ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧುಕರ್ ಅಂಗೂರ್ ಅತ್ಯಾಚಾರ ಪ್ರಕರಣಕ್ಕೆ ಆಸ್ತಿಯ ನಂಟು!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 03 : ತಂಗಿಯ ಮಗಳ ಮೇಲೆ ಅತ್ಯಾಚಾರ ನಡೆಸಿರುವುದಾಗಿ ತಮ್ಮ ವಿರುದ್ಧ ದಾಖಲಾಗಿರುವ ದೂರಿನಲ್ಲಿ ಸತ್ಯಾಂಶವಿಲ್ಲ. ಇದು ಕುಟುಂಬದವರು ತಮ್ಮ ವಿರುದ್ಧ ನಡೆಸಿರುವ ಷಡ್ಯಂತ್ರ ಎಂದು ಅಲಾಯನ್ಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಮಧುಕರ್ ಅಂಗೂರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, 'ತಮ್ಮ ವಿರುದ್ಧ ಕುಟುಂಬದವರೇ ಸುಳ್ಳು ಪ್ರಕರಣ ದಾಖಲಿಸಿ 27 ದಿನಗಳ ಕಾಲ ಜೈಲಿನಲ್ಲಿರುವಂತೆ ಮಾಡಿದ್ದಾರೆ. ತಾವು ಎರಡನೇ ಮದುವೆಯಾಗಿದ್ದರಿಂದ ಅಲಾಯನ್ಸ್ ವಿಶ್ವವಿದ್ಯಾಲಯದ ಎಲ್ಲ ಆಸ್ತಿಗಳು ಆಕೆಯ ಪಾಲಾಗುತ್ತದೆ ಎಂಬ ಭಯದಿಂದ ಷಡ್ಯಂತ್ರ ನಡೆಸಿದ್ದಾರೆ' ಎಂದರು. [ಅತ್ಯಾಚಾರ ಆರೋಪ, ವೈಸ್ ಚಾನ್ಸಲರ್ ಬಂಧನ]

madhukar g angur

'ಮಡಿವಾಳ ಪೊಲೀಸರು ಫೆಬ್ರವರಿ 5 ರಂದು ಮಧ್ಯರಾತ್ರಿ 1 ಗಂಟೆ ನನ್ನನ್ನು ಠಾಣೆಗೆ ಕರೆದೊಯ್ದರು. ಯಾವ ಅರೋಪದಲ್ಲಿ ತನ್ನನ್ನು ಬಂಧಿಸಲಾಗುತ್ತಿದೆ ಎಂಬುದು ನನಗೆ ತಿಳಿಸಿದಿರಲಿಲ್ಲ. ಠಾಣೆಗೆ ಹೋದಾಗ ನನ್ನ ಸಹೋದರಿ ಸುಧೀರ್ ಅಂಗೂರ್, ಸಂಬಂಧಿ ಅಭಯ್ ಛಟ್ಟಿ, ಪ್ರಕಾಶ್ ಬುದ್ದೂರ್, ಸಹೋದರಿಯರು, ಉಷಾ ಮಾಡಳ್ಳಿ ಮಗಳು ಪೊಲೀಸ್ ಠಾಣೆಯಲ್ಲಿ ಕುಳಿತಿದ್ದರು' ಎಂದು ಅಂಗೂರ್ ಹೇಳಿದರು. [ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದವ ಸಿಕ್ಕಿಬಿದ್ದ]

'ಹಲವು ಗಂಟೆಗಳ ಬಳಿಕ ಸಹೋದರಿಯ ಮಗಳು ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವುದು ತಿಳಿದು ಆಘಾತಗೊಂಡೆ. ಕುಟುಂಬದ ಎಲ್ಲರೂ ಆಸ್ತಿಗಾಗಿ ಈ ಷಡ್ಯಂತ್ರ ರೂಪಿಸಿದ್ದಾರೆ. ಆದರೆ, ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ನನಗೆ ನ್ಯಾಯ ಸಿಗತ್ತದೆ' ಎಂದರು.

