ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶವವನ್ನು 70 ಕಿ.ಮೀ ಎಳೆದುಕೊಂಡು ಹೋದ ಬಸ್ ಚಾಲಕ

|
Google Oneindia Kannada News

Recommended Video

ಕೆ ಎಸ್ ಆರ್ ಟಿ ಸಿ ಬಸ್ ಡ್ರೈವರ್ ನ ಅಮಾನವೀಯ ಘಟನೆ ಬಯಲು | Oneindia Kannada

ಬೆಂಗಳೂರು, ಫೆಬ್ರವರಿ 05 : ಶಾಂತಿನಗರ ಒಂದನೇ ಡಿಪೋದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿ ಶವ ಪ್ರಕರಣ, ತಾನೇ ಅಪಘಾತ ಮಾಡಿರುವುದಾಗಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಮೊಯಿನುದ್ದೀನ್ ತಪ್ಪೊಪ್ಪಿಕೊಂಡಿದ್ದಾರೆ.

ಶಾಂತಿನಗರ ಒಂದನೇ ಡಿಪೋದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿ ಶವ, ಅಪಘಾತದಿಂದ ಮೃತಪಟ್ಟಿರುವುದಾಗಿ ತನಿಖೆ ವೇಳೆ ತಿಳಿದುಬಂದಿತ್ತು.

ಕೆಎಸ್ಆರ್ ಟಿಸಿ ಬಸ್- ಟೆಂಪೋ ಮುಖಾಮುಖಿ: ಐವರು ದುರ್ಮರಣಕೆಎಸ್ಆರ್ ಟಿಸಿ ಬಸ್- ಟೆಂಪೋ ಮುಖಾಮುಖಿ: ಐವರು ದುರ್ಮರಣ

ಅಪಘಾತ ನಡೆದ ಸ್ಥಳದಲ್ಲಿ ಬಸ್ ನಿಲ್ಲಿಸದೆ ಬಸ್ ಚಾಲಕ ಬಸ್ ಚಲಾಯಿಸಿಕೊಂಡು ಬಂದು, ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ, ಚಾಲಕ ಮೊಯಿನುದ್ದೀನ್ ವಿರುದ್ಧ ಸಾಕ್ಷ್ಯ ನಾಶಕ್ಕೆ ಯತ್ನ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನ ವಶಕ್ಕೆ ಪಡೆಯಲಾಗಿದೆ.

Driver confession: Dead body found KSRTC bus Dipot case

ವಿಚಾರಣೆ ವೇಳೆ ತಾನು ಅಪಘಾತ ಮಾಡಿರುವುದು ಹೌದು, ಅಪಘಾತವಾದ ತಕ್ಷಣ ಬಸ್ ನಿಲ್ಲಿಸದೆ ಚಲಾಯಿಸಿಕೊಂಡು ಹೋದೆ, ಪೊಲೀಸರಿಗೆ ಭಯ ಪಟ್ಟು ತಿಳಿಸದೆ ಮನೆಗೆ ಹೋಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ಮೃತ ವ್ಯಕ್ತಿ ಗುರುತು ಪತ್ತೆಯಾಗಿಲ್ಲ, ರಾತ್ರಿ ವೇಳೆಯಾಗಿದ್ದರಿಂದ ಆತನಿಗೂ ಅಪಘಾತ ನಡೆದ ಸ್ಥಳ ಯಾವುದು ಎಂದು ತಿಳಿದಿಲ್ಲ, ಘಟನೆ ನಡೆದ ಸ್ಥಳವನ್ನು ಪತ್ತೆ ಹಚ್ಚಿ ಪ್ರಕರಣವನ್ನು ಅಲ್ಲಿನ ಠಾಣೆಗೆ ವರ್ಗಾಯಿಸುವುದುಆಗಿ ವಿಲ್ಸನ್ ಗಾರ್ಡ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ: 2 ಬಸ್ ಮುಖಾಮುಖಿ ಡಿಕ್ಕಿ, 3ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯಹಾಸನ: 2 ಬಸ್ ಮುಖಾಮುಖಿ ಡಿಕ್ಕಿ, 3ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

ಮೊಯಿನುದ್ದೀನ್ ರಾತ್ರಿ 12.30 ರ ಸುಮಾರಿಗೆ ರಾಮನಗರ ಮತ್ತು ಚನ್ನಪಟ್ಟಣ ಮಧ್ಯೆ ಅಪಘಾತ ನಡೆದಿದ್ದು, ಚಾಲಕ ಬಸ್ ನಿಲ್ಲಿಸದೆ ಬೆಂಗಳೂರಿಗೆ ಬಂದಿದ್ದಾನೆ. ಕೊನೆಯ ನಿಲ್ದಾಣವಾದ ಶಾಂತಿನಗರದಲ್ಲಿ ಪ್ರಯಾಣಿಕರೆಲ್ಲಾ ಇಳಿದ ಬಳಿಕ ಚಾಲಕ ಬಸ್ ಡಿಪೋದ ಬಳಿ ಬಸ್ ನ ಕೆಳಗೆ ನೋಡಿದಾಗ ವ್ಯಕ್ತಿಯ ಶವ ಇರುವುದನ್ನು ಕಂಡಿದ್ದಾನೆ, ವ್ಯಕ್ತತಿಯ ದೇಹದಲ್ಲಿ ಸಂಪೂರ್ಣ ತರಚಿದ ಗಾಯಗಳಾಗಿತ್ತು. ಬಳಿಕ ಸಿಕ್ಕಿ ಬೀಳುತ್ತೇನೆ ಎಂದು ಆತಂಕದಲ್ಲಿ ಬಸ್ ಅನ್ನು ಡಿಪೋದ ಒಳಗೆ ತೆಗೆದುಕೊಂಡು ಹೋಗಿದ್ದು, ಬಸ್ ಕೆಳಗೆ ಸಿಲುಕಿದ್ದ ಶವ ಕೆಳಗೆ ಬಿದ್ದಿದೆ. ಬಳಿಕ ಶವವನ್ನು ಇತರ ಎರಡು ಬಸ್ ಗಳ ನಡುವೆ ಹಾಕಿ ಹೋಗಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

English summary
KSRTC bus driver, named Moinuddin has been confessed in hit and run case near Ramnagar. After the accident he was kept hide the case and the body was found in the bus in Shantinagar depot Yestarday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X