• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ, ದಾಖಲೆ ಬರೆದ ಕರ್ನಾಟಕದ ಡಾಕ್ಟರ್

|

ಸಕ್ರ ವಲ್ಡ್ ಆಸ್ಪತ್ರೆಯ ಮೊಣಕಾಲು ಸಂದು ಬದಲು ಶಸ್ತ್ರಚಿಕಿತ್ಸೆಯ ವಿಭಾಗದ ಹಿರಿಯ ಸಲಹೆಗಾರರು ಹಾಗೂ ಮೂಳೆರೋಗ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ ಪಿ. ಅವರು ಇಂದು ಒಂದು ಮಹತ್ತರ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಕನಿಷ್ಠ ಗಾಯದ ಮೂಲಕ ಕಂಪ್ಯೂಟರ್ ಬಳಕೆಯೊಂದಿಗೆ 2000 ಕ್ಕೂ ಅಧಿಕ ಮೊಣಕಾಲು ಬದಲು ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ಸಾಧನೆಗೆ ಭಾಜನರಾಗಿದ್ದಾರೆ.

ಅವರಿಗೆ ಈ ಸಾಧನೆಗೆ ಗೌರವ ಸಲ್ಲಿಸುವ ಕಾರ್ಯ ಆಗಿದ್ದು, ಅಮೆರಿಕಾದ ನ್ಯೂಜೆರ್ಸಿಯ ಎಂಗಲ್ಪುಡ್ ವೈದ್ಯಕೀಯ ಆಸ್ಪತ್ರೆ ಮತ್ತು ಕೇಂದ್ರದ ಹೆಸರಾಂತ ಮೂಳೆ ರೋಗ ತಜ್ಞ ಹಾಗೂ ಆಸ್ಪತ್ರೆಯ ಮೊಣಕಾಲು ಸಂದು ಬದಲಿ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಅಶಿತ್ ಶಾ ಅವರು ಚಂದ್ರಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಸಕ್ರ ವರ್ಲ್ಡ್ ಆಸ್ಪತ್ರೆಯಿಂದ ಅಪರೂಪದ ಭುಜದ ಕಾಳಜಿ ಕೇಂದ್ರ ಆರಂಭ

ಅತ್ಯಂತ ಚಿಕ್ಕ ಗಾಯದ ಮಾಡಿ, ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ಸಮಸ್ಯೆ ಇರುವ ಜಾಗ ಪತ್ತೆ ಮಾಡಿ ಮೊಣಕಾಲು ಬದಲು ಶಸ್ತ್ರ ಚಿಕಿತ್ಸೆ ನಡೆಸುವುದು ಇತ್ತೀಚೆಗೆ ಸಾಮಾನ್ಯ ಹಾಗೂ ಅತ್ಯಂಥ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿ ಪರಿಣಮಿಸಿದೆ.

ಅಲ್ಲದೇ ಇದು ರೋಗಿಗೆ ಅತ್ಯಂತ ವೇಗವಾಗಿ ಚೇತರಿಸಿಕೊಳ್ಳಲು, ಕಡಿಮೆ ಆಸ್ಪತ್ರೆ ವಾಸ ಅನುಭವಿಸಲು, ವಾಕರ್ ಗಳ ಸಹಾಯ ಕಡಿಮೆ ಮಾಡಿಕೊಳ್ಳುವುದು, ಸಾಮಾನ್ಯ ದಿನಗಳಲ್ಲಿ ಬದುಕುವ ರೀತಿಯ ಸ್ಥಿತಿಗೆ ಅತ್ಯಂತ ವೇಗವಾಗಿ ಮರಳುವುದಕ್ಕೆ ಇದು ಸಹಾಯಕವಾಗಿದೆ. ಉತ್ತಮ ಫಲಿತಾಂಶದ ಶಸ್ತ್ರಚಿಕಿತ್ಸೆ ಹಾಗೂ ಚೇತರಿಸಿಕೊಳ್ಳುವ ಕಾಲಾವಧಿ ಕಡಿಮೆ ಮಾಡುವ ಮೂಲಕ ಇದು ಅತ್ಯಂತ ಜನಪ್ರಿಯವಾಗಿದೆ.

