ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪನಗರ ರೈಲು ಯೋಜನೆಯ ಡಿಪಿಆರ್ ಬದಲಿಸಿದ ರೈಲ್ವೆ ಇಲಾಖೆ

|
Google Oneindia Kannada News

ಬೆಂಗಳೂರು, ಜುಲೈ 3: ರೈಲ್ವೆ ಇಲಾಖೆಯು ಉಪನಗರ ರೈಲು ಯೋಜನೆ ಡಿಪಿಆರ್ ಬದಲಿಸಿದೆ. ಸಂಚಾರ ದಟ್ಟಣೆ ಪರಿಹಾರಕ್ಕಾಗಿ ಮುಂಬೈ ಮಾದರಿಯಲ್ಲಿ ರೂಪಿಸಲಾಗಿರುವ ರೈಲು ಯೋಜನೆಯ ವಿಸ್ತೃತ ವರದಿ ಪರಿಷ್ಕರಣೆಗೆ ಇಲಾಖೆ ಮುಂದಾಗಿದೆ.

ಯೋಜನೆಗೆ ರೈಟ್ಸ್‌ ಸಂಸ್ಥೆ ಈಗಾಗಲೇ ಡಿಪಿಆರ್ ಸಲ್ಲಿಸಿದೆ. ಇದರಲ್ಲಿ ಕೂ ಕೆಲವು ಬದಲಾವಣೆಗಳನ್ನು ತರಲು ರೈಲ್ವೆ ಇಲಾಖೆ ಸೂಚಿಸಿದೆ.

ಈ ಹಿಂದಿನ ಡಿಪಿಆರ್‌ನಂತೆ ಒಟ್ಟು 161 ಕಿ.ಮೀ ರೈಲು ಸಂಪರ್ಕ ಏರ್ಪಡಲಿದೆ. ಜೊತೆಗೆ 60 ಕಿ.ಮೀ ಎಲಿವೇಟೆಡ್ ಮಾರ್ಗ ಮತ್ತು 101 ಕಿ.ಮೀ ನೆಲಮಟ್ಟದ ಮಾರ್ಗ ನಿರ್ಮಿಸುವುದು ಅಥವಾ ಹಳೆಯ ಮಾರ್ಗ ಅಭಿವೃದ್ಧಿಪಡಿಸಬೇಕಿದೆ.

 DPR changed for suburban railway project

ಜೊತೆಗೆ ಒಟ್ಟು 81 ರೈಲು ನಿಲ್ದಾಣಗಳನ್ನು ಹೊಡಸಾಗಿ ನಿರ್ಮಿಸಬೇಕಿದೆ.

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಹೊಸ ಸಂಸ್ಥೆ ಸ್ಥಾಪನೆಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಹೊಸ ಸಂಸ್ಥೆ ಸ್ಥಾಪನೆ

ಅದರಲ್ಲಿ 30 ಎಲಿವೇಟೆಡ್ ಮತ್ತು 51 ನೆಲಮಟ್ಟದ ನಿಲ್ದಾಣಗಳಾಗಿವೆ. ಯೋಜನೆಗೆ 22 ಸಾವಿರ ಕೋಟಿ ರೂ ವ್ಯಯಿಸುತ್ತಿದೆ.

ಯೋಜನೆಯಂತೆ ಕೆಂಗೇರಿ-ವೈಟ್‌ಫೀಲ್ಡ್, ಬೆಂಗಳೂರು ನಗರ ನಿಲ್ದಾಣ, ರಾಜಾನುಕುಂಟೆ, ನೆಲಮಂಗಲ-ಬೈಯಪ್ಪನಹಳ್ಳಿ ಮತ್ತು ಬೊಮ್ಮಸಂದ್ರದೇವನಹಳ್ಳಿಗೆ ಸಂಪರ್ಕಿಸಲಾಗುತ್ತಿದೆ.

ಈ ಮಾರ್ಗಗಳಲ್ಲಿ 29 ಹೊಸ ನಿಲ್ದಾಣಗಳು ಬರಲಿವೆ. ಅದರಲ್ಲಿ ಒಟ್ಟು 17 ನಿಲ್ದಾಣಗಳು ಇಂಟರ್‌ಚೇಂಜ್ ವ್ಯವಸ್ಥೆ ಹೊಂದಿದ್ದು, 5 ನಿಲ್ದಾಣಗಳು ರೈಲು ಮತ್ತು ಮೆಟ್ರೋ ರೈಲು ಬದಲಾವಣೆ ನಿಲ್ದಾಣ ಮತ್ತು 12 ರೈಲು ಮತ್ತು ಮೆಟ್ರೋ ರೈಲು ಬದಲಾವಣೆ ನಿರ್ಮಾಣಗಳನ್ನಾಗಿ ನಿರ್ಮಿಸಬೇಕೆಂದು ಸೂಚಿಸಲಾಗಿತ್ತು.ಈಗ ಡಿಪಿಆರ್ ಬದಲಾವಣೆ ಮಾಡಲಾಗಿದೆ.

English summary
Indian Railway department changed DPR for suburban railway project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X