ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಮಂಡಳಿ ನಿರೀಕ್ಷೆ ಹುಸಿ, ನೀರಿನ ಸಮಸ್ಯೆ ಉಲ್ಬಣ

By Mahesh
|
Google Oneindia Kannada News

ಬೆಂಗಳೂರು, ಅ.30: ಬೇಸಿಗೆಯಲ್ಲಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುವುದು ಸಾಮಾನ್ಯ. ಸಂಗ್ರಹವಿರುವ ನೀರನ್ನು ಎಲ್ಲ ನಗರಗಳಿಗೂ ಸೂಕ್ತವಾಗಿ ಸರಬರಾಜು ಮಾಡುವಂತೆ ಜಲ ಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ ಮಾತು ಮತ್ತೊಮ್ಮೆ ನೆನಪು ಮಾಡಿಕೊಳ್ಳಬೇಕಿದೆ.

ಜನರಿಗೆ ತೊಂದರೆ ಆಗದಂತೆ ಕುಡಿಯುವ ನೀರು ಪೂರೈಸಲು ಸರ್ಕಾರ ಸಿದ್ಧವಾಗಿದೆ ಎಂದು ಸಿದ್ದರಾಮಯ್ಯ ಭರವಸೆ ಮಾತುಗಳಿಗೆ ಜಲ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ ಅವರು ಕೂಡಾ ಅಸ್ತು ಎಂದಿದ್ದರು ಆದರೆ, ಬೆಂಗಳೂರಿನಲ್ಲಿ ಮಳೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಪರಿಹಾರ ಕಂಡು ಬಂದಿಲ್ಲ. ಈಗ ಶೇಖರಣೆಯಲ್ಲಿರುವ ನೀರು ಮುಂದಿನ ಬೇಸಿಗೆ ತನಕ ಸಾಕಾಗುತ್ತದೆ. ಹಿಂಗಾರು ಮಳೆಯಿಂದಾಗಿ ಬೆಂಗಳೂರಿನ ಹೊರವಲಯಕ್ಕೆ ನೀರಿನ ಅಗತ್ಯತೆ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.

ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಸುಮಾರು 110 ಹಳ್ಳಿಗಳಿಗೆ ನೀರು ಒದಗಿಸಲು ಕನಿಷ್ಠ 10 ಟಿಎಂಸಿ ನೀರು ಬೇಕಾಗುತ್ತದೆ ಎಂದು ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗೆ ಹೈಕೋರ್ಟ್ ಕೂಡಾ ಎಲ್ಲಾ ನಿವಾಸಿಗಳಿಗೆ ನೀರು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಎಚ್ಚರಿಸಿತ್ತು. ಜಲಮಂಡಳಿ ಕೂಡಾ ಬೆಂಗಳೂರಿಗೆ ಇನ್ನಷ್ಟು ನೀರು ಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಕಾವೇರಿ ನದಿಯ 17.64 ಟಿಎಂಸಿಯಲ್ಲಿ 10 ಟಿಎಂಸಿ ನೀರು ಬೆಂಗಳೂರಿಗೆ ಒದಗಿಸುವಂತೆ ಜಲಮಂಡಳಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದೆ. ತ್ಯಾಗರಾಜ ಸಮಿತಿ ವರದಿ ಆಧಾರಿಸಿ ನೀರಿನ ಬೇಡಿಕೆ ಗಮನಿಸಿದರೆ 2021ರ ತನಕ ಬೆಂಗಳೂರಿಗೆ ಇನ್ನೂ 8.19 ಟಿಎಂಸಿ ನೀರಿನ ಅಗತ್ಯವಿದೆ.

ಜಲಮಂಡಳಿ-ಬಿಬಿಎಂಪಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ನಡುವೆ ಬೋರ್ ವೆಲ್ ಸಮಸ್ಯೆ, ಮಳೆ ಕೊಯ್ಲು ಫ್ಲಾಪ್ ಮುಂತಾದ ವಿಷಯಗಳತ್ತ ಗಮನ ಹರಿಸಬೇಕಿದೆ.

ಹೇಮಾವತಿ ನದಿ ಸಹಕಾರ

ಹೇಮಾವತಿ ನದಿ ಸಹಕಾರ

ಮುಂಗಾರು ಆಗಮನಕ್ಕೂ ಮುನ್ನ ಹೇಮಾವತಿ ನದಿ ಜಲಾಶಯ ಡೆಡ್ ಸ್ಟೋರೇಜ್ ಮಟ್ಟ ಮುಟ್ಟಿತ್ತು. ಅಲ್ಲಿಂದ ಕೆಆರ್ ಎಸ್ ಗೆ ನೀರು ಹರಿಸಿ ನಂತರ ಬೆಂಗಳೂರಿಗೆ ನೀರು ಪಡೆಯುವ ಉದ್ದೇಶ ಕೂಡಾ ವಿಫಲವಾಗಿತ್ತು.