ಕುಟುಂಬದವರಿಂದ ತೊಂದರೆ : '25 ವರ್ಷಗಳ ಕಾಲ ಅಮೆರಿಕದಲ್ಲಿ ನೆಲೆಸಿದ್ದೇ. ನಾನೊಬ್ಬ ಅನಿವಾಸಿ ಭಾರತೀಯ. ದೇಶದಲ್ಲಿ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬ ಉದ್ದೇಶದಿಂದ 2005ರಲ್ಲಿ ಅಲಾಯನ್ಸ್ ವಿಶ್ವವಿದ್ಯಾಲಯ ಸ್ಥಾಪಿಸಿದೆ. ಸಹೋದರಿಯರಾದ ಶೈಲಾ ಛಬ್ಬಿ, ಮಾಲಾ ಗೌಡ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಿದೆ' ಎಂದು ಅಂಗೂರ್ ಹೇಳಿದರು.

'ಸಹೋದರಿಯರು ನಿರುದ್ಯೋಗಿಗಳಾಗಿದ್ದುದರಿಂದ ಅವರನ್ನು ಬ್ಯುಸಿನೆಸ್ ಸ್ಕೂಲ್ ಚಟುವಟಿಕೆಗಳನ್ನು ನೋಡಿಕೊಳ್ಳಲು ನೇಮಕ ಮಾಡಿದೆ. ಸಾಕಷ್ಟು ವೇತನವನ್ನು ಅವರಿಗೆ ನೀಡುತ್ತಿದ್ದೆ. 2003ರಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಪ್ರಿಯಾಂಕ ಅಂಗೂರ್ ಅವರನ್ನು ಮದುವೆಯಾದೆ. ಅಲ್ಲಿಂದ ಕುಟುಂಬದವರ ತೊಂದರೆ ಆರಂಭವಾಯಿತು. ಅತ್ಯಾಚಾರ ಪ್ರಕರಣ ಇದರ ಮುಂದುವರಿದ ಭಾಗ' ಎಂದು ಅಂಗೂರ್ ವಿವರಣೆ ನೀಡಿದರು.

ಆಸ್ತಿ ಕಬಳಿಸಲು ಸಂಚು : '2015 ಮಾರ್ಚ್ ತಿಂಗಳಲ್ಲಿ ಪತ್ನಿ ಪ್ರಿಯಾಂಕ ಅಂಗೂರ್ ಮತ್ತು ಸಹೋದರಿಯರಾದ ಶೈಲಾ ಛಟ್ಟಿ, ಮಾಲಾ ಗೌಡ, ಸಹೋದರ ಸುಧೀರ್ ಅಂಗೂರ್, ಭಾವ ನಿವೃತ್ತ ಡೆಪ್ಯೂಟಿ ಐಜಿಪಿ ಗೋವಿಂದಪ್ಪ ಛಟ್ಟಿ, ಅಭಯ್ ಛಟ್ಟಿ ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ, ಈಗ ಕೆಲಸದಿಂದ ವಜಾಗೊಂಡಿರುವ ಪ್ರಕಾಶ್ ಎಸ್. ಬುದ್ದೂರ್ ನಡುವೆ ಆಸ್ತಿ ವಿವಾದ ಆರಂಭವಾಯಿತು'.

'ಇವರೆಲ್ಲರೂ ಸೇರಿ ನನ್ನ ಮತ್ತು ಪತ್ನಿಯ ಸಹಿಗಳನ್ನು ನಕಲಿ ಮಾಡಿ ಕಂಪನಿಯ ಷೇರುಗಳನ್ನು ವರ್ಗಾವಣೆ ಮಾಡಿದ್ದಾರೆ. ನಕಲಿ ಡಿಜಿಟಲ್ ಸಹಿಗಳನ್ನು ಮಾಡಿ ಮಧುಕರ್ ಮತ್ತು ಪ್ರಿಯಾಂಕ ಅವರು ರಾಜೀನಾಮೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ವೆಬ್‌ಸೈಟ್‌ಗೆ ಕಳುಹಿಸಿದ್ದಾರೆ. ನನ್ನ ಮತ್ತು ಪತ್ನಿಯ ಜಾಗದಲ್ಲಿ ಅವರ ಹೆಸರುಗಳನ್ನು ಸೇರಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿದ್ದು, ಅದು ವಿಚಾರಣೆ ಹಂತದಲ್ಲಿದೆ' ಎಂದರು.

English summary
Alliance University chancellor Dr Madhukar G Angur denied rape allegations against him. On Monday he alleged that family members registered fake complaint against him. The Madiwala police have arrested Madhukar G Angur on February 5, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X