• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

75ನೇ ವರ್ಷದ ಹವ್ಯಕ ಸರ್ವಸದಸ್ಯರ ಸಭೆ - ಡಾ. ಕಜೆ ಪುನರಾಯ್ಕೆ

|

ಬೆಂಗಳೂರು, ಮಾರ್ಚ್ 11: ಡಿಸೆಂಬರ್ ನಲ್ಲಿ ನಡೆದ ಅಮೃತ ಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವು ಕೇವಲ ಜಾತಿಯ ಸಮಾವೇಶವಾಗಿರಲಿಲ್ಲ. ಸರ್ವ ಸಮಾಜದವರಿಗೂ ಅಲ್ಲಿ ಅವಕಾಶ ಕಲ್ಪಿಸಲಾಗಿತ್ತು, ಹವ್ಯಕ ಸಂಸ್ಕೃತಿಯನ್ನು ನಾಡಿನಾದ್ಯಂತ ಪಸರಿಸುವ ಕಾರ್ಯಕ್ರಮ ಅದಾಗಿತ್ತು ಎಂದು ಡಾ. ಗಿರಿಧರ ಕಜೆ ಹೇಳಿದರು.

ಮಲ್ಲೇಶ್ವರದಲ್ಲಿರುವ ಮಹಾಸಭೆಯ ಸಭಾಂಗಣದಲ್ಲಿ 10.03.19 ಭಾನುವಾರ ನಡೆದ ಶ್ರೀ ಅಖಿಲ ಹವ್ಯಕ ಮಹಾಸಭೆಯ ಸರ್ವಸದಸ್ಯರ 75ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ, ವಿಶ್ವ ಹವ್ಯಕ ಸಮ್ಮೇಳನ ನಾವು ಆಲೋಚಿಸಿದಕ್ಕಿಂತ ಬಹಳ ಉತ್ತಮವಾಗಿ ನಡೆಯಿತು, ಅಷ್ಟು ದೊಡ್ಡಮಟ್ಟದಲ್ಲಿ ಜನ ಸೇರಿದರೂ ಪೊಲೀಸ್ ಸುರಕ್ಷತೆಯ ಅವಶ್ಯಕತೆಯೇ ಬರಲಿಲ್ಲ.

ದ್ವಿತೀಯ ವಿಶ್ವ ಹವ್ಯಕ, ಅಮೃತ ಮಹೋತ್ಸವ ಸಮ್ಮೇಳನಕ್ಕೆ ವೈಭವದ ಚಾಲನೆ

ಸರ್ವಸದಸ್ಯರ ಸಭೆಯ ನಂತರ ನಡೆದ ನಿರ್ದೇಶಕರ ಸಭೆಯಲ್ಲಿ ಡಾ. ಗಿರಿಧರ ಕಜೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆಯಾದರು. ಆ ಮೂಲಕ ಡಾ. ಕಜೆ ನಾಲ್ಕನೇ ಬಾರಿಗೆ ಮಹಾಸಭೆಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಆರ್ ಎಂ ಹೆಗಡೆ ಬಾಳೆಸರ ಹಾಗೂ ಕೆಕ್ಕಾರು ಶ್ರೀಧರ್ ಭಟ್ ಉಪಾಧ್ಯಕ್ಷರಾಗಿ, ಸಿಎ ವೇಣು ವಿಘ್ನೇಶ್ ಸಂಪ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಶಾಂತ ಭಟ್ ಯಲ್ಲಾಪುರ, ಶ್ರೀಧರ್ ಭಟ್ ಸಾಲೇಕೊಪ್ಪ ಕಾರ್ಯದರ್ಶಿಗಳಾಗಿ ಹಾಗೂ ಕೃಷ್ಣಮೂರ್ತಿ ಭಟ್ ಯಲಹಂಕ ಕೋಶಾಧಿಕಾರಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ನೂತನ ಆಡಳಿತ ಮಂಡಳಿಗೆ ನಿರ್ದೇಶಕರು, ಸಂಚಾಲಕರು ಶುಭಕೋರಿದರು.

