ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಎರಡು ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ಟಿಲು ಹತ್ಬೇಡಿ, ಲಿಫ್ಟ್ ಬಳಸಿ

|
Google Oneindia Kannada News

ಬೆಂಗಳೂರು, ಮೇ 28: ಬೆಂಗಳೂರಲ್ಲಿ ಕಳೆದ ಒಂದು ತಿಂಗಳಿನಿಂದ ಆಗಾಗ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಸಾಕಷ್ಟು ಸುರಂಗ ಮೆಟ್ರೋ ನಿಲ್ದಾಣ ಸೋರುತ್ತಿದೆ.

ಕೆಂಗೇರಿ ರಸ್ತೆಯಲ್ಲಿ 2020ಕ್ಕೆ ಮೆಟ್ರೋ ಸಂಚಾರ, ಅಧಿಕಾರಿಗಳು ಏನು ಹೇಳ್ತಾರೆ? ಕೆಂಗೇರಿ ರಸ್ತೆಯಲ್ಲಿ 2020ಕ್ಕೆ ಮೆಟ್ರೋ ಸಂಚಾರ, ಅಧಿಕಾರಿಗಳು ಏನು ಹೇಳ್ತಾರೆ?

ಹಾಗಾಗಿ ಮೆಟ್ಟಿಲು ಹತ್ತಬೇಡಿ, ಲಿಫ್ಟ್ ಬಳಕೆ ಮಾಡಿ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಚಿಕ್ಕಪೇಟೆ ನಿಲ್ದಾಣದಲ್ಲೂ ಇದೇ ಸಮಸ್ಯೆ ತಲೆದೂರಿದೆ. ಇಷ್ಟು ದಿನ ಟೋಕನ್, ರೀಚಾರ್ಜ್‌ಗಾಗಿ ಸರತಿಯಲ್ಲಿ ನಿಲ್ಲುತ್ತಿದ್ದ ಪ್ರಯಾಣಿಕರು ಇದೀಗ ಮೆಟ್ರೋ ನಿಲ್ದಾಣಕ್ಕೆ ಬರಲು ಹಾಗೂ ಹೊರಗೆ ಹೋಗಲು ಸರತಿಯಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Dont use steps at KR Market Metro station

ಮಳೆಯಿಂದ ಭೂಮಿಯಲ್ಲಿ ಇಂಗಿದ ನೀರು ಸುರಂಗ ಮಾರ್ಗದಲ್ಲಿ ತೊಟ್ಟಿಕ್ಕುವ ಸಮಸ್ಯೆ ಹಿಂದಿನಿಂದಲೂ ಇದೆ. ನುಣುಪಾದ ಗ್ರಾನೈಟ್‌ನ್ನು ಮೆಟ್ರೋದ ಎಲ್ಲಾ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ಪ್ರಯಾಣಿಕರು ಹಲವಾರು ಬಾರಿ ಜಾರಿ ಬಿದ್ದ ಉದಾಹರಣೆಗಳು ಕೂಡ ಇವೆ. ಮೆಟ್ರೋದ ಎರಡನೇ ಹಂತದ ಯೋಜನೆಯಲ್ಲಿ ಈ ರೀತಿಯ ಜಾರುವ ಗ್ರಾನೈಟ್ ಬದಲು ಬೇರೆ ವ್ಯವಸ್ಥೆ ಮಾಡಲಾಗುತ್ತದೆ.

English summary
Dont use steps at KR Market Metro station,instead of that use lifts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X