ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಚಿವ ಡಾ. ಸುಧಾಕರ್ ಗರಂ!

|
Google Oneindia Kannada News

ಬೆಂಗಳೂರು, ಜುಲೈ 7: ಕೋವಿಡ್ 19 ರೋಗಿಗಳ ಚಿಕಿತ್ಸೆ ಮತ್ತು ಸೌಲಭ್ಯಗಳ ವಿಷಯದಲ್ಲಿ ಲೋಪಗಳಿಗೆ ಅವಕಾಶವಿಲ್ಲದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸೂಚನೆ ನೀಡಿದರು. ಟೆಲಿ ಐಸಿಯು ಸೌಲಭ್ಯ ಒದಗಿಸದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿ ಪರಿಶೀಲನೆ ನಡೆಸಿದ ಸಚಿವರು ಸಭೆಯಲ್ಲಿ ಈ ಕುರಿತು ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿ

ಮಾಧ್ಯಮಗಳಲ್ಲಿ ಆಸ್ಪತ್ರೆಗೆ ಸಂಬಂಧಿಸಿದಂತೆ ನಕಾರಾತ್ಮಕ ವರದಿಗಳು ಬರುತ್ತಿವೆ. ಹಗಲು- ರಾತ್ರಿ ಲೆಕ್ಕಿಸದೆ ಮುಖ್ಯ ಮಂತ್ರಿ ಆದಿಯಾಗಿ ಎಲ್ಲರೂ ಕೆಲಸ ಮಾಡುತ್ತಿರುವಾಗ ಇಂತಹ ಲೋಹಗಳನ್ನು ಸಹಿಸಲು ಸಾಧ್ಯವಿಲ್ಲ. ನಿಮಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡಲು ಸಿದ್ಧ ಆದರೆ ತಪ್ಪುಗಳು ಮರುಕಳಿಸಬಾರದು ಎಂದು ತಾಕೀತು ಮಾಡಿದರು.

60 ವಯಸ್ಸಿಗಿಂತ ಮೇಲ್ಪಟ್ಟ ಹಿರಿಯರಿಗೆ ಹೋಂ ಐಸೋಲೇಷನ್60 ವಯಸ್ಸಿಗಿಂತ ಮೇಲ್ಪಟ್ಟ ಹಿರಿಯರಿಗೆ ಹೋಂ ಐಸೋಲೇಷನ್

ಬೆಂಗಳೂರು ನಗರದಲ್ಲಿ ಸೋಂಕಿತರು ಮತ್ತು ಮರಣ ಹೊಂದುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆರೋಗ್ಯ, ವೈದ್ಯಶಿಕ್ಷಣ, ಬಿಬಿಎಂಪಿ ಹಿರಿಯ ಅಧಿಕಾರಿಗಳು, ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ, ರೋಗಿಗಳ ಜೊತೆ ಸಚಿವರು ಸಂವಾದ ನಡೆಸಿದ್ದಾರೆ.

