ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್‌-19 ಚಿಕಿತ್ಸೆಗೆ ರೆಮ್ಡೆಸಿವಿರ್ ಪರಿಣಾಮಕಾರಿ: ಡಾ. ಮಂಜುನಾಥ್

|
Google Oneindia Kannada News

ಬೆಂಗಳೂರು, ಅ. 25: ಕೋವಿಡ್‌- 19 ಸೋಂಕಿನಿಂದ ಬಳಲುತ್ತಿರುವವರನ್ನು ಗುಣಪಡಿಸುವಲ್ಲಿ "ರೆಮ್ಡಿಸಿವಿರ್‌ ಮೆಡಿಸನ್‌" ಬಳಕೆ‌ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಜಯದೇವ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ನಿರ್ದೇಶಕ ಮತ್ತು ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

ಎಲೆಟ್ಸ್ ಟೆಕ್ನೋ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಇ-ಹೆಲ್ತ್ ಮ್ಯಾಗಜೀನ್ ವತಿಯಿಂದ ಆಯೋಜಿಸಿದ್ದ ವರ್ಚುವಲ್‌ ಪ್ಯಾನಲ್‌ ಚರ್ಚೆಯಲ್ಲಿ ಪಾಲ್ಗೊಂಡು, "ಸಾಂಕ್ರಾಮಿಕ ರೋಗಗಳ ನಿಯಂತ್ರಣ" ಕುರಿತು ಮಂಜುನಾಥ್ ಅವರು ತಮ್ಮ ಅನುಭವ ಹಂಚಿಕೊಂಡರು.

ದೇಶಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಿಯತಕಾಲಿಕೆಗಳಲ್ಲಿ ಇ ಹೆಲ್ತ್ ಒಂದಾಗಿದೆ. ಈ ನಿಯತಕಾಲಿಕೆಯು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ವರ್ಚುವಲ್ ಸಂವಾದವನ್ನು ಆಯೋಜಿಸಿದ್ದು, ಇದರಲ್ಲಿ ಸರ್ಕಾರಿ ಆರೋಗ್ಯ ಪರಿಸರ ವ್ಯವಸ್ಥೆ ಗಣ್ಯರು ಮತ್ತು ಖಾಸಗಿ ಆಸ್ಪತ್ರೆಗಳು ಮತ್ತು ಸಂಶೋಧನಾ ಸಂಸ್ಥೆಗಳ ತಜ್ಞರು ಭಾಗವಹಿಸಿದ್ದರು.

Dr. CN Manjunath, Director advocates the use of Remdesivir in Covid-19 cases

ಕೊರೋನ ಸೋಂಕಿಗೆ ತುತ್ತಾದವರನ್ನು ಗುಣಪಡಿಸಲು ಪ್ರಾರಂಭದಲ್ಲಿಯೇ ರೆಮ್ಡಿಸಿವಿರ್‌ ಮೆಡಿಸನ್‌ ಬಳಸುವುದರಿಂದ ಬಹುತೇಕರಲ್ಲಿ ಚೇತರಿಕೆ ಕಂಡು ಬರುತ್ತಿದೆ. ನಮ್ಮ ಆಸ್ಪತ್ರೆಯಲ್ಲಿ, ಬೋಧಕವರ್ಗ ಮತ್ತು ಸಿಬ್ಬಂದಿ ಸೇರಿದಂತೆ 300 ಜನರು ಸೋಂಕಿಗೆ ಒಳಗಾಗಿದ್ದರು. ಅವರಲ್ಲಿ 30 ಜನ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ರೆಮ್ಡೆಸಿವಿರ್ ಮತ್ತು ಇತರ ಅಗತ್ಯ ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಯಿತು. ಇದರಿಂದ‌ ಸೋಂಕಿತರು ಗುಣಮುಖವಾಗಿದ್ದು ಕಂಡು ಬಂತು ಎಂದು ಅವರು ವಿವರಿಸಿದರು.

ಶ್ವಾಸಕೋಶ ತಜ್ಞರ ಸ್ಟೇಟ್ ಕಮಿಟಿಯು ಪ್ರತಿದಿನ 100 ಪ್ರಕರಣಗಳನ್ನು ನಿಭಾಯಿಸುವ ಏಳು ಹೆಸರಾಂತ ಶ್ವಾಸಕೋಶ ಶಾಸ್ತ್ರಜ್ಞರು ಸಹ ರೆಮ್ಡೆಸಿವಿರ್‌ ಮೆಡಿಸನ್‌ ಪರಿಣಾಮದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಕೊರೋನ ಸೋಂಕಿನಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿ, ವೆಂಟಿಲೇಟರ್‌ನಲ್ಲಿ ಇರುವ ರೋಗಿಗಳಿಗೆ ಈ ಔಷಧ ನೀಡುವುದು ಅಷ್ಟು ಸೂಕ್ತವಲ್ಲ.‌

Recommended Video

Corona ಓಡಿಸೋ ಸಮಯ ದೂರ ಇಲ್ಲಾ | Corona Vaccine | Oneindia Kannada

ಸೋಂಕು ಕಾಣಿಸಿಕೊಂಡ ಪ್ರಾರಂಭಿಕ ಹಂತದಲ್ಲೇ ಈ ಮೆಡಿಸನ್‌ ನೀಡುವುದರಿಂದ ಗಂಭೀರ ಆರೋಗ್ಯ‌ ಸಮಸ್ಯೆ ಉಂಟಾಗುವುದನ್ನು ತಡೆಯುವುದರ ಜೊತೆಗೆ, ಬೇಗ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ. ಆಸ್ಪತ್ರೆಗೆ ದಾಖಲಾಗುವುದನ್ನು ಸಹ ತಡೆಯುತ್ತದೆ . ಜೂನ್‌ ಮತ್ತು ಜುಲೈ‌ನಲ್ಲಿ ಈ ಔಷಧಿಯ ದರ ಕಡಿಮೆ ಇತ್ತು.‌ಆದರೀಗ ಈಗ ಈ ಔಷಧದ ದರ ಹೆಚ್ಚಾಗಿದೆ ಎಂದು ಹೇಳಿದರು.

English summary
Dr C N Manjunath, Professor of Cardiology and Director, Sri Jayadeva Institute of Cardiovascular Sciences and Research, has advocated the use of Remdesivir to treat moderate COVID-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X