ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಸಿಕೆ ಪಡೆಯದೇ ಇರುವುದಕ್ಕಿಂತ ಯಾವುದಾದರೂ ಒಂದು ಲಸಿಕೆ ಪಡೆಯಿರಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09:ಕೊರೊನಾ ಲಸಿಕೆಯನ್ನು ಪಡೆಯದೇ ಇರುವುದಕ್ಕಿಂತ ಯಾವುದಾದರೂ ಒಂದು ಲಸಿಕೆಯನ್ನು ಪಡೆಯುವುದು ಒಳ್ಳೆಯರು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ಮೂರನೇ ಅಲೆ ಎದುರಾಗುವ ಆತಂಕದಲ್ಲಿ ಜನರಿದ್ದಾರೆ ಇಂತಹ ಸಂದರ್ಭದಲ್ಲಿ ಲಸಿಕೆ ಪಡೆಯುವುದಿಲ್ಲ ಎಂಬ ಹಠ ಬೇಡ ಯಾವುದಾದರೂ ಲಸಿಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಡೆಲ್ಟಾ ರೂಪಾಂತರಿಯ 2 ಪ್ರಭೇದಗಳು ಪತ್ತೆ, ಆತಂಕಬೆಂಗಳೂರಿನಲ್ಲಿ ಡೆಲ್ಟಾ ರೂಪಾಂತರಿಯ 2 ಪ್ರಭೇದಗಳು ಪತ್ತೆ, ಆತಂಕ

ವೈದ್ಯಕೀಯ ಕ್ಷೇತ್ರದಲ್ಲಿ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಚರ್ಚೆಗಳಾಚೆಗೆ ಪರಿಣಾಮಕಾರಿತ್ವಕ್ಕಿಂತ, ಲಸಿಕೆ ಪಡೆಯದೇ ಇರುವುದಕ್ಕಿಂತಲೂ ಯಾವುದಾದರೂ ಲಸಿಕೆ ಪಡೆಯುವುದು ಒಳಿತು ಎನ್ನುತ್ತಿದ್ದಾರೆ ವೈದ್ಯರು.

Doctors Says Any Covid Vaccine Better Than No Jab At All

ಲಸಿಕೆ ಸಂಸ್ಥೆಗಳು ಕೊರೊನಾದ ಹೊಸ ತಳಿಗಳ ವಿರುದ್ಧವೂ ಈಗಿರುವ ಲಸಿಕೆಗಳು ಪರಿಣಾಮಕಾರಿ ಎಂದು ಹೇಳಿದರೂ ಕೊರೊನಾ ಹೊಸ ತಳಿಗಳ ಬಗ್ಗೆ ಅಧ್ಯಯನ ಸೀಮಿತವಾಗಿದೆ. ಈ ವಿಷಯದಲ್ಲಿ ರಿಯಲ್ ವರ್ಲ್ಡ್ ಡೇಟಾ ಇನ್ನೂ ಅಲಭ್ಯವಾಗಿವೆ.

ಪರಿಣಾಮಕಾರಿತ್ವದಲ್ಲಿ ಲಸಿಕೆಗಳ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ರೋಗದ ತೀವ್ರತೆ, ಸಾವಿನ ಪ್ರಮಾಣ, ಆಸ್ಪತ್ರೆಗೆ ದಾಖಲಾಗುವುದನ್ನು ಪರಿಗಣಿಸಿದರೆ ಎರಡು ಡೋಸ್ ಗಳ ನಂತರವೇ ಲಸಿಕೆ ಪರಿಣಾಮಕಾರಿಯಾಗಿರುತ್ತದೆ.