 ಪ್ರತಿದಿನ ಸರಿಯಾದ ಮಾಹಿತಿಯನ್ನು ನೀಡಿ

ಪ್ರತಿದಿನ ಸರಿಯಾದ ಮಾಹಿತಿಯನ್ನು ನೀಡಿ

ಪ್ರತಿದಿನ ದಾಖಲು ಆಗುತ್ತಿರುವ ಸೋಂಕಿತರು ಮತ್ತು ಗುಣಮುಖರಾಗಿ ಬಿಡುಗಡೆ ಆಗುವವರ ಸಂಖ್ಯೆ ಯನ್ನು ಅಧಿಕೃತವಾಗಿ ತಿಳಿಸುವ ವ್ಯವಸ್ಥೆ ಮಾಡಬೇಕು. ಹಾಗೆಯೇ ಸಾವಿನ ಸಂಖ್ಯೆ ಮತ್ತು ಕಾರಣಗಳು, ಗಂಭೀರ ಸ್ಥಿತಿಯಲ್ಲಿ ಇರುವವರು ಮಾಹಿತಿ ನೀಡಬೇಕು ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ಅವರು ವೈದ್ಯಾಧಿಕಾರಿಗಳಿಗೆ ತಿಳಿಸಿದರು. ರೋಗಿಗಳು ಮರಣ ಹೊಂದಿದಾಗ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪರಿಣಿತರ ಜತೆ ಹಂಚಿಕೊಂಡು ಕಾರಣಗಳನ್ನು ಅಧ್ಯಯನ ಮಾಡಿ ಲೋಪ ಮರುಕಳಿಸದಂತೆ ಎಚ್ಚರವಹಿಸಬೇಕು. ಮರಣ ಕಾರಣಗಳ ವಿಶ್ಲೇಷಣೆಗೆ ಪರಿಣಿತ ವೈದ್ಯರೊಬ್ಬರನ್ನು ನಿಯೋಜಿಸುವಂತೆ ಸಚಿವರು ನಿದೇ೯ಶಕರಿಗೆ ಆದೇಶಿಸಿದರು.

 ಚಿಕಿತ್ಸಾ ವಿಧಿ- ವಿಧಾನಗಳ ಮಾಹಿತಿ ಮುಚ್ಚಿಡಬೇಡಿ

ಚಿಕಿತ್ಸಾ ವಿಧಿ- ವಿಧಾನಗಳ ಮಾಹಿತಿ ಮುಚ್ಚಿಡಬೇಡಿ

ಅನುಸರಿಸುತ್ತಿರುವ ಚಿಕಿತ್ಸಾ ವಿಧಿ- ವಿಧಾನಗಳು, ಡಯಾಲಿಸಿಸ್ ಸೌಲಭ್ಯ ಪಡೆಯುತ್ತಿರುವವರ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಪ್ರತಿದಿನವೂ ಕೊಡಬೇಕು. ಹಾಗೆಯೇ ಗರ್ಭಿಣಿಯರ ವಿವರಗಳನ್ನು ನೀಡಲು ಸೂಚಿಸಿದರು.

ಕೋವಿಡ್ ಸೇವೆ: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ NEET + 5 ಅಂಕಕೋವಿಡ್ ಸೇವೆ: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ NEET + 5 ಅಂಕ

ಈ ಹಿಂದೆ ಸೂಚನೆ ನೀಡಿದ್ದಂತೆ ಟೆಲಿ ಐಸಿಯುಗೆ ಸೇರ್ಪಡೆ ಮಾಡಿಲ್ಲದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆದಷ್ಟು ಬೇಗ ಸೇರ್ಪಡೆ ಮಾಡುವಂತೆ ತಿಳಿಸಿದರು. ದೇಶದಲ್ಲೇ ವಿನೂತನ ವ್ಯವಸ್ಥೆ ಎಂದೇ ಹೆಸರಾಗಿರುವ ಟೆಲಿ ಐಸಿಯು ವ್ಯವಸ್ಥೆಗೆ ನಗರದಲ್ಲೇ ಇರುವ ವಿಕ್ಟೋರಿಯಾ, ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗಳಿಗೆ ಕಳೆದ ತಿಂಗಳೇ ಮಂಜೂರಾಗಿದೆ.

