ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಹನ ವೇಗಕ್ಕೆ ಬ್ರೇಕ್ ಹಾಕಲು ಡಿಜಿಟಲ್ ಡಿಸ್‌ಪ್ಲೇ ಬೋರ್ಡ್!

|
Google Oneindia Kannada News

ಬೆಂಗಳೂರು, ಮಾರ್ಚ್ 15: ವಾಹನಗಳ ವೇಗಕ್ಕೆ ಮಿತಿಯೇನೋ ಇದೆ ಆದರೆ ಪಾಲಿಸುವವರ ಸಂಖ್ಯೆ ತೀರಾ ಕಡಿಮೆ, ಒಂದೊಂದು ರಸ್ತೆಯಲ್ಲಿ ಒಂದೊಂದು ವೇಗಮಿತಿಯ ಬೋರ್ಡ್ ಗಳನ್ನು ಅಳವಡಿಸಿದರೂ ಕಂಡರೂ ಕಾಣಿಸದಂತೆ ಹೋಗುವವರೇ ಹೆಚ್ಚು.
ಇನ್ನುಮುಂದೆ ಹೀಗಾಗುವುದಿಲ್ಲ, ಅತಿಯಾದ ವೇಗ, ಅಪಘಾತಕ್ಕೆ ಕಾರಣ ಎನ್ನುವ ಹಾಗೆ ಆ ವೇಗವನ್ನು ಅಳೆಯುವ ಡಿಸ್ ಪ್ಲೇ ಬೋರ್ಡ್ ಗಳು ನಗರಕ್ಕೆ ಕಾಲಿಡಲಿವೆ. ದಾಖಲೆ ಆಧಾರಿತ ಈ ತಂತ್ರಜ್ಞಾನವನ್ನು ಅಳವಡಿಸಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಡಿಸ್ ಪ್ಲೇ ಬೋರ್ಡ್ ಅಳವಡಿಸಿದರೆ ವೇಗದ ಬಗ್ಗೆ ಚಾಲಕರು ಮತ್ತು ಟ್ರಾಫಿಕ್ ಪೊಲೀಸರ ನಡುವೆ ತಕರಾರು ಪ್ರಸ್ನೆಯೇ ಬರುವುದಿಲ್ಲ. ನಿಖರವಾದ ಮಾಹಿತಿಯನ್ನು ತೋರಿಸಿದ ಮೇಲೆ ಚಾಲಕರು ಒಪ್ಪಲೇ ಬೇಕಾಗುತ್ತದೆ. ಈ ತಂತ್ರಜ್ಞಾನಕ್ಕೆ ಡ್ರೈವರ್ ಫೀಡ್ ಬ್ಯಾಕ್ ಸೈನ್ಸ್ ಎಂದು ಕರೆಯಲಾಗುತ್ತಿದೆ. ಇದು ರೇಡಾರ್ ಆಧಾರಿತ ಯಂತ್ರವಾಗಿದ್ದು, ವಾಹನದ ವೇಗವನ್ನು ನಿಖರವಾಗಿ ಅಳೆದು ತೋರಿಸುತ್ತದೆ.

Driver feed back signs in Bengaluru roads soon

ಈ ಯಂತ್ರವನ್ನು ಮೊದಲು ಅಳವಡಿಸಿದ ಮೊದಲ ನಗರ ಕೊಲ್ಕತ್ತಾ .ಈ ಯಂತ್ರವನ್ನು ಅಳವಡಿಸಿದ ರಸ್ತೆಯಲ್ಲಿ ವಾಹನಗಳು ಸಾಗುವಾಗ ಅದರ ವೇಗವು ಬದಿಯಲ್ಲಿ ಅಳವಡಿಸಿರುವ ಡಿಜಿಟಲ್‌ ಡಿಸ್‌ಪ್ಲೇನಲ್ಲಿ ಮೂಡುತ್ತದೆ.ಇದನ್ನು ಅಳವಡಿಸಿದರೆ ದೇಶದ ಎರಡನೇ ನಗರ ಎನ್ನುವ ಖ್ಯಾತಿಗೆ ಬೆಂಗಳೂರು ಪಾತ್ರವಾಗಲಿದೆ. ಪ್ರತಿ ಅಂಕಿಯ ಅಳತೆಯು 11 ಇಂಚು ಎತ್ತರ, 5.6 ಇಂಚು ಅಗಲ ಇರಲಿದೆ. 2.5 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ.

ಕುಡಿದು ವಾಹನ ಓಡಿಸಿದರೆ ಪಾಠ ಹೇಳ್ತಾರೆ ಟ್ರಾಫಿಕ್ ಪೊಲೀಸರು!ಕುಡಿದು ವಾಹನ ಓಡಿಸಿದರೆ ಪಾಠ ಹೇಳ್ತಾರೆ ಟ್ರಾಫಿಕ್ ಪೊಲೀಸರು!

ಅಳವಡಿಕೆ ಎಲ್ಲೆಲ್ಲಿ: ತುಮಕೂರು ರಸ್ತೆ, ಹಳೆ ,ಮದ್ರಾಸ್ ರಸ್ತೆ, ಮೇಲುರಸ್ತೆಗಳು, ಹೊಸೂರು ರಸ್ತೆ, ರಿಂಗ್ ರಸ್ತೆ ಸೇರಿದಂತೆ ನಗರದಲ್ಲಿ ಅತಿ ವೇಗದಿಂದಾಗಿ ಅಪಘಾತ ಸಂಭವಿಸುತ್ತಿರುವ ರಸ್ತೆಗಳ 50ಕಡೆ ಈ ಸಾಧನಗಳು ಅಳವಡಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.

English summary
To control speed in roads like Hosur road, Tumkur road and Airport road Bengaluru traffic police have planning to install driver feed back signs which displays speed of vehicles on radar based.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X