ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ 'ಡಾ. ರಾಜ್ ನೃತ್ಯ ವೈಭವ'

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಶ್ರೀವಾತ್ಸ ಶಾಂಡಿಲ್ಯ ನೇತೃತ್ವದ ಅಂತರರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯು ಭರತನಾಟ್ಯ ಕುಚಿಪುಡಿ ಮತ್ತು ಕಥಕ್ ನಂತಹ ಶಾಸ್ತ್ರೀಯ ನೃತ್ಯಗಳ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಆಯೋಜಿಸುವ ಮೂಲಕ ಪದ್ಮಭೂಷಣ ಡಾ ರಾಜ್ ಕುಮಾರ್ ಹುಟ್ಟುಹಬ್ಬವನ್ನು ಆಚರಿಸಲಿದೆ.

ಡಾ. ರಾಜ್ ನೃತ್ಯ ವೈಭವ ಕಾರ್ಯಕ್ರಮವು ಮಲ್ಲೇಶ್ವರಂನಲ್ಲಿರುವ ಸೇವಾಸದನ ಆಡಿಟೋರಿಯಂನಲ್ಲಿ ಏ.24ರಂದು ಸಂಜೆ 5 ಗಂಟೆಗೆ ನಡೆಯಲಿದೆ. 1960 ರ ಮತ್ತು 70 ರ ದಶಕದ ಆರಂಭದಲ್ಲಿ ಡಾ. ರಾಜ್ ಕುಮಾರ್ ಅವರು ನಟಿಸಿದ ಹಳೆಯ ಶಾಸ್ತ್ರೀಯ ಆಧಾರಿತ ಗೀತ ಸಂಪುಟಗಳಿಗಾಗಿ ಕಲಾವಿದ ಪ್ರದರ್ಶನ ನೀಡಲಿದ್ದಾರೆ.

ಈ ಹಬ್ಬ(ಫೆಸ್ಟಿವಲ್) ಗತಕಾಲದ ವೈಭವ ಹಾಗೂ ಶ್ರೀಮಂತ ಶಾಸ್ತ್ರೀಯ ಆಧಾರಿತ ಚಲನಚಿತ್ರ ಹಾಡುಗಳನ್ನು ಪ್ರದರ್ಶಿಸಲು ಒಂದು ಗುರಿಯನ್ನು ಹೊಂದಿರುವ ವಾರ್ಷಿಕ ಕಾರ್ಯಕ್ರಮವಾಗಿದ್ದು, ಭಕ್ತ ಪ್ರಹ್ಲಾದ, ವೀರ ಕೇಸರಿ, ಶ್ರೀ ಕೃಷ್ಣದೇವರಾಯ, ರಣಧೀರ ಕಂಟೀರವ, ಗಂಗೇ ಗೌರಿ, ಬಬ್ರುವಾಹನ ಮತ್ತಿತರ ಚಲನಚಿತ್ರಗಳ ಹಾಡುಗಳು.

Dr Rajkumar memorial dance fest in Malleshwaram

ಬೆಂಗಳೂರಿನ ಪ್ರಮುಖ ಶಾಸ್ತ್ರೀಯ ನರ್ತಕರುಗಳಾದ ಪೂರಾ ಆಚಾರ್ಯ, ಡಾ. ಲಕ್ಷ್ಮಿ ರೇಖಾ, ಸುಮಾ ರಾಜೇಶ್, ಪೃಥ್ವಿ, ನಿಕಿತಾ ಮಂಜುನಾಥ್, ಸಹಾನ್ ಹೆಗ್ಡೆ , ಹೇಮಾ ಗೌತಮ್, ವಿಶನಿವಿ ಮತ್ತು ಹಲವಾರು ಶಾಸ್ತ್ರೀಯ ನೃತ್ಯ ಶಾಲೆಗಳಿಂದ ಬಂದು ಪ್ರದರ್ಶನ ನೀಡಲಿದ್ದಾರೆ.

English summary
International arts and dance institute led by Srivatsa Shandilya is organising dance festival on the occasion of birth anniversary of Dr Rajkumar on April 24 at 5 pm at Seva sadan auditorium in Malleshwaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X