 ಐಸಿಯುನಲ್ಲಿರುವ ರೋಗಿಗಳ ಜತೆ ಸಮಾಲೋಚನೆ

ಐಸಿಯುನಲ್ಲಿರುವ ರೋಗಿಗಳ ಜತೆ ಸಮಾಲೋಚನೆ

ಇದಾದ ಬಳಿಕ ವಿಡಿಯೋ ಸಂವಾದದ ಮೂಲಕ ಐಸಿಯು, ವಾರ್ಡುಗಳಲ್ಲಿರುವ ರೋಗಿಗಳ ಜತೆ ಸಮಾಲೋಚನೆ ನಡೆಸಿ ಚಿಕಿತ್ಸೆ ಮತ್ತು ಸೌಲಭ್ಯಗಳ ಗುಣಮಟ್ಟದ ಬಗ್ಗೆ ವಿಚಾರಿಸಿದರು. ಊಟದ ಗುಣಮಟ್ಟದ ಬಗ್ಗೆ ವಿಚಾರಿಸಿದರು. ಅದಕ್ಕೆ ಎಲ್ಲಾ ರೋಗಿಗಳು ತೃಪ್ತಿ ವ್ಯಕ್ತಪಡಿಸಿದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಊಟ- ಸ್ವಚ್ಛತೆ ಸಹಿತ ಮೇಲ್ವಿಚಾರಣೆ ನೋಡಿಕೊಳ್ಳಲು ಹಿರಿಯ ಅಧಿಕಾರಿ ಸೋಮಣ್ಣ ಕಡಕೊಳ ಅವರನ್ನು ನೇಮಿಸಲಾಗಿದೆ. ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲೂ ಅದೇ ಕ್ರಮ ಅನುಸರಿಸಬೇಕು ಎಂದು ನಿದೇ೯ಶಕರಿಗೆ ಸೂಚನೆ ನೀಡಿದರು.

 ಕೊವಿಡ್ 19 ಸೇವೆಗೆ ಅಂತಿಮ ವಷ೯ದ ವಿದ್ಯಾಥಿ೯ಗಳು

ಕೊವಿಡ್ 19 ಸೇವೆಗೆ ಅಂತಿಮ ವಷ೯ದ ವಿದ್ಯಾಥಿ೯ಗಳು

ದಾಖಲಾಗುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರು ಮತ್ತು ಶುಶ್ರೂಷ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಐಸಿಯು ಹಾಗೂ ಹೈ ಪ್ಲೊ ಆಕ್ಸಿಜನ್‌ ವಾಡು೯ಗಳಲ್ಲಿ ಮೂರು ರೋಗಿಗಳಿಗೆ ಒಬ್ಬ ನಸ್‌೯ ಕಡ್ಡಾಯವಾಗಿ ಇರಬೇಕು. ಕೊರತೆಯಿರುವ ಕಡೆ ತಾತ್ಕಾಲಿಕ ನೇಮಕ ಮಾಡಿಕೊಳ್ಳಬೇಕು. ನೇಮಕ ಆಗುವತನಕ ಸಕಾ೯ರಿ ಮತ್ತು ಖಾಸಗಿ ಕಾಲೇಜುಗಳ ಅಂತಿಮ ವಷ೯ದ ವಿದ್ಯಾಥಿ೯ಗಳನ್ನು ನಿಯೋಜಿಸುವಂತೆ ಸೂಚಿಸಿದರು. ಐಸಿಯು ಮತ್ತು ಹೈ ಪ್ಲೊ ಆಕ್ಸಿಜನ್‌ ವಾಡು೯ಗಳಿಗೆ ತರಬೇತಿ ಪಡೆದವರು ಬೇಕು. ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಜನರಲ್‌ ವಾಡು೯ಗಳಲ್ಲಿರುವ ತರಬೇತಿ ಪಡೆದವರನ್ನು ಅಲ್ಲಿಗೆ ವಗಾ೯ಯಿಸಿ ಅಂತಿಮ ವಷ೯ದ ವಿದ್ಯಾಥಿ೯ಗಳನ್ನು ಸೆಂಟರ್‌ಗಳಲ್ಲಿ ಬಳಸಬಹುದು. ವೈದ್ಯರ ಕೊರತೆ ನಿವಾರಿಸಿಕೊಳ್ಳಲು ಆಯುಷ್‌ ಮತ್ತು ಪಿಜಿ ವಿದ್ಯಾಥಿ೯ಗಳನ್ನು ಆದ್ಯತೆ ಮೇರೆಗೆ ಬಳಸಿಕೊಳ್ಳಿ ಎಂದರು.

English summary
Medical Education Minister Dr Sudhakar has instructed management to deploy Tele--ICU facilities in Victoria Hospital and had video conference with patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X