"ವೈದ್ಯರ ಅವಲೋಕನ ಕಾರ್ಯಕ್ರಮ"

ಅಂತಾರಾಷ್ಟ್ರೀಯ ಕೇಂದ್ರಿತ ಗುಂಪು ರೋಗಿಗಳಿಗೆ ಭಾರತೀಯ ವೈದ್ಯರು, ವೈದ್ಯಕೀಯ ಸಂಶೋಧಕರು, ವಿವಿಧ ಸಂಶೋಧನಾ ಕಾರ್ಯಕ್ರಮಗಳಲ್ಲಿ ಸಹಾಯ ಮಾಡಲು, ಹೊಸ ಉತ್ಪನ್ನವನ್ನು ಅರ್ಥಮಾಡಿಕೊಳ್ಳಲು, ಸಂಕೀರ್ಣ ಕಾರ್ಯವಿಧಾನಗಳನ್ನು ನಿರ್ವಹಿಸಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ತಮ್ಮ ಅನುಭಗಳನ್ನು ವಿನಿಮಯ ಮಾಡಿಕೊಳ್ಳಲು ರೋಗಿಗಳಿಗೆ ಈ ತಂತ್ರಜ್ಞಾನ ಒಪ್ಪಂದ ಸಹಾಯಕವಾಗಿ ಲಭಿಸಲಿದೆ.

"ವೈದ್ಯರ ಅವಲೋಕನ ಕಾರ್ಯಕ್ರಮ' ಕೂಡ ವೈದ್ಯರಿಗೆ ವೈದ್ಯಕೀಯ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳಲು ಸಹಾಯಕವಾಗಲಿದೆ. ರೋಗಿಗಳ ಆರೈಕೆ, ಆವಿಷ್ಕಾರ ಹಾಗೂ ರೋಗಿಗಳಿಗೆ ವೆಚ್ಚ ಕಡಿತಗೊಳಿಸಿ ಚಿಕಿತ್ಸೆ ನೀಡಲು ಸಹಕಾರಿಯಾಗುವ ಈ ಆಸ್ಪತ್ರೆಗಳ ಭೇಟಿಯಿಂದ ಆಗಲಿದೆ.

ಈ ಒಪ್ಪಂದದ ಅನುಕೂಲ ಎಂದರೆ ರೋಗಿಗಳಿಗೆ ಮಾಹಿತಿ ಪಡೆಯುವುದಕ್ಕೆ ಇದು ಸಹಾಯಕ. ಆಧುನಿಕ ತಂತ್ರಜ್ಞಾನದ ಹಾಗೂ ವೆಬ್ ಮೂಲಕ ಸಂವಹನದ ಜತೆ ಚಿಕಿತ್ಸೆ ಪಡೆಯುವ ಅವಕಾಶ ಒದಗಲಿದೆ.

ಸಮಾರಂಭದಲ್ಲಿ ಮಾತನಾಡಿದ ಡಾ. ಚಂದ್ರಶೇಖರ್ ಪಿ

ಸಮಾರಂಭದಲ್ಲಿ ಮಾತನಾಡಿದ ಡಾ. ಚಂದ್ರಶೇಖರ್ ಪಿ

ಸಮಾರಂಭದಲ್ಲಿ ಮಾತನಾಡಿದ ಡಾ. ಚಂದ್ರಶೇಖರ್ ಪಿ., ನಾನು ಮೂಳೆ ಮತ್ತು ಸಂದು ರೋಗದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಸಕ್ರ ವಲ್ಡ್ ಆಸ್ಪತ್ರೆಯಲ್ಲಿ ಗಾಯಗಳು, ಏಟು ಬಿದ್ದು, ಮೂಳೆ ಮುರಿತಗೊಂಡು ಚಿಕಿತ್ಸೆಗಾಗಿ ಬರುವವರು ಸಾಕಷ್ಟು ಮಂದಿ ಇರುತ್ತಾರೆ. ನಾನು ಇದುವರೆಗೂ ನನ್ನ ಅನುಭವದಲ್ಲಿ 10 ಸಾವಿರಕ್ಕೂ ಹೆಚ್ಚು ಮೂಳೆ ಮತ್ತು ಸಂದು ಶಸ್ತ್ರಚಿಕಿತ್ಸೆ ನಡೆಸಿದ್ದೇನೆ. ಇದು ರೋಗಿಗಳಿಗೆ ಆರೂಕೆ ಮತ್ತು ಚಿಕಿತ್ಸೆ ಪೂರ್ವ ಹಾಗೂ ನಂತರದ ದಿನಗಳ ಅನುಭವಿಸುವಿಕೆಯ ಉತ್ತಮ ಪರಿಚಯ ನನಗಿದೆ.

