ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್ಐ ಜಗದೀಶ್ ಪತ್ನಿ ರಮ್ಯಾ ಅವರು ಮಾಡಿದ ಮನವಿ ಏನು?

By Mahesh
|
Google Oneindia Kannada News

ಬೆಂಗಳೂರು, ಅ.21: ಬೈಕು ಕಳ್ಳರನ್ನು ಹಿಡಿಯಲು ಹೋಗಿದ್ದ ದೊಡ್ಡಬಳ್ಳಾಪುರದ ಪಿಎಸ್ ಐ ಜಗದೀಶ್ ಅವರನ್ನು ಕೊಲೆಗೈದ ಆರೋಪಿಗಳು ನಾಗ್ಪುರದಲ್ಲಿ ಸೆರೆಸಿಕ್ಕಿದ್ದು ಎಲ್ಲರಿಗೂ ಗೊತ್ತಿರಬಹುದು. ಇನ್ನೇನಿದ್ದರೂ ಕಾನೂನಿನ ಪ್ರಕಾರ ಶಿಕ್ಷೆ, ಜೈಲು ಪ್ರಕ್ರಿಯೆ ನಡೆಯಬೇಕಿದೆ. ಈ ನಡುವೆ ಈ ಕೊಲೆಪಾತಕರ ಪರ ಕೋರ್ಟಿನಲ್ಲಿ ವಾದಿಸಬೇಡಿ, ನನ್ನ ಪತಿಯ ಸಾವಿಗೆ ಬೆಲೆ ಕೊಡಿ ಎಂದು ಮೃತ ಜಗದೀಶ್ ಅವರ ಪತ್ನಿ ರಮ್ಯಾ ಮನವಿ ಮಾಡಿಕೊಂಡಿದ್ದಾರೆ.

ಜಗದೀಶ್ ಅವರ ಪತ್ನಿ ರಮ್ಯಾ ಮಾತನಾಡಿ, ಆರೋಪಿಗಳ ಪರವಾಗಿ ಯಾವ ವಕೀಲರು ವಾದಿಸಬಾರದು ಎಂದು ವಕೀಲರಲ್ಲಿ ಮನವಿ ಮಾಡಿಕೊಂಡಿದ್ದಾರೆ. 2012ರಲ್ಲಿ ನೆಲಮಂಗಲ ತಾಲೂಕಿನ ಮಲ್ಲಾಪುರದ ಜಗದೀಶ್ ಅವರ ಜೊತೆ ರಮ್ಯಾ ಅವರ ವಿವಾಹವಾಗಿತ್ತು. ಕೋಲಾರದಲ್ಲಿ ಮದುವೆ ಮಾಡಿಕೊಂಡ ಈ ದಂಪತಿ ಟಿ ದಾಸರಹಳ್ಳಿ ನೆಲೆಸಿದ್ದರು.

ದಂಪತಿಗೆ ಇಬ್ಬರು ಮಕ್ಕಳಿದ್ದು, ಘಟನೆ ನಡೆದ ದಿನದಂದು ಕೊನೆ ಬಾರಿಗೆ ಪತ್ನಿಗೆ ಕರೆ ಮಾಡಿ ಊಟಕ್ಕೆ ತಯಾರಿ ನಡೆಸುವಂತೆ ಹೇಳಿದ್ದ ಜಗದೀಶ್ ಬಾರದ ಲೋಕಕ್ಕೆ ಪ್ರಯಾಣಿಸುವಂತಾಗಿದ್ದು ದುರ್ವಿಧಿ. [ನಾಗ್ಪುರದಲ್ಲಿ ಮಧು, ಹರೀಶ್ ಬಂಧನ]

Doddaballapur police station sub inspector Jagadish Wife and Family request Advocates