ಹವ್ಯಕ ಸಮ್ಮೇಳನದಲ್ಲಿ ಸಭೆ - ಪಾರ್ಕಿಂಗ್ - ಊಟೋಪಚಾರ - ನಿರ್ವಹಣೆ ಎಲ್ಲವೂ ಸುವ್ಯವಸ್ಥಿತವಾಗಿತ್ತು, ಯಾವುದೇ ಗೊಂದಲ - ನ್ಯೂನತೆ ಇಲ್ಲದೇ ಕಾರ್ಯಕ್ರಮ ಸಂಪನ್ನವಾಯಿತು. ಇಷ್ಟು ಸುವ್ಯವಸ್ಥಿತವಾಗಿ ನಡೆದ ಕಾರ್ಯಕ್ರಮವನ್ನು ನೋಡಿರಲಿಲ್ಲ ಎಂದು ಅರಮನೆ ಮೈದಾನದ ಆಡಳಿತ ಹಾಗೂ ನೌಕರ ವರ್ಗದವರೇ ಹೇಳಿ ಸಂತೋಷ ವ್ಯಕ್ತಪಡಿಸಿದರು ಎಂದು ಡಾ. ಕಜೆ ಹೇಳಿದರು.

ಯೋಧರ ಜಾತಿ ಲೆಕ್ಕಕ್ಕೆ ಉತ್ತರವಾದ ಹವ್ಯಕ ದೇಶರತ್ನ ಸಮ್ಮಾನ : ಪುಲ್ವಾಮ ದಾಳಿಯ ನಂತರ ದೇಶಾದ್ಯಂತ ಯೋಧರ ಜಾತಿ ಲೆಕ್ಕಾಚಾರ ಚರ್ಚಿತವಾಯಿತು. ಕೀಳುಮಟ್ಟದ ಅಂತಹ ಚರ್ಚೆಗಳಿಗೆ ವಿಶ್ವ ಹವ್ಯಕ ಸಮ್ಮೇಳನದ "ಹವ್ಯಕ ದೇಶ ರತ್ನ" ಪುರಸ್ಕಾರ ಸ್ಪಷ್ಟ ಪ್ರತ್ಯುತ್ತರವಾಗಿತ್ತು. ಅನೇಕರು ಅನೇಕ ಕಡೆಗಳಲ್ಲಿ ಹವ್ಯಕ ದೇಶರತ್ನ ಪುರಸ್ಕಾರದ ವಿಷಯವನ್ನು ಇಟ್ಟುಕೊಂಡು ಕೀಳು ಪ್ರಶ್ನೆ ಹುಟ್ಟುಹಾಕಿದ್ದವರ ಬಾಯಿ ಮುಚ್ಚಿಸಿದರು. ಯೋಧರನ್ನು ವಿಶೇಷವಾಗಿ ಗೌರವಿಸಿದ ಕೀರ್ತಿ ನಮ್ಮ ಸಮಾಜದ್ದಾಗಿದ್ದು, ಇದೀಗ ಇದು ಬೇರೆಯವರಿಗೂ ಆದರ್ಶವಾಗಿದೆ ಎಂದು ಡಾ. ಕಜೆ ಹೇಳಿದರು.

ಮಾಧ್ಯಮದವರ ಸಹಕಾರ ಅನನ್ಯ : ವಿಶ್ವ ಸಮ್ಮೇಳನಕ್ಕೆ ಮಾಧ್ಯಮದವರು ನೀಡಿದ ಸಹಕಾರ ಅನನ್ಯವಾಗಿತ್ತು. ಸಮ್ಮೇಳನದ ವಿಚಾರವನ್ನು ನಾಡಿನ ಮನೆ - ಮನಗಳಿಗೆ ಮುಟ್ಟಿಸಿದ ಕೀರ್ತಿ ಮಾಧ್ಯಮದವರಿಗೆ ಸಲ್ಲಬೇಕು. ಮಾಧ್ಯಮದವರಿಂದಾಗಿ ಸಂಘಟಿತ ಸಮಾಜದ ಧ್ವನಿ ನಾಡಿನಾದ್ಯಂತ ಪ್ರತಿಧ್ವನಿಸಿತು. ಹವ್ಯಕ ಸಮಾಜದ ಕೀರ್ತಿ ಎಲ್ಲೆಡೆ ಪಸರಿಸಿತು ಎಂದು ಡಾ. ಕಜೆ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದರು.