ಒಂದು ಡೋಸ್ ತೆಗೆದುಕೊಂಡವರಿಗೆ ಸೋಂಕು ಹರಡಿದರೂ ಕಡಿಮೆ ಆಕ್ಸಿಜನ್ ಪೂರೈಕೆ, ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈಜ್ಞಾನಿಕ ಮಂಡಳಿ ಮತ್ತು ಅಧ್ಯಕ್ಷ-ಜೆರಿಯಾಟ್ರಿಕ್ ಮೆಡಿಸಿನ್, ಮಣಿಪಾಲ್ ಆಸ್ಪತ್ರೆಗಳ ಮುಖ್ಯಸ್ಥ, ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ತಂಡದ ಸದಸ್ಯ ಡಾ. ಅನೂಪ್ ಅಮರ್ ನಾಥ್ 'ಇಂಡಿಯನ್‌ ಎಕ್ಸ್‌ಪ್ರೆಸ್‌'ಗೆ ಹೇಳಿದ್ದಾರೆ.

ಭಾರತದ ಅಧ್ಯಯನದ ಪ್ರಕಾರ, ಈ ಎರಡು ಲಸಿಕೆಯ ಪರಿಣಾಮಕಾರಿತ್ವ ಒಂದೇ ರೀತಿಯಲ್ಲಿದ್ದರೂ ಕೋವಿಶೀಲ್ಡ್ ಗಿಂತಲೂ ಕೋವ್ಯಾಕ್ಸಿನ್ ಉತ್ತಮವಾಗಿದೆ.

ಹಲವು ದೇಶಗಳಲ್ಲಿ ಕೋವಿಶೀಲ್ಡ್ ಲಸಿಕೆಗೆ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳುತ್ತಿರುವವರು ಹೆಚ್ಚಾಗಿ ಕೋವಿಶೀಲ್ಡ್ ನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಇಂಟರ್ನಲ್ ಮೆಡಿಸಿನ್ ಮತ್ತು ಡಯಾಬಿಟಾಲಜಿ, ಸಕ್ರ ವರ್ಲ್ಡ್ ಆಸ್ಪತ್ರೆ ಡಾ. ಸುಬ್ರತಾ ದಾಸ್.

"ರಕ್ತ ಹೆಪ್ಪುಗಟ್ಟುವ ಸಮಸ್ಯೆ (ಥ್ರೊಂಬೊಸಿಸ್) ಇರುವವರು, ಸ್ಟ್ರೋಕ್, ಹೃದಯ ಸಮಸ್ಯೆ ಇರುವವರು ಕೋವಿಶೀಲ್ಡೇತರ ಲಸಿಕೆಯನ್ನು ಪಡೆಯುವುದು ಸೂಕ್ತವಾಗಿದೆ. ಲಸಿಕೆ ಪಡೆದ ನಂತರ ಪ್ರತಿಕಾಯಗಳ ಪರಿಶೀಲನೆ ನಡೆಸಲಾಗಿಲ್ಲ. ಕೆಲವೊಂದು ಲಸಿಕೆಗಳು ಟಿ-ಸೆಲ್ ಇಮ್ಯುನಿಟಿ (ರೋಗನಿರೋಧಕತೆಯ ಪ್ರತಿಕ್ರಿಯೆಯ ದೀರ್ಘಾವಧಿ ಮೆಮೊರಿ)ಯನ್ನು ಉತ್ಪಾದಿಸುತ್ತವೆ.

ಇನ್ನು ರಷ್ಯಾದ ಅಧ್ಯಯನದ ಪ್ರಕಾರ ಸ್ಪುಟ್ನಿಕ್ ಲಸಿಕೆ ಶೇ.90 ರಷ್ಟು ಪರಿಣಾಮಕಾರಿತ್ವವವನ್ನು ಹೊಂದಿದೆ ಎಂದು ಡಾ.ಸುಬ್ರತಾ ದಾಸ್ ಹೇಳಿದ್ದಾರೆ. ಲಸಿಕೆಗಳು ಕಾರ್ಯನಿರ್ವಹಣೆಯಲ್ಲಿ ವಿವಿಧ ವಿಧಾನಗಳನ್ನು ಒಳಗೊಂಡಿದ್ದರೂ ಅವುಗಳ ಅಂತಿಮ ಗುರಿ ಮಾತ್ರ ರೋಗನಿರೋಧಕತೆ ಹೆಚ್ಚಿಸುವುದಾಗಿದೆ.