ಹೇಮಾವತಿ ನೀರು ಬಿಡುಗಡೆಯ ನಂತರ KRS ಜಲಾಶಯದ ಮಟ್ಟ 1.03 ಟಿಎಂಸಿಗೆ ತಲುಪಿತ್ತು. ಇದರಿಂದ ಬೆಂಗಳೂರು ನಗರಕ್ಕೆ 2400 ಕ್ಯೂಸೆಕ್ಸ್ ನೀರನ್ನು ಮೀಸಲಿರಿಸಲಾಗಿತ್ತು. ದಿನವೊಂದಕ್ಕೆ ಬೆಂಗಳೂರು ನಗರಕ್ಕೆ ಅಗತ್ಯವಿರುವ 580 ಕ್ಯೂಸೆಕ್ಸ್ ನೀರಿನಂತೆ ಸುಮಾರು 1,250 ಎಂಎಲ್ ಡಿ ನೀರು ಅಗತ್ಯ ಕಂಡು ಬಂದಿತ್ತು.

ಬೆಂಗಳೂರಿನ ನೀರಿನ ದಾಹ

ಬೆಂಗಳೂರಿನ ನೀರಿನ ದಾಹ

ಬೆಂಗಳೂರು ನಗರಕ್ಕೆ 18 ಟಿಎಂಸಿ ಅಡಿ ಗಳಷ್ಟು ನೀರು ಪ್ರತಿ ವರ್ಷ ಬೇಕಾಗುತ್ತದೆ. ಇದು ಈಗ 20 ಟಿಎಂಸಿ ಅಡಿಗೆ ಬದಲಾಗಿದೆ. ಪ್ರತಿ ತಿಂಗಳ ಬಳಕೆ ಸರಾಸರಿ 1.5 ಟಿಎಂಸಿ ಅಡಿಗಳಷ್ಟಿದೆ. ನಗರಕ್ಕೆ ಸರಬರಾಜು ಮಾಡುವ ನೀರಿನ ಪ್ರಮಾಣ 200 MLD(million litres per day) ದಾಟುತ್ತಿದೆ. ಆದರೆ, ಕಾವೇರಿ 4ನೇ ಘಟ್ಟ 2ನೇ ಹಂತದ ಕಾಮಗಾರಿ ಮುಕ್ತಾಯವಾಗಿರುವುದು ಸಮಸ್ಯೆಯನ್ನು ಬಗೆಹರಿಸಿತ್ತು.

ಪರಿಹಾರಗಳು

ಪರಿಹಾರಗಳು

ಮಳೆಕೊಯ್ಲು : ಅಂತರ್ಜಲದ ಮಟ್ಟ ಹೆಚ್ಚಿಸಲು ರೈನ್ ವಾಟರ್ ಹಾರ್ವೆಸ್ಟಿಂಗ್ ಅಥವಾ ಮಳೆಕೊಯ್ಲಿನ ಮೂಲಕ ಎಲ್ಲರೂ ತಮ್ಮ ಅಳಿಲುಸೇವೆ ನೀಡಬಹುದು. ಹೆಚ್ಚು ಖರ್ಚಿಲ್ಲದೆ ಸರಳವಿಧಾನದಲ್ಲಿ ಮಳೆಕೊಯ್ಲು ಮಾಡಬಹುದು.

ಆಗಸದಿಂದ ಬೀಳುವ ಶುದ್ಧ ಮಳೆ ನೀರು ಸುಮ್ಮನೇ ಹರಿದು, ಚರಂಡಿ ಸೇರಿ ಮುಂದೆ ಕೊಳಚೆ ನೀರಾಗಿ ಎಲ್ಲೋ ವ್ಯರ್ಥವಾಗಿ ಹೋಗುತ್ತದೆ. ಅದರ ಬದಲಿಗೆ ಮಳೆ ನೀರನ್ನು ಹಿಡಿದಿಟ್ಟು ಬಳಕೆ ಮಾಡುವುದು ಅಥವಾ ಅಂತರ್ಜಲಕ್ಕೆ ಅದನ್ನು ಸೇರಿಸುವುದು ಮಳೆಕೊಯ್ಲಿನ ಹಿಂದಿರುವ ಸಿದ್ಧಾಂತ.

ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ವಸತಿಗಳಿದ್ದರೆ ಅದರಲ್ಲಿ 6 ಲಕ್ಷ ವಸತಿಗಳು ಪ್ರಮುಖ ಪ್ರದೇಶಗಳಲ್ಲಿದೆ. ಇದರಲ್ಲಿ 44,470 ಮನೆಗಳಲ್ಲಿ ಮಾತ್ರ ಮಳೆಕೊಯ್ಲು ಅಳವಡಿಕೆಗೆಯಾಗಿದೆ. ಸರಿಯಾಗಿ ಲೆಕ್ಕ ಹಾಕಿದರೆ ಶೇ 1 ರಷ್ಟು ಕೂಡಾ ಮಳೆಕೊಯ್ಲು ವಿಧಾನ ನಗರದ ಮನೆಗಳನ್ನು ತಲುಪಿಲ್ಲ

ಹೊಸ ಮನೆಗೆ ಸಲಹೆ

ಹೊಸ ಮನೆಗೆ ಸಲಹೆ

ಹೊಸದಾಗಿ ಮನೆ ಕಟ್ಟುತ್ತಿರುವವರು 6,000 ಲೀಟರ್ ನಿಂದ 9,000 ಲೀಟರ್ ಸಾಮರ್ಥ್ಯವಿರುವ ಸಂಪನ್ನು ಕಟ್ಟಿಸುವುದು ಒಳ್ಳೆಯದು. ಒಮ್ಮೆ ಬೀಳುವ ಸಾಧಾರಣ ಮಳೆಗೆ ಮೂರರಿಂದ ಮೂರೂವರೆ ಸಾವಿರ ಲೀಟರ್ ನೀರು ಸಂಪಲ್ಲಿ ಸಂಗ್ರಹವಾಗುತ್ತದೆ.

ನಿಮ್ಮ ಬಳಿ ಸಂಪು ಇಲ್ಲದಿದ್ದರೂ ಚಿಂತೆ ಮಾಡಬೇಕಿಲ್ಲ. ಮನೆಯ ಪಕ್ಕದಲ್ಲೇ 8-12 ಅಡಿಗಳ ಎತ್ತರದಲ್ಲಿ ಟ್ಯಾಂಕೊಂದನ್ನು ನಿರ್ಮಿಸಿ, ನೀರೆಲ್ಲವನ್ನು ಅಲ್ಲಿ ಸಂಗ್ರಹಿಸಿ ನಂತರ ಆ ನೀರನ್ನು ಬಳಸಿಕೊಳ್ಳಬಹುದು. ಈ ವ್ಯವಸ್ಧೆಯಲ್ಲಿ ಟ್ಯಾಂಕ್ ನಿಂದ ನಲ್ಲಿಗಳಿಗೆ ಸಂಪರ್ಕ ಕೊಟ್ಟು, ನೀರನ್ನು ನೇರವಾಗಿ ನಿಮ್ಮ ಬಳಕೆಗೆ ಉಪಯೋಗಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ
ಗದಗ ಮಾದರಿ

ಗದಗ ಮಾದರಿ

ಗದಗ ಮಾದರಿಯಲ್ಲಿ ಸಂಸದ ಡಿಕೆ ಸುರೇಶ್ ಹಾಗೂ ಶಾಸಕ ಡಿಕೆ ಶಿವಕುಮಾರ್ ಅವರು ಆರಂಭಿಸಿದ ಹೊಸ ನೀರಿನ ಕಿಯೋಸ್ಕ್ ಅಥವಾ ನೀರಿನ ಎಟಿಎಂಗಳನ್ನು ನಗರದ ಹೊರವಲಯದ ಬಿಬಿಎಂಪಿ ವ್ಯಾಪ್ತಿಯ ಗ್ರಾಮಗಳಿಗೆ ತ್ವರಿತವಾಗಿ ಅಳವಡಿಸುವುದು.

1 ರುಪಾಯಿಗೆ 10 ಲೀಟರ್ ಶುದ್ಧ ಕುಡಿಯುವ ನೀರು ಸಿಕ್ಕರೆ, ಬೋರ್ ವೆಲ್ ಗಳ ಸಮಸ್ಯೆಗಳಿಂದಲೂ ಮುಕ್ತರಾಗಬಹುದು. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಬಹುದು.[ ನೀರಿನ ಎಟಿಎಂ ಏನಿದು?]

English summary
Bangalore Drinking water crisis : The BWSSB needs at least 10 TMC of water for the 110 villages that have been merged into the BBMP area. It’s utility provided this information to the Kar­nataka High Court in response to a direction from the court that the civic authorities must ensure water to these areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X