ಹವ್ಯಕ ಸಮುದಾಯದ ಮೇಲಿನ ಅಭಿಮಾನದಿಂದ ಇಲ್ಲಿಗೆ ಬಂದಿದ್ದೇನೆ: ಪೇಜಾವರ ಶ್ರೀ

ಬಹಿಷ್ಕಾರದ ಕರೆಗೆ ಜನ ಸೊಪ್ಪು ಹಾಕಲಿಲ್ಲ : ಸಮ್ಮೇಳನವನ್ನು ಬಹಿಷ್ಕರಿಸುವಂತೆ ಕೆಲವರು ಕರೆ ನೀಡಿದರು. ಆದರೆ ಅದಕ್ಕೆ ಸಮಾಜ ಸೊಪ್ಪು ಹಾಕಲಿಲ್ಲ. ನಮ್ಮ ಅಂದಾಜಿಗಿಂತಲೂ ಚೆನ್ನಾಗಿ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮಕ್ಕೆ ಬರಬೇಕಾದವರೆಲ್ಲ ಬಂದು ಭಾಗವಹಿಸಿದರು, ಒಟ್ಟು ಮೂರು ದಿನಗಳಲ್ಲಿ 75 ಸಾವಿರಕ್ಕಿಂತಲೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಇದು ಹವ್ಯಕ ಸಮಾಜ ಎಲ್ಲಿದೆ, ಹವ್ಯಕ ಸಮಾಜದ ನಿಲುವೇನು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಕಜೆ ಅಭಿಪ್ರಾಯಪಟ್ಟರು.

ಗುರುಪೀಠದ ಆಶೀರ್ವಾದದಿಂದ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಿತು ಎಂದ ಡಾ. ಕಜೆ, ಸಹಸ್ರಾರು ಕಾರ್ಯಕರ್ತರು ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಸಮ್ಮೇಳನವನ್ನು ಇತರರಿಗೆ ಮಾದರಿಯಾಗುವಂತೆ ಯಶಸ್ವಿಯಾಗಿಸಿದ ಕೀರ್ತಿ ಪ್ರತಿಯೊಬ್ಬ ಕಾರ್ಯಕರ್ತರಿಗೆ ಸಲ್ಲಬೇಕು. ಸ್ಪಂದಿಸಿದ - ಸಹಕರಿಸಿದ ಸಮಾಜದ ಎಲ್ಲಾ ಬಂಧುಗಳಿಗೂ ಧನ್ಯವಾದಗಳನ್ನು ಅವರು ಸಮರ್ಪಿಸಿದರು.

ಮಾಜಿ ಅಧ್ಯಕ್ಷರಾದ ಶ್ರೀಧರ ಭಟ್ ಕಲಸಿ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಎಂ. ಎನ್ ಹೆಗಡೆ ಹಾರೂಗಾರ್ ಮಾತನಾಡಿ ಹವ್ಯಕ ಮಹಾಸಭೆಯನ್ನು ಯಶಸ್ವಿಯಾಗಿ ಮುನ್ನೆಡೆಸುತ್ತಿರುವ ಡಾ. ಕಜೆ ನೇತೃತ್ವದ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಸಮಾಜದ ಅಭ್ಯುದಯಕ್ಕೆ ಇನ್ನಷ್ಟು ತೊಡಗಿಸಿಕೊಳ್ಳುವ ಕುರಿತು ಚರ್ಚೆಗಳಾದವು.

English summary
Dr. Giridhar Kaje unanimously reelected as President of Havyaka Mahasabha. This is the fourth time Dr. Kaje electing as President.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X