ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಏನೂ ಕೇಳ್ಬೇಡಿ, ನಾನು ಯಾವ ಗುಂಪಿಗೂ ಸೇರಿದವನಲ್ಲ: ಡಿಕೆಶಿ

|
Google Oneindia Kannada News

Recommended Video

ನನ್ನನ್ನು ಏನು ಕೇಳ್ಬೇಡಿ ಅಂದ್ರು ಡಿಕೆಶಿ | DK Shivakumar | Congress | KPCCI | Oneindia Kannada

ಬೆಂಗಳೂರು, ಜನವರಿ 20: ನನ್ನನ್ನು ಏನೂ ಕೇಳ್ಬೇಡಿ, ನಾನು ಯಾವ ಗುಂಪಿಗೂ ಸೇರಿದವನಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.

ತಮ್ಮ ನಿವಾಸದ ಬಳಿ ಸುದ್ದಿಗಾರರಿಂದಿಗೆ ಮಾಡತನಾಡಿದ ಅವರು, ನನ್ನ ಬಳಿ ಕಾಂಗ್ರೆಸ್ ಸ್ಥಾನಮಾನದ ಬಗ್ಗೆ ಏನೂ ಕೇಳಬೇಡಿ,ಯಾರ್ಯಾರು ಏನೇನು ಹೇಳಿಕೆ ಕೊಡ್ತಿದಾರೆ.

"ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಎಐಸಿಸಿ ತಡ ಮಾಡುತ್ತಿರುವುದು ಏಕೆ?"

ಮಾಧ್ಯಮದಲ್ಲಿ ಏನೇನು ಬರ್ತಿದೆ.ಇದೆಲ್ಲ ನಾನು ಗಮನಿಸ್ತಿದೀನಿ, ನಾನು ಯಾವ ಗುಂಪಿಗೂ ಸೇರೋದಿಲ್ಲ ಎಂದು ಖಾರವಾಗಿಯೇ ನುಡಿದರು.

 ಯಾರ್ಯಾರು, ಯಾವ ಬಣ ಎಂದು ಗಮನಿಸಿಲ್ಲ

ಯಾರ್ಯಾರು, ಯಾವ ಬಣ ಎಂದು ಗಮನಿಸಿಲ್ಲ

ಯಾರ್ಯಾರು ಏನೇನು‌ ಬಣ ಮಾಡ್ಕೋತಿದಾರೆ ಅಂತ ನಾನು ಗಮನಿಸಲ್ಲ, ನನಗೆ ಗೊತ್ತಿರೋದು ಕಾಂಗ್ರೆಸ್ ಬಣ ಮಾತ್ರ,ನಾನು ವ್ಯಕ್ತಿ ಪೂಜೆ ಮಾಡೋನಲ್ಲ, ಪಕ್ಷದ ಪೂಜೆ ಮಾಡೋನು,ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಗ್ಗೆ ಮಾದ್ಯಮದಲ್ಲಿ ಮಾತ್ರ ಚರ್ಚೆ ಆಗ್ತಿದೆ ಅಷ್ಟೇ,ಯಾರ್ಯಾರು‌ ಇದರ ಬಗ್ಗೆ ಮಾತಾಡ್ತಿದ್ದಾರೋ ಅವರನ್ನೇ ಕೇಳಿ ಎಂದರು.

 ಬಿಜೆಪಿಯವರಿಗೆ ಮಹಾದಾಯಿ, ಕಾವೇರಿ ನದಿ ವಿಚಾರಗಳು ಬೇಕಿಲ್ಲ

ಬಿಜೆಪಿಯವರಿಗೆ ಮಹಾದಾಯಿ, ಕಾವೇರಿ ನದಿ ವಿಚಾರಗಳು ಬೇಕಿಲ್ಲ

ಬಿಜೆಪಿಯವರಿಗೆ ಮಹದಾಯಿ, ಕಾವೇರಿ, ಕೃಷ್ಣ ನದಿ ವಿಚಾರಗಳು ಬೇಕಾಗಿಲ್ಲ,ಅವರಿಗೆ ಅವರ ಅಭಿವೃದ್ಧಿ, ಅವರ ಕ್ಷೇತ್ರದ ಅಭಿವೃದ್ಧಿ ಮಾತ್ರ ಬೇಕು,ನಮ್ಮ ಶಾಸಕರ ಅಭಿವೃದ್ಧಿಯನ್ನು ಅವರು ನಿಲ್ಸಿದಾರೆ,ವಿಪಕ್ಷಗಳ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯನ್ನು ಬಿಜೆಪಿ ನಿಲ್ಲಿಸಿದೆ.ಇದರ ಬಗ್ಗೆ ಎಲ್ಲರೂ ಒಟ್ಟಾಗಿ ಕೂತು ಚರ್ಚಿಸಿ ಮುಂದಿನ ರೂಪುರೇಷೆ ರೂಪಿಸುತ್ತೇವೆ.

 ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ

ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ

ಕೆಪಿಸಿಸಿ ಅಧ್ಯಕ್ಷ ನೇಮಕ ದಿನದಿಂದ ದಿನಕ್ಕೆ ವಿಳಂಬವಾಗುತ್ತಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರು. ಇನ್ನು ಮಾಜಿ ಸಚಿವ ಎಂಬಿ ಪಾಟೀಲ್ ಕೂಡ ಅಧ್ಯಕ್ಷರಾಗುವ ಕುರಿತು ಒಲವು ತೋರಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಕೂಡ ಹೊರತಾಗಿಲ್ಲ. ಈಗ ಕಾಂಗ್ರೆಸ್ ಹೈಕಮಾಂಡ್‌ಗೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡುವುದು ಎಂಬ ಗೊಂದಲ ಮೂಡಿದೆ.

 ಸಿದ್ದರಾಮಯ್ಯ ಭಯಕ್ಕೆ ಕೆಪಿಸಿಸಿ ಅಧ್ಯಕ್ಷ ಆಯ್ಕೆ ಮಾಡುತ್ತಿಲ್ಲ

ಸಿದ್ದರಾಮಯ್ಯ ಭಯಕ್ಕೆ ಕೆಪಿಸಿಸಿ ಅಧ್ಯಕ್ಷ ಆಯ್ಕೆ ಮಾಡುತ್ತಿಲ್ಲ

ರಾಜ್ಯ ಕಾಂಗ್ರೆಸ್​ ಅಕ್ಷರಶಃ ಮನೆಯೊಂದು ಮೂರು ಬಾಗಿಲಿನಂತಾಗಿದೆ, ಸಿದ್ದರಾಮಯ್ಯ ಅವರ ಮೇಲಿನ ಭಯದಿಂದಾಗಿ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಸಚಿವ ಎಂಟಿ ಬಿ ನಾಗರಾಜ್ ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಲೋ ಕಮಾಂಡ್ ಆಗಿದೆ, ಕೆಪಿಸಿಸಿಗೆ ಈವರೆಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗದ ಸ್ಥಿತಿಗೆ ತಲುಪಲು ಇದೇ ಕಾರಣ. ಕಾಂಗ್ರೆಸ್ ​ ಮೂರು ಗುಂಪುಗಳಾಗಿದ್ದು ಈ ಗುಂಪುಗಾರಿಕೆಯೇ ಈ ಸ್ಥಿತಿಗೆ ಕಾರಣ ಎಂದು ಲೇವಡಿ ಮಾಡಿದ್ದಾರೆ.

English summary
Former minister DK Shivakumar said that Don't Ask Me Anything I Am Not Belonging To Any Group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X