ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಗ್ಯ ಸಚಿವ ಕೆ.ಸುಧಾಕರ್ ಪ್ರತಿಜ್ಞೆಗೆ ಡಾ.ಭುಜಂಗ ಶೆಟ್ಟಿ ಶ್ಲಾಘನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 12: ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಳೆದ ಬುಧವಾರ ನಡೆದ ವಿಶ್ವ ಆರೋಗ್ಯ ದಿನದಂದು ನಡೆದ ಕಾರ್ಯಕ್ರಮದಲ್ಲಿ ತಮ್ಮ ನೇತ್ರದಾನ ಮಾಡುವ ಪ್ರತಿಜ್ಞೆ ಮಾಡಿದ್ದರು.

ಆರೋಗ್ಯ ಸಚಿವರ ಈ ಮಹತ್ವದ ನಿರ್ಧಾರವನ್ನು ಸ್ವಾಗತಿಸಿರುವ ನಾರಾಯಣ ನೇತ್ರಾಲಯದ ಡಾ.ಕೆ.ಭುಜಂಗ ಶೆಟ್ಟಿ, "ನಮ್ಮ ಸಚಿವರ ಈ ನಿರ್ಧಾರವು ನೇತ್ರದಾನ ಮಾಡುವ ಅರಿವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹಾಗೂ ಸಾವಿರಾರು ಮಂದಿಗೆ ದೃಷ್ಟಿ ನೀಡುವ ವಾಸ್ತವ ನೇತ್ರದಾನದಲ್ಲಿ ಬಹಳ ದೂರ ಸಾಗಲಿದೆ" ಎಂದು ಹೇಳಿದರು.

ಇತ್ತೀಚೆಗೆ ನಾರಾಯಣ ನೇತ್ರಾಲಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಚಿವ ಡಾ.ಸುಧಾಕರ್ ಅವರು ಡಾ.ಭುಜಂಗ ಶೆಟ್ಟಿ ಅವರಿಗೆ ರಾಜ್ಯವ್ಯಾಪಿ ನೇತ್ರದಾನ ಅಭಿಯಾನದ ನೇತೃತ್ವ ವಹಿಸಲು ಮತ್ತು ಮಾರ್ಗಸೂಚಿಗಳನ್ನು ರೂಪಿಸಲು ಕೋರಿದ್ದಾರೆ.

Dr.Bhujanga Shetty Welcomes Health Minister K.Sudhakar Eye Donation Pledge

ಭಾರತ ದೇಶದಲ್ಲಿ ನೇತ್ರದಾನ ಪಡೆಯಲು ಸುಮಾರು 30 ಲಕ್ಷಗಳಕ್ಕಿಂತ ಹೆಚ್ಚಿನ ಅಂಧ ಜನರು ಕಾಯುತ್ತಿರುವುದರಿಂದ ಅದನ್ನು ಸಾಧಿಸಲು ಭಾರತ ದೇಶಕ್ಕೆ ಎಲ್ಲಾ ಸಂಪನ್ಮೂಲಗಳ ಅವಶ್ಯಕತೆ ಇದೆ.

ಕರ್ನಾಟಕದಲ್ಲಿ ಶೇ.50ರಷ್ಟು ನೇತ್ರ ಸಂಗ್ರಹವನ್ನು ನಾರಾಯಣ ನೇತ್ರಾಲಯ ನಡೆಸುತ್ತಿದೆ. ಕಳೆದ ತಿಂಗಳು ಖ್ಯಾತ ನಟ ಶಿವರಾಜ್‍ಕುಮಾರ್ ಕೂಡಾ ತಮ್ಮ ನೇತ್ರದಾನದ ಪ್ರತಿಜ್ಞೆ ಮಾಡಿದರು ಮತ್ತು ನಾರಾಯಣ ನೇತ್ರಾಲಯದಲ್ಲಿ ಡಾ.ಭುಜಂಗ ಶೆಟ್ಟಿ ಅವರಿಂದ ಡೋನರ್ ಕಾರ್ಡ್ ಸ್ವೀಕರಿಸಿದ್ದರು.

