ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆರಿಗೆ ರಜೆ: ನೌಕರರಿಗೆ ಖುಷಿ ಸುದ್ದಿ ನೀಡಿದ ರಾಜ್ಯ ಸರ್ಕಾರ

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಮಕ್ಕಳನ್ನು ದತ್ತು ಪಡೆಯುವ ಸರ್ಕಾರಿ ನೌಕರರಿಗೂ ವೇತನ ಸಹಿತ ಹೆರಿಗೆ ರಜೆ ನೀಡುವ ಮಹತ್ವದ ಸೌಲಭ್ಯವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಮಾತೃತ್ವ ಮತ್ತು ಪಿತೃತ್ವ ರಜೆ ಸೌಲಭ್ಯ ನೀಡುವ ಹೊಸ ಆದೇಶವನ್ನು ಸರ್ಕಾರ ಪ್ರಕಟಿಸಿದ್ದು, ಇದರಿಂದ ದತ್ತು ಪಡೆದುಕೊಳ್ಳುವ ಪೋಷಕರಿಗೆ ಅನುಕೂಲವಾಗಲಿದೆ.

ಮಹಿಳಾ ಸರ್ಕಾರಿ ನೌಕರರು ಮಕ್ಕಳನ್ನು ದತ್ತು ಪಡೆದುಕೊಂಡಾಗ 180 ದಿನಗಳ ಕಾಲ ಹೆರಿಗೆ ರಜೆ ನೀಡುವಂತೆ ಸರ್ಕಾರ ಆದೇಶಿಸಿದೆ. ಹಾಗೆಯೇ ಮಗುವನ್ನು ದತ್ತು ಪಡೆದುಕೊಳ್ಳುವ ಪುರುಷ ಉದ್ಯೋಗಿಗಳಿಗೂ 15 ದಿನಗಳ ರಜೆ ಸೌಲಭ್ಯ ಒದಗಿಸಲಾಗುತ್ತದೆ.

ರಾಜ್ಯ ಸರ್ಕಾರದ ಈ ಹೊಸ ಆದೇಶದಿಂದ ನೂರಾರು ಮಹಿಳಾ ಮತ್ತು ಪುರುಷ ನೌಕರರಿಗೆ ಪ್ರಯೋಜನವಾಗಲಿದೆ. ದತ್ತು ಪಡೆದುಕೊಂಡ ಮಕ್ಕಳೊಂದಿಗೆ ಹೊಂದಿಕೊಳ್ಳಲು ಮತ್ತು ಅವರ ಪಾಲನೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಅವರಿಗೆ ಸಮಯಾವಕಾಶ ಸಿಕ್ಕಂತಾಗಲಿದೆ.

ಮೂರನೇ ದತ್ತು ಮಗುವಿಗೆ ರಜೆ ಇಲ್ಲ

ಮೂರನೇ ದತ್ತು ಮಗುವಿಗೆ ರಜೆ ಇಲ್ಲ

ರಾಜ್ಯ ಸರ್ಕಾರ ಬುಧವಾರ ಈ ಹೊಸ ಆದೇಶ ಹೊರಡಿಸಿದ್ದು, ಎರಡು ಮಕ್ಕಳನ್ನು ದತ್ತು ಪಡೆದುಕೊಳ್ಳುವವರೆಗೆ ಈ ಹೆರಿಗೆ ರಜೆ ಸೌಲಭ್ಯ ಸಿಗಲಿದೆ. ಅಂದರೆ ಸರ್ಕಾರಿ ನೌಕರರು ಎರಡು ಮಕ್ಕಳನ್ನು ದತ್ತು ಪಡೆದುಕೊಂಡಾಗ ಹೆರಿಗೆ ರಜೆ ಸಿಗಲಿದೆ. ಮೂರನೇ ಮಗುವನ್ನು ದತ್ತು ಸ್ವೀಕರಿಸಿದಾಗ ಈ ರಜೆ ಸೌಲಭ್ಯ ಅನ್ವಯವಾಗುವುದಿಲ್ಲ.

