ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇನಾಮಿ ಆಸ್ತಿ ಪತ್ತೆ: ಕೆಎಎಸ್ ಅಧಿಕಾರಿ ಸುಧಾಗೆ ಇಡಿ ಉರುಳು ?

|
Google Oneindia Kannada News

ಬೆಂಗಳೂರು ನ. 11: ಹಿರಿಯ ಕೆಎಎಸ್ ಅಧಿಕಾರಿ ಡಾ. ಸುಧಾ ಅವರ ಮನೆ ಹಾಗೂ ಬೇನಾಮಿದಾರ ರ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಕಳೆದ ಮೂರು ದಿನದಿಂದ 50 ಕೋಟಿ ರೂ.ಗೂ ಅಧಿಕ ಮೊತ್ತದ ಆಸ್ತಿ ಪತ್ತೆ ಹಚ್ಚಿದ್ದಾರೆ. ಸುಧಾ ಅವರ ಅಕ್ರಮ ಸಂಪತ್ತು ನೋಡಿ ಎಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಡಾ. ಸುಧಾ ಅವರ ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ 200ಕ್ಕೂಹೆಚ್ಚು ದಾಖಲೆ ಪತ್ರಗಳು, 50ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ವಿವರ ಲಭ್ಯವಾಗಿವೆ. ಊಹೆಗೂ ನಿಲುಕದ ರೀತಿ ಆಸ್ತಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಧಾ ಅವರ ಅಕ್ರಮ ಆಸ್ತಿ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಹಾಗೂ ಅದಾಯ ತೆರಿಗೆ ಇಲಾಖೆಗೆ ವಹಿಸುವ ಬಗ್ಗೆ ಎಸಿಬಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ವಿಚಾರವಾಗಿ ಇಂದು ಹಿರಿಯ ಎಸಿಬಿ ಅಧಿಕಾರಿಗಳು ಸತತ ಸಭೆ ನಡೆಸಿ ಚರ್ಚೆ ನಡೆಸಿರುವ ಮಾಹಿತಿಯನ್ನು ಎಸಿಬಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸುಧಾ ಕೆಎಎಸ್ ಮನೆ ದಾಳಿ, ಎಸಿಬಿ ಕೊಟ್ಟ ಫುಲ್ ಡಿಟೈಲ್ಸ್ಸುಧಾ ಕೆಎಎಸ್ ಮನೆ ದಾಳಿ, ಎಸಿಬಿ ಕೊಟ್ಟ ಫುಲ್ ಡಿಟೈಲ್ಸ್

ಸುಧಾ ಅವರು ಬಿಡಿಎ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವೇಳೆ ಕೋಟ್ಯಂತರ ರೂ.ಗಳನ್ನು ಬೇನಾಮಿಯಾಗಿ ವಹಿವಾಟು ನಡೆಸಿರುವ ಸಂಶಯ ವ್ಯಕ್ತವಾಗಿದ್ದು, ಇದೀಗ ಇಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ತಯಾರಿ ನಡೆದಿದೆ.

Dr Sudha KAS Illegal Assets case: Directorate of Enforcement likely to probe

ಕೆಎಎಸ್ ಅಧಿಕಾರಿ ಸುಧಾ ನಿವಾಸದಲ್ಲಿ ಸಿಕ್ಕ ಚಿನ್ನ, ಬೆಳ್ಳಿ ಎಷ್ಟು? ಕೆಎಎಸ್ ಅಧಿಕಾರಿ ಸುಧಾ ನಿವಾಸದಲ್ಲಿ ಸಿಕ್ಕ ಚಿನ್ನ, ಬೆಳ್ಳಿ ಎಷ್ಟು?

Recommended Video

ಅಬ್ಬಾ ಇನ್ನೂ ಕೆಲವೇ ದಿನ ಭಾರತಕ್ಕೆ ಕೊರೋನ ಲಸಿಕೆ ! | Sputnik v Covid-19 Vaccine | Oneindia Kannada

ಡಾ. ಸುಧಾ ಅವರ ಬೇನಾಮಿ ರೇಣುಕಾ ಸೇರಿದಂತೆ ಏಳಕ್ಕೂ ಹೆಚ್ಚು ಕಡೆ ದಾಳಿ ನಡೆದಿತ್ತು. ಸುಧಾ ಅವರಿಗೆ ಸೇರಿದ್ದ ಕೆ.ಜಿ ಗಟ್ಟಲೆ ಚಿನ್ನಾಭರಣ ಸ್ವರ್ಣ ಸಾಮ್ರಾಜ್ಯ ಬೆಳಕಿಗೆ ಬಂದಿತ್ತು. ಇದೀಗ 50 ಕೋಟಿ ರೂ. ಮೌಲ್ಯದ ಅಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ಇಡಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.

English summary
Dr Sudha KAS Illegal Assets case: Directorate of Enforcement and Income Tax department likely to probe this case as it involved huge amount of seized money and valuables.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X