"ನೇತ್ರದಾನ ವ್ಯಕ್ತಿಗೆ ಬರೀ ದೃಷ್ಟಿ ನೀಡುವುದಲ್ಲ, ಅದಕ್ಕಿಂತ ಹೆಚ್ಚಿನದಾಗಿದೆ ಮತ್ತು ಹೀಗೆ ಪಡೆದ ಕಾರ್ನಿಯಾದ ಗರಿಷ್ಠ ಬಳಕೆಗೆ ನಮ್ಮಲ್ಲಿ ತಂತ್ರಜ್ಞಾನವಿದೆ" ಎಂದು ಡಾ.ಭುಜಂಗ ಶೆಟ್ಟಿ ಹೇಳಿದರು.

Dr.Bhujanga Shetty Welcomes Health Minister K.Sudhakar Eye Donation Pledge

"ಕಳೆದ ವರ್ಷದ ಕೊರೊನಾ ಮಾಹಾಮಾರಿ ಅವಧಿಯಲ್ಲಿ ನೇತ್ರದಾನ ಬಹುತೇಕ ಶೂನ್ಯಕ್ಕೆ ಕುಸಿದಿತ್ತು. ಸಕಾಲಿಕ ನೇತ್ರದಾನ ಮತ್ತು ಗಣ್ಯರಿಂದ ನೇತ್ರದಾನದ ಮನವಿಗಳು ಜನರನ್ನು ನೇತ್ರದಾನ ಮಾಡುವತ್ತ ಉತ್ತೇಜಿಸುತ್ತವೆ" ಎಂದು ಡಾ.ಶೆಟ್ಟಿ ತಿಳಿಸಿದರು.

ಆರೋಗ್ಯ ಸಚಿವ ಡಾ.ಸುಧಾಕರ್ ರವರು ಎಲ್ಲಾ ಜನತೆಗೆ ನೇತ್ರದಾನ ಮಾಡಲು ಮನವಿಯನ್ನು ಮಾಡಿದ್ದಾರೆ. ನಾವು ಮಾಡಬಹುದಾದ ನೇತ್ರದಾನವು ಇತರರಿಗೆ ಒಂದು ವರವಾಗಿರಬಹುದು. ಇದು ಒಂದು ಉದಾತ್ತ ಕಾರಣ ಆದ್ದುದರಿಂದ ಎಲ್ಲರೂ ಇತರರ ಜೀವನದಲ್ಲಿ ಒಂದು ಕಾಂತಿಯ ರೇಖೆಯನ್ನು ತರಲು ತಮ್ಮನ್ನು ನೇತ್ರದಾನ ಮಾಡುತ್ತೇವೆಂದು ನೋಂದಣಿ ಮಾಡಿಕೊಳ್ಳಬೇಕೆಂದರು.

ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಆರ್‍ಜಿಯುಎಚ್‍ಎಸ್ ನಿಂದ ವಾಕಥಾನ್ ಆಯೋಜಿಸಲಾಗಿತ್ತು. ಡಾ.ಸುಧಾಕರ್ ಈ ವಿಶ್ವ ಆರೋಗ್ಯ ದಿನದಂದು ನೇತ್ರದಾನದ ಪ್ರತಿಜ್ಞೆ ಪ್ರಕಟಿಸಿರುವುದು ತಮಗೆ ಸಂತೃಪ್ತಿಯ ಭಾವ ತಂದಿದೆ ಎಂದು ಡಾ.ಭುಜಂಗ ಶೆಟ್ಟಿ ಅಭಿಪ್ರಾಯಪಟ್ಟರು.

"ನಮ್ಮ ದಾನ ಇತರರಿಗೆ ಮಹದುಪಕಾರ ಮಾಡಬಲ್ಲದು. ಇದು ನಿಜಕ್ಕೂ ಶ್ರೇಷ್ಠ ಕಾರ್ಯ ಮತ್ತು ಪ್ರತಿಯೊಬ್ಬರೂ ಇತರರಲ್ಲಿ ಭರವಸೆಯ ಬೆಳಕನ್ನು ತರಲು ನೋಂದಣಿ ಮಾಡಿಕೊಳ್ಳಬೇಕು" ಎಂದು ಸಚಿವ ಕೆ.ಸುಧಾಕರ್ ಹೇಳಿದ್ದಾರೆ

English summary
Dr K Bhujanga Shetty of Narayana Netralaya has welcomed the Eye donation pledge of Health Minister Dr K Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X