ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವುದು ಅಸಹ್ಯ ರಾಜಕಾರಣ; ಹೆಚ್ ಡಿಕೆಗೆ ಶ್ರೀರಾಮುಲು ಟ್ವೀಟ್ ಏಟು

|
Google Oneindia Kannada News

Recommended Video

ಬಳ್ಳಾರಿ ರಾಜಕಿಯದಿಂದ ದೂರವಾಗ್ತಿದ್ದಾರೆ ಶ್ರೀ ರಾಮುಲು | Oneindia Kannada

ಬೆಂಗಳೂರು, ಡಿಸೆಂಬರ್.09: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ನಾಯಕರ ನಡುವೆ ಟೀಕಾಪ್ರಹಾರ ಶುರುವಾಗಿ ಬಿಟ್ಟಿದೆ. ಶುಭಾಷಯ ಕೋರುವ ನೆಪದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರನ್ನು ಟೀಕಿಸಿದ್ದು, ಬಿಜೆಪಿಗರನ್ನು ಕೆರಳಿಸಿದೆ.

'ಅಸಹ್ಯ ಸರ್ಕಾರ'ಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಭಿನಂದನೆ!'ಅಸಹ್ಯ ಸರ್ಕಾರ'ಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಭಿನಂದನೆ!

ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದು, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರಗೊಂಡಿದೆ. ಇಂದಿನ ಫಲಿತಾಂಶವನ್ನು ನೋಡಿದ ಮಾಜಿ ಮುಖ್ಮಯಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದೊಂದು ಅಸಹ್ಯ ಸರ್ಕಾರ ಎಂಬ ಬಿಜೆಪಿ ಹಿರಿಯ ನಾಯಕರ ಮೂದಲಿಕೆಗೆ ಸಹಮತ ವ್ಯಕ್ತಪಡಿಸಿದ್ದರು.

Dont Quip The Voters Verdict. Minister Sri ramulu Reaction On H.D.Kumaraswamy Tweet.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟಾಸ್ತ್ರಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಪ್ರತ್ಯಸ್ತ್ರವನ್ನು ಬಿಟ್ಟಿದ್ದಾರೆ. ಯಾರು ಸಹ್ಯ ಯಾರು ಅಸಹ್ಯ ಎಂಬುದನ್ನು ಪ್ರಜ್ಞಾವಂತ ಮತದಾರರು ನಿರ್ಧರಿಸಿದ್ದಾರೆ. ರಾಜಕೀಯ ಹೋರಾಟದಲ್ಲಿ ಸೋಲು-ಗೆಲುವು ಸಾಮಾನ್ಯ ಎಂದು ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

Dont Quip The Voters Verdict. Minister Sri ramulu Reaction On H.D.Kumaraswamy Tweet.

ಸೋಲನ್ನು ಗೆಲುವಿನ ಮೆಟ್ಟಿಲಾಗಿ ಬಳಸಿಕೊಳ್ಳುವುದೇ ನಿಜವಾದ ರಾಜಕಾರಣಿಯ ಗುಣ. ಅದನ್ನು ಬಿಟ್ಟು ಜನರ ತೀರ್ಪಿನ ಬಗ್ಗೆ ವ್ಯಂಗ್ಯದ ಟೀಕೆಗಳು ವ್ಯಕ್ತಿಯ ಮನಸ್ಥಿತಿಯನ್ನು ಹೇಳುತ್ತದೆ. ಸೋಲನ್ನು ಒಪ್ಪಿಕೊಂಡು ಜನರನ್ನು ಗೌರವಿಸುವ ಗುಣ ಬರುವವರೆಗೂ ಗೆಲುವಿನ ರುಚಿ ನೋಡಲು ಸಾಧ್ಯವಿಲ್ಲ ಎಂದು ಸಚಿವ ಶ್ರೀರಾಮುಲು ಟ್ವೀಟ್ ಏಟು ಕೊಟ್ಟಿದ್ದಾರೆ.

English summary
Karnataka By-Election Result: Don't Quip The Voters Verdict. Minister Sri Ramulu Reaction On H.D.Kumaraswamy Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X