ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಎಣ್ಣೆನೇ ಖರ್ಚಾಗಿಲ್ಲ!

|
Google Oneindia Kannada News

ಬೆಂಗಳೂರು, ಜನವರಿ 2: ಹೊಸ ವರ್ಷಾಚರಣೆ ಅಂಗವಾಗಿ ಭಾರಿ ಪ್ರಮಾಣದಲ್ಲಿ ರಾತ್ರಿ ಪಾರ್ಟಿಗಳೇನೋ ನಡೆದಿವೆ. ವರ್ಷಾಂತ್ಯದ ದಿನ ಭಾರಿ ಕಡಿಮೆ ಮದ್ಯ ಮಾರಾಟ ಆಗಿದೆ ಎಂಬ ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ.

ಅಬಕಾರಿ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಮಾರಾಟ ಶೇ.70ರಷ್ಟು ಕುಸಿತ ಕಂಡಿದೆ. ಡಿಸೆಂಬರ್ 31 ರ ರಾತ್ರಿ ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಮದ್ಯ ಮಾರಾಟ ಸಂಪೂರ್ಣ ಕುಸಿದು ಹೋಗಿದೆ.

ಹೊಸವರ್ಷಕ್ಕೆ ಬೆಂಗಳೂರಿಗರು ಗುಂಡು ಹಾಕದಿದ್ದರೆ ಸರ್ಕಾರಕ್ಕೆಷ್ಟು ನಷ್ಟ?ಹೊಸವರ್ಷಕ್ಕೆ ಬೆಂಗಳೂರಿಗರು ಗುಂಡು ಹಾಕದಿದ್ದರೆ ಸರ್ಕಾರಕ್ಕೆಷ್ಟು ನಷ್ಟ?

ಕಳೆದ ವರ್ಷ ದೇಶೀಯ ಮದ್ಯ ಸುಮಾರು 51 ಸಾವಿರ ಕೇಸ್ ಗಳಷ್ಟು ಮಾರಾಟ ಆಗಿದ್ದರೆ, ಈ ಬಾರಿ ಕೇವಲ 18 ಸಾವಿರ ಕೇಸ್ಗಳಷ್ಟು ಮಾತ್ರ ಮಾರಾಟವಾಗಿದೆ. ಬಿಯರ್ ಮಾರಾಟ ಕಳೆದ ವರ್ಷ 34 ಸಾವಿರ ಕೇಸ್ ಆಗಿದ್ದರೆ ಈ ಬಾರಿ ಕೇವಲ 15 ಸಾವಿರ ಕೇಸ್ ಮಾರಾಟವಾಗಿದೆ.

Drastic fall in liquor sale on eve of new year

ಈ ಭಾರಿ ಇಳಿಕೆಗೆ ಅಬಕಾರಿ ಇಲಾಖೆ ತತ್ತರಿಸಿದ್ದು, ಕಾರಣಗಳನ್ನು ಹುಡುಕಲು ಆರಂಭಿಸಿದೆ. ಈ ವರ್ಷ ಮದ್ಯ ಮಾರಾಟದಿಂದ ೧೮ ಸಾವಿರ ಕೋಟಿ ರೂ.ಗಳ ಆದಾಯ ನಿರೀಕ್ಷಿಸಿರುವ ಅಬಕಾರಿ ಇಲಾಖೆ ಈಗಾಗಲೇ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ಆದೇಶದ ಪರಿಣಾಮ ಮೂರೂವರೆ ಸಾವಿರ ಬಾರ್ ಗಳಿಗೆ ಬೀಗ ಹಾಕಿದ್ದರಿಂದ ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದೆ. ಇದೀಗ ಹೊಸ ವರ್ಷದ ವೇಳೆ ಆಗಿರುವ ಹಿನ್ನಡೆಯಿಂದ ಗುರಿ ತಲುಪುವುದು ಹೇಗೆಂಬ ಜಿಜ್ಞಾಸೆಗೆ ಬಿದ್ದಿದೆ.

ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಯುವತಿಯರ ಮೇಲೆ ಸಾಮೂಹಿಕ ಲೈಂಗಿಕ ನಡೆದ ಘಟನೆ ಹಿನ್ನೆಲೆಯಲ್ಲಿ ಈ ವರ್ಷ ಹೊಸ ವರ್ಷಾಚರಣೆ ನಿಷೇಧಿಸಬೇಕು ಎಂಬುದಾಗಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿತ್ತು.

ಬೆಂಗಳೂರು: ಒಂದೇ ರಾತ್ರಿಯಲ್ಲಿ 1367 ಡ್ರಿಂಕ್ ಆಂಡ್ ಡ್ರೈವ್ ಕೇಸು ದಾಖಲುಬೆಂಗಳೂರು: ಒಂದೇ ರಾತ್ರಿಯಲ್ಲಿ 1367 ಡ್ರಿಂಕ್ ಆಂಡ್ ಡ್ರೈವ್ ಕೇಸು ದಾಖಲು

ಆದ್ದರಿಂದ ಈ ವರ್ಷ ಸಂಭ್ರಮಕ್ಕೆ ಭಾರಿ ಅಡ್ಡಿಯಾಗುತ್ತದೆ ಎಂದೇ ಭಾವಿಸಲಾಗಿತ್ತು. ಅಂತಿಮವಾಗಿ ಪೊಲೀಸ್ ಇಲಾಖೆ ನೀಡಿದ ಭರವಸೆ ನೀಡಿತ್ತಿದ್ದಾರೂ ಅನಾಹುತಕ್ಕೆ ಇಲಾಖೆಯನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿತ್ತ. ಇದರ ಪರಿಣಾಮ ಬೆಂಗಳೂರಿನಲ್ಲಿ 15 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕೋರ್ಟ್ ನಿರ್ದೇಶನದಿಂದ ಪೊಲೀಸರು ಭಾರಿ ಕಟ್ಟುನಿಟ್ಟಾದ ಕ್ರಮ ಕೈಗೊಂಡರೆ ಮತ್ತೊಂದೆಡೆ ಚುನಾವಣಾ ವರ್ಷವಾದ್ದರಿಂದ ಗಲಾಟೆಗಳು ಸಂಭವಿಸಬಹುದು ಎಂಬ ಕಾರಣಕ್ಕೆ ಹೆಚ್ಚು ಜನರು ಮನೆಯಿಂದ ಹೊರ ಬರಲಿಲ್ಲ.

ಹೀಗಾಗಿ ಬಹುತೇಕ ಜನರು ಡಿಸೆಂಬರ್ 31 ರಂದು ಮದ್ಯ ಮತ್ತು ಬಿಯರ್ ಖರೀದಿಸದೇ ಕೆಲ ದಿನಗಳ ಮುಂಚಿತವಾಗಿಯೇ ತಮ್ಮ ತಮ್ಮ ಮನೆಗಳಲ್ಲಿ ಸಂಗ್ರಹಿಸಿಟ್ಟು ಮನೆಯಲ್ಲೇ ಪಾರ್ಟಿಗಳನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಈ ವರ್ಷ ಡಿಸೆಂಬರ್ 31 ರಂದು ಮದ್ಯ ಮತ್ತು ಬಿಯರ್ ಖರೀದಿಸಿದವರ ಸಂಖ್ಯೆ ಈ ಬಾರಿ ಶೇ.70 ರಷ್ಟು ಕುಸಿದಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

English summary
Statistics of Department of excise reveal that only 70 percent of liquor was sold comparing to last year on the eve of new year celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X