ನಾಗ್ಪುರ ಕ್ರೈಂ ಬ್ರಾಂಚ್‌, ಭಯೋತ್ಪಾದಕ ನಿಗ್ರಹ ದಳ ಹಾಗೂ ರೈಲ್ವೆ ಪೊಲೀಸ್‌ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ಜಗದೀಶ್ ಹತ್ಯೆ ಮಾಡಿದ್ದ ಹರೀಶ್ ಬಾಬು (48) ಮತ್ತು ಮಧು (26) ಅವರನ್ನು ಸೋಮವಾರ ಸಂಜೆ ನಾಗ್ಪುರ ರೈಲು ನಿಲ್ದಾಣದಲ್ಲಿ ಬಂಧಿಸಿದ ಸುದ್ದಿ ಓದಿರುತ್ತೀರಿ. ಆರೋಪಿಗಳನ್ನು ಬುಧವಾರ ಅಥವಾ ಗುರುವಾರ ಬೆಂಗಳೂರಿಗೆ ಕರೆ ತಂದು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.

ಪೊಲೀಸರಿಗೆ ರಕ್ಷಣೆ ಇಲ್ಲ: ನನ್ನ ಮಗನ ಸ್ಥಿತಿ ಯಾವ ಪೊಲೀಸ್ ಅಧಿಕಾರಿಗಳಿಗೂ ಬಾರದಿರಲಿ ಎಂದು ಕಳ್ಳತನದ ಆರೋಪಿಗಳಿಂದ ಹತ್ಯೆಯಾದ ಎಸ್ಸೈ ಜಗದೀಶ್ ಅವರ ತಾಯಿ ಮಲ್ಲಮ್ಮ ಮಾಧ್ಯಮಗಳೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಯಾರಿಗೂ ಕೇಡು ಬಯಸದ ನನ್ನ ಮಗನನ್ನು ಹತ್ಯೆ ಮಾಡಲಾಗಿದೆ. ಮಗನನ್ನು ಕಳೆದುಕೊಂಡ ನಾವು ಅನಾಥರಾಗಿದ್ದೇವೆ. ನಮ್ಮ ಸ್ಥಿತಿ ಯಾವ ಅಧಿಕಾರಿಗಳಿಗೂ ಬರಬಾರದೆಂದರೆ, ಅಪರಾಧಿಗಳನ್ನು ನೇಣಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ. [ಪಿಎಸ್ಐ ಕೊಂದ ಮಧು ಬಗ್ಗೆ ಎಸ್ಐ ದೇವರಾಜ್]

ಆರೋಪಿಗಳನ್ನು ಸೆರೆ ಹಿಡಿದಿರುವ ಬಗ್ಗೆ ಪೊಲೀಸ್ ಉನ್ನತಾಧಿಕಾರಿಗಳು ಫೋನ್ ಮಾಡಿ ತಿಳಿಸಿದರು. ಹತ್ಯೆ ನಡೆದ ದಿನ ನನ್ನ ಮಗನಿಗೆ ಸಾರ್ವಜನಿಕರ ನೆರವು ಸಿಕ್ಕಿದ್ದರೇ ಬದುಕಬಹುದಾಗಿತ್ತು. ಪೊಲೀಸರನ್ನೇ ಕೊಲ್ಲುವಾಗ ನಾವೇನು ಮಾಡಲು ಸಾಧ್ಯ ಎಂಬ ಮನಸ್ಥಿತಿ ಜನರಿಗೆ ಬಂದಿರಬಹುದು. ಕೊನೆ ಪಕ್ಷ ಜೋರಾಗಿ ಬೊಬ್ಬೆ ಹಾಕಿದ್ದರೂ ಸಾಕಿತ್ತು. ನನ್ನ ಮಗನಿಗೆ ಬಂದ ಗತಿ ಮಿಕ್ಕವರಿಗೆ ಬರಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಜಗದೀಶ್ ಅವರ ಕುಟುಂಬ ಪ್ರತಿಕ್ರಿಯಿಸಿದೆ.

English summary
Doddaballapur police station sub inspector Jagadeesh (33) murdered On Friday, October 16th 2015. Bengaluru Police have arrested the culprits Madhu and Harish Babu. PSI Jagadish's wife Ramya and family has requested All the advocates in the state not to take up the case and help murderers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X