ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೈರಪ್ಪನವರ ಹೊಸ ಕಾದಂಬರಿ 'ಯಾನ' ಪ್ರೀ ಬುಕ್ಕಿಂಗ್

By Mahesh
|
Google Oneindia Kannada News

ಬೆಂಗಳೂರು, ಜು.21: ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಡಾ.ಎಸ್ ಎಲ್ ಭೈರಪ್ಪ ಅವರ ಹೊಚ್ಚ ಹೊಸ ಕಾದಂಬರಿ 'ಯಾನ' ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ಯಾನ ಕಾದಂಬರಿ ಬಗ್ಗೆ ಫೇಸ್ ಬುಕ್ ನಲ್ಲಿ ಚರ್ಚೆ ಆರಂಭಗೊಂಡಿದೆ.

ಓದುಗರು ಹಾಗೂ ಕನ್ನಡ ಪುಸ್ತಕ ಪ್ರಕಾಶಕರ ಪಾಲಿನ ಆಪ್ತರೆನಿಸಿರುವ ಭೈರಪ್ಪ ಅವರ 'ಯಾನ' ಕಾದಂಬರಿಯ ಕಥಾವಸ್ತುವಿನ ಗುಟ್ಟು ಇನ್ನೂ ರಟ್ಟಾಗಿಲ್ಲ. ಆಗಸ್ಟ್ ಮೊದಲ ವಾರದಲ್ಲಿ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಇದಕ್ಕೂ ಮುನ್ನ ಆಸಕ್ತರು ಮುಂಗಡವಾಗಿ ಪುಸ್ತಕವನ್ನು ಕಾಯ್ದಿರಿಸಿಕೊಳ್ಳಬಹುದು.

ಈ ಸೌಲಭ್ಯವನ್ನು ಕನ್ನಡ ಓದುಗರಿಗೆ ಸುನೀಲ್ ಎಸ್. ಪಾಟೀಲ್ ಹಾಗೂ ಬೆಂಗಳೂರಿನ ಸಚಿನ್ ಕುಡ್ತುರಕರ್ ಅವರ ಅಫೋರ್ಡಬಲ್ (a4dable.in) ಎಂಬ ಹೆಸರಿನ ವೆಬ್ ತಾಣ ಒದಗಿಸುತ್ತಿದೆ.

ಇತ್ತೀಚೆಗೆ ಭೈರಪ್ಪ ಹೊಗಳಿದ ಕರಣಂ ಪವನ್ ಪ್ರಸಾದ್ ಬರೆದಿರುವ 'ಕರ್ಮ' ಕೃತಿಯನ್ನು ಆನ್ ಲೈನ್ ಮೂಲಕ ರಾಜ್ಯದೆಲ್ಲೆಡೆ ಮಾರಾಟ ಮಾಡಿದ್ದು ಒಳ್ಳೆ ಅನುಭವ ನೀಡಿದೆ. ಈ ಸೌಲಭ್ಯ ವಿಶ್ವದೆಲ್ಲೆಡೆ ಲಭ್ಯವಾಗಿದ್ದು, ಪುಸ್ತಕ ಬಿಡುಗಡೆಯಾದ ಮುರ್ನಾಲ್ಕು ದಿನದೊಳಗೆ ಎಷ್ಟೇ ದೂರದ ವಿಳಾಸವಾದರೂ ತಲುಪಿಸುವ ಹೊಣೆ ನಮ್ಮದು ಎಂದು ಸಚಿನ್ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

Dr S.L Bhyrappa new Novel Yaana Pre Booking details

ಇಂಗ್ಲೀಷ್ ಹಳೆ, ಹೊಸ ಪುಸ್ತಕ ಖರೀದಿ ಸಾಕಷ್ಟು ವೆಬ್ ತಾಣಗಳಿವೆ. ಕನ್ನಡದಲ್ಲೂ ಟೋಟಲ್ ಕನ್ನಡ, ಸಪ್ನ, ಅಕೃತಿ ಬುಕ್ ಹೌಸ್, ಕನ್ನಡ ಸ್ಟೋರ್, ಬುಕ್ಸ್ ಫಾರ್ ಯೂ ಅಲ್ಲದೆ ಫ್ಲಿಪ್ ಕಾರ್ಟ್ ಮುಂತಾದ ಆನ್ ಲೈನ್ ಶಾಪಿಂಗ್ ವೆಬ್ ತಾಣಗಳು ಕನ್ನಡ ಪುಸ್ತಕಗಳನ್ನು ಆನ್ ಲೈನ್ ಮೂಲಕ ಖರೀದಿಸುವ ಸೌಲಭ್ಯ ಒದಗಿಸಿವೆ. ಇವೆಲ್ಲದರ ನಡುವೆ ಅಫೊರ್ಡಬಲ್ ಹೇಗೆ ಭಿನ್ನ? [ಈ ವೆಬ್ ತಾಣದ ಬಗ್ಗೆ ಇಲ್ಲಿ ಓದಿ]

