ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಒಂದು ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ಸೇವೆ

|
Google Oneindia Kannada News

ಬೆಂಗಳೂರು, ಜೂನ್ 8: ಬೆಂಗಳೂರಿನ ಒಂದು ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ಸಂಚರಿಸಲಿದೆ.

Recommended Video

ಚಿರು ಸಾವಿಗೆ ಹರಿದಾಡ್ತಿರೋ ಊಹಾಪೋಹಗಳೇನು? ಸತ್ಯ ಯಾವುದು? | Chiranjeevi Sarja had no bad habits

ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲು ಸಂಚರಿಸಲಿದೆ. ಹಾಗೆಯೇ ಮೆಟ್ರೋ 2ನೇ ಹಂತದಲ್ಲಿ ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆ ಕೂಡ ಜಾರಿಗೆ ಬರಲಿದೆ.

ಎರಡನೇ ಹಂತದಲ್ಲಿ 75 ಕಿ,ಮೀ ಮಾರ್ಗದ ಕಾರ್ಯ ನಡೆಯುತ್ತಿದೆ. ಈ ಮಾರ್ಗದಲ್ಲಿ ಕಾಮಗಾರಿ ಅಂತ್ಯವಾಗುವುದಕ್ಕೂ ಮುನ್ನ ರೈಲು ಸೇವೆ ಹೇಗಿರಬೇಕೆಂದು ರೂಪುರೇಷೆ ಸಿದ್ಧವಾಗಿದೆ.

ಲಾಕ್ ಡೌನ್; ನಮ್ಮ ಮೆಟ್ರೋಗೆ ಎರಡು ತಿಂಗಳಿನಲ್ಲಿ 74 ಕೋಟಿ ನಷ್ಟ ಲಾಕ್ ಡೌನ್; ನಮ್ಮ ಮೆಟ್ರೋಗೆ ಎರಡು ತಿಂಗಳಿನಲ್ಲಿ 74 ಕೋಟಿ ನಷ್ಟ

ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರವರೆಗಿನ 18.82 ಕಿ.ಮೀ ಮಾರ್ಗದಲ್ಲಿ ಚಾಲಕರಹಿತ ರೈಲುಗಳನ್ನು ಸಂಚರಿಸುವಂತೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.

ಇದಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ. ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಏನೇನು ಕಾರ್ಯ ಬಾಕಿ ಇದೆ

ಏನೇನು ಕಾರ್ಯ ಬಾಕಿ ಇದೆ

ಯುಟಿಎ ವ್ಯವಸ್ಥೆಯನ್ನು ಜಾರಿಗೆ ತರಲು ರೈಲು ಸೇವೆಯ ಪ್ರತಿಯೊಂದು ವ್ಯವಸ್ಥೆಯೂ ಬದಲಾಯಿಸಬೇಕು. ಎಂಜಿನ್ ಮತ್ತು ಬೋಗಿಗಳ ವಿನ್ಯಾಸ, ಸಿಗ್ನಲ್ ವ್ಯವಸ್ಥೆ, ಸಂವಹನ, ರೈಲುಗಳ ನಿಯಂತ್ರಣ ವ್ಯವಸ್ಥೆ, ವಿದ್ಯುತ್ ಪೂರೈಕೆ ಸೇರಿ ಎಲ್ಲವೂ ವಿಭಿನ್ನವಾಗಿರಲಿದೆ. ಈ ವ್ಯವಸ್ಥೆ ಅಳವಡಿಸುವುದಕ್ಕಾಗಿ ಇದೀಗ ಗುತ್ತಿಗೆ ಕರೆಯಲಾಗಿದೆ.

ಗ್ರೇಡ್ ಆಫ್ ಆಟೋಮೋಷನ್

ಗ್ರೇಡ್ ಆಫ್ ಆಟೋಮೋಷನ್

ಮೊದಲನೇ ಹಂತದಲ್ಲಿ ಗ್ರೇಡ್ ಆಫ್ ಆಟೋಮೋಷನ್ 2ನೇ ಶ್ರೇಣಿಯ ರೈಲು ಸೇವೆ ನೀಡಲಾಗುತ್ತದೆ. ಅದನ್ನು ಎರಡನೇ ಹಂತದಲ್ಲಿ ಜಿಒಎ 4ನೇ ಶ್ರೇಣಿಗೆ ರೈಲು ಸೇವೆ ಉನ್ನತೀಕರಿಸಲಾಗುತ್ತದೆ. ಜಿಒಎನಲ್ಲಿ ರೈಲು ನಿಲುಗಡೆ ಮತ್ತು ಸಂಚಾರ ಸ್ವಯಂಚಾಲಿತವಾಗಿದೆ.

ಒಟ್ಟು 15 ರೈಲುಗಳ ಸಂಚಾರ

ಒಟ್ಟು 15 ರೈಲುಗಳ ಸಂಚಾರ

ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗುತ್ತದೆ. ಒಟ್ಟು 6 ಬೋಗಿಗಳ 15 ರೈಲುಗಳನ್ನು ನೀಡುವಂತೆ ಗುತ್ತಿಗೆ ನೀಡಲಾಗಿದೆ. ಒಟ್ಟು 90 ಬೋಗಿಗಳು ಅನ್‌ಅಟೆಂಡರ್ಸ್ ಟ್ರೈನ್ ಆಪರೇಷನ್ ಅಡಿಯಲ್ಲಿ ಸಂಚಾರ ನಡೆಸಲಿವೆ.

ಚಾಲಕ ಅಥವಾ ಇತರೆ ಸಿಬ್ಬಂದಿ ಅಗತ್ಯವಿರುವುದಿಲ್ಲ

ಚಾಲಕ ಅಥವಾ ಇತರೆ ಸಿಬ್ಬಂದಿ ಅಗತ್ಯವಿರುವುದಿಲ್ಲ

ಜಿಒಎ4ರಿಂದ ಪ್ರತಿ ಕೆಲಸವನ್ನೂ ಮೊದಲೇ ನಿಗದಿ ಮಾಡಲಾಗಿರುತ್ತದೆ. ಅದಕ್ಕೆ ಚಾಲಕ ಸೇರಿ ಯಾವುದೇ ಸಿಬ್ಬಂದಿ ಅವಶ್ಯಕತೆಯಿರುವುದಿಲ್ಲ. ಸಿಗ್ನಲ್‌ಗಳ ಮೂಲಕ ರೈಲು ಚಾಲನೆ ಮಾಡುವ ವ್ಯವಸ್ಥೆ ಇರುತ್ತದೆ.ಸೆನ್ಸರ್ ಆಧಾರದಲ್ಲಿ ರೈಲುಗಳ ವೇಗ, ನಿಲ್ದಾಣಗಳಲ್ಲಿ ನಿಲುಗಡೆ ಸೇರಿ ಇನ್ನಿತರೆ ಕಾರ್ಯ ನಿಯಂತ್ರಿಸಬಹುದಾಗಿದೆ.

English summary
Driverless Metro will travel on one way in Bengaluru That is the Yellow Line in 2nd Phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X