ನಿಷ್ಕ್ರಿಯ ವೈರಾಣು, ವೈರಾಣುವಿನ ಆರ್‌ಎನ್‌ಎ ಸೇರಿದಂತೆ ವೈರಾಣುವಿನ ಭಾಗವೊಂದರಿಂದ ಲಸಿಕೆಯನ್ನು ತಯಾರಿಸಲಾಗಿರುತ್ತದೆ. ಫೈಜರ್ ಲಸಿಕೆ -15 ಡಿಗ್ರಿಯಿಂದ -18 ಡಿಗ್ರಿ ಸೆಲ್ಸಿಯಸ್ ನಲ್ಲಿಡಬೇಕಾದ್ದರಿಂದ ಭಾರತದಲ್ಲಿ ಫೈಜರ್ ಲಸಿಕೆಯನ್ನು ಶೇಖರಿಸುವುದು, ಸಂಗ್ರಹಿಸುವುದು ಕಷ್ಟದ ಕೆಲಸ.

ಬಿಬಿಎಂಪಿ ವ್ಯಾಪ್ತಿಯಲ್ಲಿ 100% ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡುವ ಯೋಜನೆಯನ್ನು ಬಿಬಿಎಂಪಿ ಹಮ್ಮಿಕೊಂಡಿದೆ. ಮುಂದಿನ 45 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಹಾಗೂ 100% ಮೊದಲ ಡೋಸ್ ಲಸಿಕೆ ಗುರಿಯನ್ನು ಸಾಧಿಸಲು ಕ್ರಿಯಾಯೋಜನೆ ಹೊರತಂದಿದೆ.

ತನ್ನ ವ್ಯಾಪ್ತಿಯ ಶೇ 100ರಷ್ಟು ಮಂದಿಗೆ ಕೊರೊನಾ ಮೊದಲ ಡೋಸ್ ಲಸಿಕೆ ನೀಡಲು ಬಿಬಿಎಂಪಿ ಗುರಿ ಹೊಂದಿರುವುದಾಗಿ ತಿಳಿಸಿದೆ.

ಬೆಂಗಳೂರಲ್ಲಿ ಲಸಿಕೆ ಪಡೆಯುವವರಿಗೆ ಸಿಹಿಸುದ್ದಿಬೆಂಗಳೂರಲ್ಲಿ ಲಸಿಕೆ ಪಡೆಯುವವರಿಗೆ ಸಿಹಿಸುದ್ದಿ ಈ ಗುರಿ ಸಾಧಿಸಲು ಲಸಿಕೆ ನೀಡುವ ಸಮಯವನ್ನು ವಿಸ್ತರಿಸಿದ್ದು, ಸಂಜೆ 4ರಿಂದ ರಾತ್ರಿ 9 ಗಂಟೆವರೆಗೂ ಸಮಯ ವಿಸ್ತರಣೆ ಮಾಡಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎರಡು ಲಸಿಕಾ ಕೇಂದ್ರಗಳು ದಿನವೂ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಕಾರ್ಯನಿರ್ವಹಿಸಲಿರುವುದಾಗಿ ತಿಳಿಸಿದೆ.

ಈಗ ಪ್ರತಿದಿನ ಒಂದು ಲಕ್ಷ ಲಸಿಕೆ ಪೂರೈಕೆ ಲಭ್ಯವಿದೆ. ಮುಂದಿನ 45 ದಿನಗಳಲ್ಲಿ ಉದ್ದೇಶಿತ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಲು ಗುರಿ ಹೊಂದಲಾಗಿದೆ. ಈಗ ನಮಗೆ ಸಾಕಷ್ಟು ಲಸಿಕೆಗಳ ಲಭ್ಯವಿದೆ.

English summary
Despite a difference in efficacy level, all vaccines are effective against Covid-19, and any vaccine is better than no vaccine, say doctors. Indian studies say that Covaxin is better than Covishield, though their efficacy is similar. However, these studies are limited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X