ಎಂಗಲ್ಪುಡ್ ಆಸ್ಪತ್ರೆಯೊಡನೆ ನಾವು ನೇರ ಸಂಬಂಧ

ಎಂಗಲ್ಪುಡ್ ಆಸ್ಪತ್ರೆಯೊಡನೆ ನಾವು ನೇರ ಸಂಬಂಧ

ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳಲು ವೈದ್ಯರು ಮತ್ತು ನನ್ನ ಆಪ್ತ ಗುಂಪುಗಳೊಂದಿಗೆ ಸಂವಹನ ನಡೆಸಲು ಸಿಗುವ ಅವಕಾಶಕ್ಕಾಗಿ ನಾನು ಎದುರುನೋಡುತ್ತಿದ್ದೇನೆ. ಎಂಗಲ್ಪುಡ್ ಆಸ್ಪತ್ರೆಯೊಡನೆ ನಾವು ನೇರ ಸಂಬಂಧ ಹೊಂದಲು ಹಾಗೂ ರೋಗಿಗಳಿಗೆ ಈ ಮೂಲಕ ಹೆಚ್ಚಿನ ಅವಕಾಶ ಒದಗಿಸಿಕೊಡಲು ನಾನು ಉತ್ಸುಕನಾಗಿದ್ದೇನೆ. ಈ ವಿಧಾನಗಳು ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಲು ರೋಗಿಗಳಿಗೆ ಪ್ರೋತ್ಸಾಹಿಸುತ್ತದೆ. ಸಕ್ರ ವಲ್ಡ್ ಆಸ್ಪತ್ರೆ ತಂತ್ರಜ್ಞಾನದ ಅಳವಡಿಕೆಯ ಅಂಶಗಳಲ್ಲಿ ಮುಂಚೂಣಿಯಲ್ಲಿದೆ. ಮತ್ತು ಕರ್ನಾಟಕದಲ್ಲಿ ಕನಿಷ್ಠ ಆಕ್ರಮಣಕಾರಿ ಕಂಪ್ಯೂಟರ್ ನ್ಯಾವಿಗೇಷನ್ ಸಹಾಯದಿಂದ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿದೆ.

 ಅಮೆರಿಕಾದ ಹೊಸ ಆವಿಷ್ಕಾರಗಳು ರಾಜ್ಯಕ್ಕೂ ಲಭ್ಯ

ಅಮೆರಿಕಾದ ಹೊಸ ಆವಿಷ್ಕಾರಗಳು ರಾಜ್ಯಕ್ಕೂ ಲಭ್ಯ

ನಾವು ಈಗಾಗಲೇ 2000ಕ್ಕೂ ಅಧಿಕ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ್ದೇವೆ. ಅಮೆರಿಕಾದ ಹೊಸ ಆವಿಷ್ಕಾರಗಳು ರಾಜ್ಯದಲ್ಲಿಯೂ ಪರಿಚಯವಾಗಲಿ, ಇಲ್ಲಿನವರಿಗೂ ಲಭಿಸಲಿ ಎಂದು ನಾವು ಬಯಸುತ್ತೇವೆ. ಇದು ಸಂಶೋಧನೆ ಕಾರ್ಯದಲ್ಲಿ ಸಹಾಯ ಮಾಡುತ್ತದೆ ಮತ್ತು ಮೊಳಕಾಲು ಬದಲಿ, ಸಂಧಿವಾತ ರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ' ಎಂದಿದ್ದಾರೆ.

ಈ ಕಾರ್ಯಕ್ರಮವು ಇನ್ನೊಂದು ಕಾರ್ಯಕ್ಕೆ ಸಾಕ್ಷಿಯಾಯಿತು. ಪ್ರಬುದ್ಧ (ಬಯೋನಿಕ್ ಗೋಲ್ಡ್ ಮೊಣಕಾಲು ವ್ಯವಸ್ಥೆ) ವಿಟಲಾನ್ ಜತೆ, ಡಾ ಅಸಿತ್ ಷಾ ರಿಂದ ಆವಿಷ್ಕಾರಗೊಂಡಿರುವ ವಿಟಮಿನ್ ಎ ಜತೆ ವಯಸ್ಸು ವಿರೋಧಿ ಪಾಲಿಥಿಲೀನ್‍ನ್ನು ರೋಗಿಗಳಿಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಂಯೋಜಿಸುವ ಮೂಲಕ ಪರಿಚಯಿಸಲಾಯಿತು.

English summary
Dr Chandrashekar P. H.O.D. - Orthopaedics & Senior Consultant Joint Replacement Sakra World Hospital, Bengaluru has been felicitated for conducting over 2,000 Minimally Invasive Computer Navigation Assisted Knee Replacement surgery by Dr. Asit Shah, Chief Joint Replacement Surgeon a renowned Orthopaedic surgeon from Englewood Medical Hospital & Centre, New Jersey - USA today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X