ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನಯಾನಕ್ಕೆ ಅವಕಾಶ: ಟಿಕೆಟ್ ಬುಕ್ಕಿಂಗ್ ಶುರು ಮಾಡಿದ ಗೋ ಏರ್

|
Google Oneindia Kannada News

ಬೆಂಗಳೂರು, ಮೇ 23: ದೇಶಿಯ ವಿಮಾನ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬೆನ್ನಲ್ಲೇ ಗೋ ಏರ್ (GoAir) ವಿಮಾನಯಾನ ಸಂಸ್ಥೆ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದೆ.

Recommended Video

2ತಿಂಗಳುಗಳ ಬಳಿಕ ಹಾರಾಡುತ್ತಿವೆ ಪ್ರಾದೇಶಿಕ ವಿಮಾನಗಳು | Domestic Flight Resumed | Kalburgi

ಜೂನ್ 1 ರಿಂದ ವಿಮಾನಯಾನ ಸೇವೆ ನೀಡಲು ನಮ್ಮ ಗೋ ಏರ್ ಸಂಸ್ಥೆ ಉತ್ಸುಕವಾಗಿದೆ ಮತ್ತು ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಶನಿವಾರ ಗೋ ಏರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಪ್ರಾರಂಭ ಆಗಲಿದೆಯಂತೆಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಪ್ರಾರಂಭ ಆಗಲಿದೆಯಂತೆ

ಶೀಘ್ರದಲ್ಲೇ ವಿಮಾನದಲ್ಲಿ ತನ್ನ ಗ್ರಾಹಕರನ್ನು ಸ್ವಾಗತಿಸಲು ಗೋ ಏರ್ ಎದುರು ನೋಡುತ್ತಿದೆ. ಪ್ರಯಾಣಿಕರು ಕೋವಿಡ್ 19 ತಡೆ ನಿಯಮಗಳಿಗೆ ಬದ್ದವಾಗಿ ಮೇ 25 ರಿಂದ ಮೇ 31 ರವರೆಗೆ ಟಿಕೆಟ್‌ಗಳನ್ನು ಕಾಯ್ದಿರಸಬಹುದಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

Domestic Flights Resume: GoAir Starts Ticket Booking

ಗೋ ಏರ್ ತನ್ನ ಮಾರ್ಪಡಿಸಿದ ವೇಳಾಪಟ್ಟಿಯನ್ನು ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಿದೆ ಮತ್ತು ಅನುಮೋದನೆಯನ್ನು ಪಡೆದುಕೊಂಡಿದೆ, ಸದ್ಯ ಮೂರನೇ ಒಂದು ಭಾಗದಷ್ಟು ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಕೋವಿಡ್ ತಡೆಗಾಗಿ ಸರ್ಕಾರ ಹಾಗೂ ಸಮಾಜದ ಜೊತೆ ಸಂಸ್ಥೆ ಒಟ್ಟಾಗಿ ಕೆಲಸ ಮಾಡುತ್ತದೆ ಎಂದು ಗೋ ಏರ್ ಪ್ರಕಟಣೆ ತಿಳಿಸಿದೆ.

English summary
Domestic Flights Resume: GoAir Starts Ticket Booking, from june 1st flights will run, go air confirms it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X