ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂಡಿಗೋ ವಿಮಾನ ಪೈಲಟ್ ಬಂಧನ ಕಾರಣವೇನು?

|
Google Oneindia Kannada News

ಬೆಂಗಳೂರು, ಜನವರಿ 17: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ಇಂಡಿಗೋ ಏರ್‌ಲೈನ್ಸ್‌ನ ಪೈಲಟ್ ಯುಧಿಷ್ಠಿರ್ ಪೂನಿಯಾ(32) ಎಂಬುವವರನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.

ಯುಧಿಷ್ಠಿರ್ ವಿರುದ್ಧ ಪತ್ನಿ ಪೀನು ಸಿಂಗ್ ಅವರು 2018ರ ಸೆ.5 ರಂದು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಚಾರಣೆಗೆ ಹಾಜರಾಗದೆ ಓಡಾಡುತ್ತಿದ್ದ ಯುಧಿಷ್ಠಿರ್ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

ಜೈಪುರದ ಹನುಮಾನ್‌ ನಗರ ನಿವಾಸಿಯಾದ ಯುಧಿಷ್ಠಿರ ಜತೆ ಪೀನು ವಿವಾಹ 2014ರ ಮೇ 2ರಂದು ನಡೆದಿತ್ತು. ದಂಪತಿ ಬೆಂಗಳೂರಿಗೆ ಬಂದು ಮಾರತ್ತಹಳ್ಳಿಯಲ್ಲಿ ನೆಲೆಸಿದ್ದರು. ಮದುವೆ ಸಮಯದಲ್ಲಿ ಹಣ, ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ಪಡೆದಿದ್ದರು. ಮೊದಲುಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಯುಧಿಷ್ಠಿರ, ಹೆಣ್ಣುಮಗು ಜನಿಸಿದ ಬಳಿಕ ಕಿರುಕುಳ ನೀಡಲು ಆರಂಬಿಸಿದ್ದ.ತವರಿನಿಂದ ಮತ್ತಷ್ಟು ಹಣ, ಆಭರಣ ತರುವಂತೆ ಪೀಡಿಸುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

Dowry harassment: Indigo pilot arrested

ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಿದ್ದ, ಹೀಗಾಗಿ ಪತಿ ಮತ್ತು ಮತ್ತೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೀನು ದೂರು ನೀಡಿದ್ದರು.

‌ಧರಿಸಿದ್ದ ದಿರಿಸು ತೆಗೆದು ವಿಮಾನದಲ್ಲಿ ಬೆತ್ತಲೆಯಾದ ಪ್ರಯಾಣಿಕ‌ಧರಿಸಿದ್ದ ದಿರಿಸು ತೆಗೆದು ವಿಮಾನದಲ್ಲಿ ಬೆತ್ತಲೆಯಾದ ಪ್ರಯಾಣಿಕ

ಯುಧಿಷ್ಠಿರ ಫೋಟೊ ಹಿಡಿದು ಮಂಗಳವಾರ ಬೆಳಗ್ಗೆಯಿಂದ ಜೈಪುರ ವಿಮಾನ ನಿಲ್ದಾಣದ ಹೊರಗೆ ಪೊಲೀಸರು ಕಾಯುತ್ತಿದ್ದರು. ಸಂಜೆ 5 ಗಂಟೆಗೆ ಕಾರಿನಲ್ಲಿ ಬಂದ ಅವರನ್ನು ವಶಕ್ಕೆ ಪಡೆಯಲಾಗಿದೆ. ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
Bengaluru polic arrested Indigo pilot for dowry harassment case. He was not attending the police enquiry for many days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X