• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಕೃತ್ತು ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ಮರು ಜೀವ

|

ಬೆಂಗಳೂರು, ಏಪ್ರಿಲ್, 24: ಸಕ್ರ ವರ್ಲ್ಡ್ ಆಸ್ಪತ್ರೆ ವೈದ್ಯರು ಇತ್ತೀಚೆಗೆ ಆಸ್ಸಾಮ್‍ನ 5 ವರ್ಷದ ಬಾಲಕಿಯ ಪ್ರಾಣವನ್ನು ರಕ್ಷಿಸುವ ಕಾರ್ಯ ಮಾಡಿದ್ದು, ಅಪರೂಪದ ಯಕೃತ್ತು ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ತುರ್ತು ಯಕೃತ್ತು ಬದಲಿಸುವ ಶಸ್ತ್ರಚಿಕಿತ್ಸೆಯನ್ನು ನೆರೆವೇರಿಸಿದ್ದಾರೆ.

ಕೇವಲ ಒಂದು ವಾರದಲ್ಲಿ ತೀವ್ರಗತಿಯಲ್ಲಿ ಅಭಿವೃದ್ಧಿಹೊಂದಿದ ಕಾಮಾಲೆ ರೋಗ ಹಾಗೂ ಅದರ ದುಷ್ಪರಿಣಾಮದಿಂದ ತೀವ್ರ ಅಸ್ವಸ್ಥಗೊಂಡ ಕೋಯಿಲ್ ಬೋರಾ (ಹೆಸರು ಬದಲಿಸಿದೆ) ಬಾಲಕಿಯನ್ನು ಸಕ್ರ ಆಸ್ಪತ್ರೆಗೆ ಕರೆತರಲಾಯಿತು.

2000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ, ದಾಖಲೆ ಬರೆದ ಕರ್ನಾಟಕದ ಡಾಕ್ಟರ್

ಆರಂಭಿಕ ತಪಾಸಣೆಯಲ್ಲಿ ಆಕೆಯ ಶರೀರದ ಬಿಲ್ಲಿರುಬಿನ್ ಶೇ.34 ಎಂಜಿ ಎಂದು ತಿಳಿದುಬಂತು. ಅಂತಾರಾಷ್ಟ್ರೀಯ ಸಾಮಾನ್ಯ ಅನುಪಾತವು 6.6 (ಐಎನ್‍ಆರ್) ಆಗಿತ್ತು. ರಕ್ತದಲ್ಲಿದ್ದ ಭಾರಿ ಪ್ರಮಾಣದ ಬಿಲ್ಲಿರುಬಿನ್ ಕಾಮಾಲೆ ಲಕ್ಷಣವನ್ನು ಸೂಚಿಸುತ್ತಿತ್ತು. ಅಲ್ಲದೇ ಇದು ಶೇ.1 ಮಿಲಿಗ್ರಾಂ ಗಿಂತ ಕಡಿಮೆ ಇತ್ತು. ಐಎನ್‍ಆರ್ ಸಾಮಾನ್ಯವಾಗಿ ಯಕೃತ್ತಿನ ಘನೀಕರಣವನ್ನು ಪ್ರತಿಬಿಂಭಿಸುತ್ತದೆ.

ದೇಹದಲ್ಲಿನ ಹೆಪ್ಪುಗಟ್ಟುವಿಕೆಯ ಅಗತ್ಯಕ್ಕೆ ತಕ್ಕಷ್ಟು ಪ್ರೋಟಿನ್ ಅಂಶವನ್ನು ಯಕೃತ್ತು ಉತ್ಪಾದಿಸುತ್ತಲ್ಲವೆಂಬುದನ್ನು 6.5ಕ್ಕಿಂತ ಹೆಚ್ಚಿನ ಮೌಲ್ಯವು ಬಹಿರಂಗಪಡಿಸುತ್ತಿತ್ತು. ಇದರಿಂದಲೇ ಕೋವೆಲ್ ತೀವ್ರ ಯಕೃತ್ತಿನ ವೈಫಲ್ಯಕ್ಕೆ ಒಳಗಾಗಬೇಕಾಯಿತು ಎಂದು ಸಕ್ರ ವರ್ಲ್ಡ್ ಆಸ್ಪತ್ರೆ ಗ್ಯಾಸ್ಟ್ರೋಇಂಟೆಸ್ಟಿನಲ್ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕ ಡಾ. ಸಾದಿಕ್ ಸಿಕೊರಾ ಅಭಿಪ್ರಾಯ ಪಟ್ಟಿದ್ದಾರೆ.

