎಲ್ ಅಮಾನತು
ಬೆಂಗಳೂರು, ಡಿ. 23: ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ವಾಹನ ಸವಾರರು ಮೊದಲ ಬಾರಿಗೆ ಸಂಚಾರ ನಿಯಮ ಉಲ್ಲಂಘಿಸಿದ್ದರೆ ಅವರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. [ಹೊಸ ವರ್ಷ : ಎಂ.ಜಿ. ರಸ್ತೆಯಲ್ಲಿ ಪೊಲೀಸ್ ಗಸ್ತು]
ಏನೇನು ಮಾಡಿದರೆ ಚಾಲನಾ ಪರವಾನಗಿ ಅಮಾನತು...?
- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು
- ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು
- ಬಾಡಿಗೆಗೆ ಹೋಗಲು ನಿರಾಕರಿಸುವುದು
- ನಿಗದಿಗಿಂತ ಹೆಚ್ಚು ಬಾಡಿಗೆ ಕೇಳುವುದು
- ಸರಕು ಸಾಗಣೆ ವಾಹನದಲ್ಲಿ ಜನರನ್ನು ಒಯ್ಯುವುದು
- ಅಪಘಾತ ಮಾಡಿದಾಗ ಅಲ್ಲಿ ನಿಲ್ಲದೆ ವಾಹನ ಓಡಿಸಿಕೊಂಡು ಹೋಗುವುದು
- ಪಾದಚಾರಿ ಮಾರ್ಗದಲ್ಲಿ ವಾಹನವನ್ನು ಅಪಾಯಕಾರಿಯಾಗಿ ಚಲಾಯಿಸುವುದು
- ವ್ಹೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದು
Comments
bengaluru traffic police driving licence suspension traffic rules ಬೆಂಗಳೂರು ಸಂಚಾರಿ ಪೊಲೀಸ್ ಚಾಲನೆ ಅಮಾನತು
English summary
Bengaluru traffic police have warned to put driving licence under suspension for violating traffic rules.