ದತ್ತು ಪಡೆದ ದಿನದಿಂದ ಅನ್ವಯ

ದತ್ತು ಪಡೆದ ದಿನದಿಂದ ಅನ್ವಯ

ಮಗುವನ್ನು ದತ್ತು ಪಡೆದ ದಿನದಿಂದ ರಜೆ ಸೌಲಭ್ಯ ಸಿಗಲಿದೆ. ಈ ಹೊಸ ಯೋಜನೆಯಿಂದ ಮಕ್ಕಳಿಲ್ಲದವರು, ಮಕ್ಕಳನ್ನು ದತ್ತು ಪಡೆದುಕೊಂಡಾಗ ಕೂಡ ರಜೆ ಸಿಗಲಿದೆ. ಇದರಿಂದ ಅವರು ಆರಂಭದಲ್ಲಿ ದತ್ತು ಮಕ್ಕಳೊಂದಿಗೆ ಸಮಯ ಕಳೆಯಲು ಹಾಗೂ ಅವರ ಪೋಷಣೆಗೆ ಅಗತ್ಯ ಸಿದ್ಧತೆ ನಡೆಸಲು ಹಾಗೂ ಮಾನಸಿಕವಾಗಿ ಹೊಂದಿಕೊಳ್ಳಲು ನೆರವಾಗಲಿದೆ.

ಪುರುಷರಿಗೂ ರಜೆ

ಪುರುಷರಿಗೂ ರಜೆ

ಈ ಹಿಂದೆ ಹೆರಿಗೆಗೆ ಹೋಗುವ ಮಹಿಳೆಯರಿಗಷ್ಟೇ 26 ವಾರಗಳ ಕಾಲ ರಜೆ ಸೌಲಭ್ಯ ಸಿಗುತ್ತಿತ್ತು. ಅಲ್ಲದೆ, ಇದು ಮಹಿಳೆಯರಿಗೆ ಮಾತ್ರ ಅನ್ವಯವಾಗಿತ್ತು. ದತ್ತು ಮಕ್ಕಳನ್ನು ಪಡೆದುಕೊಳ್ಳುವ ಸರ್ಕಾರಿ ನೌಕರರಿಗೆ ರಜೆ ಸೌಲಭ್ಯ ಸಿಗುತ್ತಿರಲಿಲ್ಲ. ಈಗ ಮಹಿಳೆಯರು ಮತ್ತು ಪುರುಷರಿಗೆ ಇಬ್ಬರಿಗೂ ರಜೆ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ದತ್ತು ಪಡೆದುಕೊಂಡ ಪುರುಷರಿಗೆ 15 ದಿನಗಳ ರಜೆ ಸಿಗಲಿದೆ.

ಹೆರಿಗೆ ಸೌಲಭ್ಯ ತಿದ್ದುಪಡಿ ಕಾಯ್ದೆ

ಹೆರಿಗೆ ಸೌಲಭ್ಯ ತಿದ್ದುಪಡಿ ಕಾಯ್ದೆ

ಕೇಂದ್ರ ಸರ್ಕಾರವು ಈ ಸೌಲಭ್ಯ ನೀಡಲು 2016ರಲ್ಲಿಯೇ ಸಂಸತ್‌ನಲ್ಲಿ ಹೆರಿಗೆ ಸೌಲಭ್ಯ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಿತ್ತು. ಆಗ ಹೆರಿಗೆ ರಜೆಯನ್ನು 12 ವಾರಗಳಿಂದ 26 ವರ್ಷಕ್ಕೆ ಏರಿಸಲಾಗಿತ್ತು. ಜತೆಗೆ ದತ್ತು ಪಡೆದ ಮಹಿಳೆಯರೂ ಕಾನೂನಾತ್ಮಕವಾಗಿ ತಾಯಿಯಾಗುವುದರಿಂದ ಅವರಿಗೆ ರಜೆ ನೀಡುವಂತೆ ವಿಧೇಯಕಕ್ಕೆ ಅನುಮತಿ ನೀಡಲಾಗಿತ್ತು. ಹತ್ತಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಎಲ್ಲ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತದೆ.

English summary
Karnataka government has declared maternity leave of 180 days for women employees who adopt child and paternity leave of 15 days for male employees
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X