ಬಾಲಕಿಯನ್ನು ತಕ್ಷಣವೇ ಪೀಡಿಯಾಟ್ರಿಕ್ ತುರ್ತು ನಿಗಾ ಘಟಕಕ್ಕೆ ದಾಖಲು ಮಾಡಿಕೊಳ್ಳಲಾಯಿತು. ಆಗ ಅವಳ ಸ್ಥಿತಿ ಸ್ಥಿರವಾಗಿತ್ತು. ಮುಂದುವರಿದು ಆಕೆಯನ್ನು ತನಿಖೆಗೆ ಒಳಪಡಿಸಿದಾಗ ಆಕೆ ವಿಲ್ಸನ್ ಕಾಯಿಲೆಯಿಂದ ಕೂಡ ಬಳಲುತ್ತಿರುವುದು ದೃಢಪಟ್ಟಿತು. ತಾಮೃದ ಅಂಶವು ಪಿತ್ತ ಜನಕಾಂಗದಲ್ಲಿ ಸಂಗ್ರಹಗೊಳ್ಳುವ ಅಪರೂಪದ ಸ್ಥಿತಿ ಇದಾಗಿದೆ. ಇದು ಸಾಮಾನ್ಯವಾಗಿ ಯಕೃತ್ತಿನ ಕ್ರಿಯೆಗಳ ಪ್ರಗತಿಪರ ಕ್ಷೀಣತೆಗೆ ಕಾರಣವಾಗುತ್ತದೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಜೂನ್ 1ರಿಂದ ಕ್ಯಾಶ್ ಲೆಸ್ ಇನ್ಷೂರೆನ್ಸ್ ಮಾನ್ಯ ಇಲ್ಲ

ಈ ಸ್ಥಿತಿಯ ರೋಗಲಕ್ಷಣಗಳು ಸಾಮಾನ್ಯವಾಗಿ 12ರಿಂದ 23ರ ನಡುವಿನ ವಯೋಮಾನದವರಲ್ಲಿ ಆರಂಭವಾಗುತ್ತದೆ. ಆದಾಗ್ಯೂ ಕೋಯಿಲ್‍ಗೆ ಎದುರಾದ ವಿಲ್ಸನ್ ಕಾಯಿಲೆಯಿಂದ ತೀಕ್ಷಣವಾದ ಪರಿಣಾಮ ಬೀರಿ ಯಕೃತ್ತು ವಿಫಲಗೊಂಡಿತ್ತು. ತಕ್ಷಣ ಚಿಕಿತ್ಸೆ ಸಿಗದಿದ್ದರೆ ಪರಿಸ್ಥಿತಿ ತುಂಬಾ ಮಾರಕವಾಗುತ್ತಿತ್ತು.

ಆಕೆಯ ಯಕೃತ್ತಿನ ವಿಫಲತೆಯ ಪ್ರಗತಿ ತೀವ್ರಗತಿಯಲ್ಲಿದ್ದ ಕಾರಣ ಕೋಯೆಲ್ ಹೆಸರನ್ನು ಮೃತ ಯಕೃತ್ತು ಕಸಿ ಪಟ್ಟಿಗೆ ಸೇರಿಸಲಾಯಿತು. ಅದೃಷ್ಟವಶಾತ್ ಆಕೆಯ ತಾಯಿಯದ್ದು ಒಂದೇ ರಕ್ತದ ಗುಂಪಾದ್ದರಿಂದ ಯಕೃತ್ತು ದಾನ ಮಾಡಿದರು. ತಾಯಿಯ ಪಿತ್ತ ಜನಕಾಂಗದ ಎಂಟು ಭಾಗಗಳಲ್ಲಿ ರಕ್ತ ಪೂರೈಕೆ ಹಾಗೂ ಪಿತ್ತರಸ ಒಳಮಾರ್ಗದ ಜತೆ ಕೋಯೆಲ್‍ಗೆ ಹೊಂದಿಕೆ ಆದ್ದರಿಂದ ತಾಯಿಯ ಲಿವರ್ ದಾನ ಪಡೆಯಲು ವೈದ್ಯ ಸಮೂಹ ನಿರ್ಧರಿಸಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Doctors at Sakra World Hospital have recently saved the life of a five-year-old Assamese girl suffering from rare liver disease by performing an emergency liver transplant. Koel Bohra (name changed) visited Sakra World Hospital after complaining of rapidly progressive jaundice that developed within the span of a week.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more