ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲಿವೇಟೆಡ್ ಕಾರಿಡಾರ್ ಸುತ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಎಲಿವೇಟೆಡ್ ಕಾರಿಡಾರ್ ಮಾರ್ಗದಲ್ಲಿ ಸದ್ಯಕ್ಕೆ ಯಾವುದೇ ಹೊಸ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ನೀಡಬೇಡಿ ಎಂದು ಪಿಡಬ್ಲ್ಯೂಡಿ ಇಲಾಖೆಯು ಬಿಬಿಎಂಪಿಗೆ ಸೂಚನೆ ನೀಡಿದೆ.

ಈ ಆದೇಶವು ಫೆ.2ರಿಂದ ಅನ್ವಯವಾಗಿದೆ. ವಿವಾದಾತ್ಮಕ ಕಾರಿಡಾರ್ ನಿರ್ಮಾಣದ ಅಲೈನ್‌ಮೆಂಟ್ ಅಂತಿಮವಾಗಬೇಕಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ಕೆಎಸ್‌ಡಿಸಿಎಲ್ ಮೊದಲ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ಬ್ಯಾಪ್ಟಿಸ್ಟ್ ಆಸ್ಪತ್ರೆ, ಹೆಬ್ಬಾಳ, ಮೂಲಕ ಸಿಲ್ಕ್ ಬೋರ್ಡ್ ಜಂಕ್ಷನ್ ಒಟ್ಟು 23 ಕಿ.ಮೀ ಕಾಮಗಾರಿ ಇದಾಗಿದೆ.

Don’t approve building plans along first elevated corridor

ಬೆಂಗಳೂರಲ್ಲಿ ಷಟ್ಪಥಗಳ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರ ಸಿದ್ಧತೆ ಬೆಂಗಳೂರಲ್ಲಿ ಷಟ್ಪಥಗಳ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರ ಸಿದ್ಧತೆ

ಈ ಕಾರಿಡಾರ್ ಮೇಖ್ರಿ ವೃತ್ತ, ಜಯಮಹಲ್, ಕಂಟೋನ್ಮೆಂಟ್‌ ರೈಲು ನಿಲ್ದಾಣ, ಬಾಳೆಕುಂದ್ರಿ ವೃತ್ತ, ಚಿನ್ನಸ್ವಾಮಿ ಸ್ಟೇಡಿಯಂ , ರೆಸಿಡೆನ್ಸಿ ರಸ್ತೆ, ರಿಚ್‌ಮಂಡ್ ವೃತ್ತ, ಶಾಂತಿನಗರ ಡಬಲ್ ರೋಡ್, ಮೂಲಕ ಹೊಸೂರು ರಸ್ತೆಗೆ ತಲುಪಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಯೋಜನೆ ಅನುಷ್ಠಾನ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಪಿಡಬ್ಲ್ಯೂಡಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ತಿಳಿಸಿದ್ದಾರೆ.

English summary
Construction activity along the proposed elevated corridors that’ll crisscross the city will take a hit as the public works department (PWD) directed the BBMP to temporarily suspend granting approvals for building plans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X