'ನಾನು ಬರೆಯಲು ಆರಂಭಿಸಿದಾಗಿನಿಂದ ಇದುವರೆಗೂ ಸಾಹಿತ್ಯ ನಿರ್ಮಿತಿಯು ಬದಲಾವಣೆ, ಆಧುನಿಕತೆ ಮತ್ತು ಹಿಂದುಳಿದವರನ್ನು ಮೇಲೆತ್ತುವ ಪ್ರಯತ್ನದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು, ಹಾಗೆ ತೊಡಗಿಸಿಕೊಳ್ಳದ ಬರೆಹವು ಕೇವಲ ಬೂಸಾ ಎಂಬ ಒತ್ತಡವನ್ನು ಹಲವು ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳು ಹಾಕುತ್ತಿವ' ಎಂದು ಸರಸ್ವತಿ ಸಮ್ಮಾನ್ ಸ್ವೀಕರಿಸಿದ ನಂತರದ ಭಾಷಣದಲ್ಲಿ ಎಸ್ ಎಲ್ ಭೈರಪ್ಪ ಅವರು ಹೇಳಿದ್ದರು. [ಭಾಷಣದ ಪೂರ್ಣ ಪಾಠ ಇಲ್ಲಿ ಓದಿ]

ಈ ಹಿಂದಿನ ಕಾದಂಬರಿ ಕವಲು : ಪ್ರಸ್ತುತ ದಿನಮಾನಗಳಲ್ಲಿ ಮಹಿಳಾ ಪರ ಕಾನೂನುಗಳ ದುರುಪಯೋಗ, ಮಹಿಳಾ ಮಣಿಗಳ ಹೋರಾಟದ ರೀತಿ, ಆಧುನಿಕ ಮಹಿಳಾವಾದ ಕಾರಣ ಛೀದ್ರವಾಗುತ್ತಿರುವ ಭಾರತೀಯ ಕೌಟುಂಬಿಕ ವ್ಯವಸ್ಥೆಗಳ ಬಗ್ಗೆ ಕವಲಿನಲ್ಲಿ ಚೆನ್ನಾಗಿ ಮನಸ್ಸಿಗೆ ನಾಟುವಂತೆ ಚಿತ್ರಿತವಾಗಿದೆ.

ಉನ್ನತ ಶಿಕ್ಷಣಗಳಲ್ಲಿ ಪಾಶ್ಚಿಮಾತ್ಯದ ಪ್ರಭಾವೋ ಏನೋ ಆಧುನಿಕ ಮಹಿಳೆಯರು, ಮುಕ್ತ ಸಂಸ್ಕೃತಿಯನ್ನು ಬಿಡಲಾಗದೆ, ಇತ್ತ ಭಾರತೀಯ ಸಂಸ್ಕೃತಿಯನ್ನು ಒಪ್ಪಿಕೊಳ್ಳಲಾಗದೆ ಒದ್ದಾಡುವ ಸಂದಿಗ್ಧ ಪರಿಸ್ಥಿತಿಯನ್ನು "ಕವಲು"ನಲ್ಲಿ ಚಿತ್ರಿಸಿದ್ದಾರೆ. ಕವಲು ಪೂರ್ತಿ ಓದಿ ಮುಗಿಸಿದಾಗ ಏಲ್ಲೋ ಒಂದು ಕಡೆ ನಮ್ಮ ಮನದ ಮೂಲೆಯಲ್ಲಿ ಇಂದಿನ ಆಧುನಿಕ ಮಹಿಳೆಯರ ಬಗ್ಗೆ ನಕರಾತ್ಮಕ ಭಾವನೆ ಮೂಡಿದರೆ ತಪ್ಪು ನಮ್ಮದಲ್ಲ. [ಸ್ತ್ರೀವಾದ, ಕುಟುಂಬ ವ್ಯವಸ್ಥೆಯ ಕವಲು]

English summary
Saraswati Samman award Winner Dr SL Bhyrappa's new novel Yaana is set to release in August Month. Pre booking for the new novel is now made available in a4dable website. Book your copy now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X