ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಸ್‌ರೋಡ್ ಸುತ್ತ ಇರುವ ಅಕ್ರಮ ಬಡಾವಣೆಗಳ ಬಗ್ಗೆ ಎಚ್ಚರವಿರಲಿ

|
Google Oneindia Kannada News

ಬೆಂಗಳೂರು, ಜನವರಿ 17: ಬೆಂಗಳೂರು ಸುತ್ತಮುತ್ತ ಇರುವ ಆಸುಪಾಸಿನಲ್ಲಿ ಅಕ್ರಮ ಬಡಾವಣೆಗಳು ತಲೆ ಎತ್ತುತ್ತಿವೆ. ಈ ಬಡಾವಣೆಗಳಲ್ಲಿ ನಿವೇಶನಕೊಳ್ಳುವ ಮುನ್ನ ಸಾರ್ವಜನಿಕರು ಎಚ್ಚರವಹಿಸುವುದು ಒಳಿತು.

ನೈಸ್‌ರೋಡ್ ಸುತ್ತಮುತ್ತ ಅಧಿಕೃತ ಬಡಾವಣೆಯೆಂದು ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ರೀತಿಯ ಮೋಸ ಹಾಗೂ ಆಮಿಷಗಳಿಗೆ ಜನರು ಬಲಿಯಾಗಬಾರದೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಬೆಂಗಳೂರಿನ 23 ರಸ್ತೆಗಳು ಸ್ಮಾರ್ಟ್ ಆಗಲಿವೆ, ಕಾಯ್ತಾ ಇರಿ! ಬೆಂಗಳೂರಿನ 23 ರಸ್ತೆಗಳು ಸ್ಮಾರ್ಟ್ ಆಗಲಿವೆ, ಕಾಯ್ತಾ ಇರಿ!

ಬೆಂಗಳೂರು-ತುಮಕೂರು ರಸ್ತೆ-ಹೊಸೂರು ರಸ್ತೆಯ ನಾಲ್ಕು ರಸ್ತೆಗಳ ಸುಮಾರು 111 ಕಿ.ಮೀ ಆಸುಪಾಸಿನಲ್ಲಿ ಹಾಗೂ ಬೆಂಗಳೂರು-ತಮಕೂರು ನಡುವಿನ 125 ಹಳ್ಳಿಗಳು ಮತ್ತು ಕೆಲವಡೆ 171 ಚದರ ಕಿ.ಮೀ ವ್ಯಾಪ್ತಿಯಲ್ಲಿ ಬಿಎಂಐಸಿ ವ್ಯಾಪ್ತಿಗೆ ಈ ಜಾಗಗಳು ಬರುತ್ತವೆ.

Don’t fall for illegal layouts thriving around NICE Road, warns authority

ಅನುಮತಿ ಇಲ್ಲದೆ ಬಡಾವಣೆಗಳನ್ನು ನಿರ್ಮಿಸುವಂತಿಲ್ಲ ಆದರೆ, ಇವರ ಅನುಮತಿ ಇಲ್ಲದೆ ಸಾಕಷ್ಟು ಬಡಾವಣೆಗಳು ತಲೆ ಎತ್ತುತ್ತಿವೆ. ಇದರಿಂದ ಸಾರ್ವಜನಿಕರು ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಕುಮಾರಬಾಣ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಕುಮಾರಬಾಣ

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ನ ಉಪ ನಿರ್ದೇಶಕ ಹರ್ಷಾ ಅವರು ಹೇಳುವ ಪ್ರಕಾರ ಬೆಂಗಳೂರು-ಮೈಸೂರು ಕಾರಿಡಾರ್‌ಗೆ ಹೊಂದಿಕೊಂಡಂತಿರುವ ಕೆಲವು ಕಡೆಗಳಲ್ಲಿ ಅಕ್ರಮ ಲೇಔಟ್‌ಗಳನ್ನು ಸ್ಥಾಪಿಸುತ್ತಿರುವ ಕುರಿತು ದೂರುಗಳು ಬಂದಿವೆ. ಆ ಸ್ಥಳ ಪರಿಶೀಲನೆಗೆಂದು ಹೋದಾಗ ಈ ಘಟನೆಗಳು ಬೆಳಕಿಗೆ ಬಂದಿವೆ.

Don’t fall for illegal layouts thriving around NICE Road, warns authority

ವೈಟ್‌ ಟಾಪಿಂಗ್‌ ಮತ್ತೆ ಶುರು: ಬಿಬಿಎಂಪಿ-ಪೊಲೀಸರ ನಡುವೆ ಸಹಮತ ವೈಟ್‌ ಟಾಪಿಂಗ್‌ ಮತ್ತೆ ಶುರು: ಬಿಬಿಎಂಪಿ-ಪೊಲೀಸರ ನಡುವೆ ಸಹಮತ

ಕೆಲವು ಲೇಔಟ್‌ಗಳು ಈ ಕಾರಿಡಾರ್ ನಿರ್ಮಾಣ ಪ್ರದೇಶದಲ್ಲಿ ಬಂದಿದ್ದರೆ ಮನೆ, ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಬೇಕಿದ್ದರೆ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ಮೈಸೂರು ರಸ್ತೆಯ ಕುಂಬಳಗೋಡಿನಲ್ಲಿಯೂ ಇಂತಹ ಕೆಲವು ಘಟನೆಗಳು ಬೆಳಕಿಗೆ ಬಂದಿವೆ ಶೀಘ್ರವೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

English summary
If you are planning to buy a site or property close to Bangalore-Mysore Infrastructure Corridor (BMIC), including the area around Nandi Infrastructure Corridor Enterprises (NICE) Peripheral Ring Road (PRR), be cautious.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X