ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾನ್ಯ ನೆಗಡಿಯಿದ್ದರೂ ಕೊವಿಡ್ ಪರೀಕ್ಷೆ ಮಾಡಿಸಿ: ವೈದ್ಯರ ಸಲಹೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 16: ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ, ವಾತಾವರಣವೂ ತಂಪಾಗಿದೆ. ಜ್ವರ, ಕೆಮ್ಮು, ಶೀತ ಪ್ರಕರಣಗಳು ಹೆಚ್ಚುತ್ತಿವೆ.

ವಾತಾವರಣಕ್ಕೆ ಹೀಗಾಗಿದೆ, ಸಾಮಾನ್ಯ ನೆಗಡಿಯಷ್ಟೇ ಎಂದು ನಿರ್ಲಕ್ಷ್ಯ ಮಾಡಬೇಡಿ, ನೆಗಡಿ, ಗಂಟಲಲ್ಲಿ ಕೆರೆತ ಇವು ಕೊವಿಡ್ 19 ಲಕ್ಷಣಗಳಾಗಿರಬಹುದು. ಹೀಗಾಗಿ ಕೆಲವು ವೈದ್ಯರು ಸಂಬಂಧಿತ ಪರೀಕ್ಷೆಗಳನ್ನು ಮಾಡಿಸುವಂತೆ ಹೇಳುತ್ತಿದ್ದಾರೆ. ಇನ್ನೂ ಕೆಲವರು ಹಲವು ದಿನಗಳ ವರೆಗೆ ರೋಗಿಯ ಮೇಲೆ ನಿಗಾ ಇಡುವಂತೆ ಹೇಳಿದ್ದಾರೆ.

ಬೆಂಗಳೂರು: ಕೊರೊನಾ ಸೋಂಕು ಗೆದ್ದ ಅವಧಿಪೂರ್ವವಾಗಿ ಜನಿಸಿದ ಶಿಶುಬೆಂಗಳೂರು: ಕೊರೊನಾ ಸೋಂಕು ಗೆದ್ದ ಅವಧಿಪೂರ್ವವಾಗಿ ಜನಿಸಿದ ಶಿಶು

ರೋಗದ ಲಕ್ಷಣಗಳಿರುವ ಕಾರಣ ಕೆಲವು ಮಂದಿಗೆ ಗೊಂದಲಗಳು ಉಂಟಾಗುತ್ತಿವೆ ಹೀಗಾಗಿ ವರದಿ ಬರುವವರೆಗೂ ಐಸೊಲೇಷನ್‌ನಲ್ಲಿ ಇರುವ ನಿರ್ಧಾರ ಮಾಡಿದ್ದಾರೆ.

ಕೆಮ್ಮು, ಜ್ವರವಿದ್ದರೆ ಬೇರೆಯವರಿಂದ ದೂರವಿರಿ

ಕೆಮ್ಮು, ಜ್ವರವಿದ್ದರೆ ಬೇರೆಯವರಿಂದ ದೂರವಿರಿ

ರೋಗಿಗಳಿಗೆ ಕೆಮ್ಮು, ಜ್ವರ, ಮೂಗು ಸೋರುತ್ತಿದ್ದರೆ ತಮ್ಮನ್ನು ಮೊದಲ ದಿನದಿಂದಲೇ ಬೇರೆಯವರಿಂದ ಪ್ರತ್ಯೇಕಿಸಿಕೊಳ್ಳಬೇಕು.

ಸಾಕಷ್ಟು ಮಂದಿ ಶೀತವುಳ್ಳವರು ನಾವು ಮನೆಯಿಂದ ಹೊರಗಡೆಯೇ ಹೋಗಿಲ್ಲ, ವಾತಾವರಣದಿಂದ ಶೀತ ಬಂದಿದೆ ಎಂದು ಹೇಳುತ್ತಿದ್ದಾರೆ.
ಸಮುದಾಯ ಸೋಂಕಾಗಿ ಪರಿವರ್ತನೆ

ಸಮುದಾಯ ಸೋಂಕಾಗಿ ಪರಿವರ್ತನೆ

ಕೊರೊನಾ ಸೋಂಕು ಈಗ ಸಮುದಾಯ ಸೋಂಕಾಗಿ ಪರಿವರ್ತನೆಗೊಳ್ಳುವ ಹಂತದಲ್ಲಿದೆ. ಪೋಷಕರು ಮನೆಯಿಂದ ಹೊರಗಡೆ ಹೋದರೆ ಅವರು ಮಕ್ಕಳಿಗೆ ಸೋಂಕು ಹರಡಿಸುವ ಎಲ್ಲಾ ಸಾಧ್ಯತೆ ಇರುತ್ತದೆ.

ನಿಮಗೆ ಜ್ವರ, ಕಫ, ಶೀತವಿದ್ದರೆ ಮೊದಲು ವೈದ್ಯರನ್ನು ಭೇಟಿಯಾಗುವುದು ಒಳಿತು. ಮೊದಲೇ ಚಿಕಿತ್ಸೆ ಲಭ್ಯವಾದರೆ ಬೇಗ ಗುಣಮುಖರಾಗಬಲ್ಲದು.

ಪರೀಕ್ಷೆ ಮಾಡಿಸಿಕೊಳ್ಳಿ

ಪರೀಕ್ಷೆ ಮಾಡಿಸಿಕೊಳ್ಳಿ

ಇನ್ಫ್ಲುಯೆನ್ಝಾ(ಶೀತಜ್ವರ)ವಿದ್ದರೂ ಕೂಡ ಪರೀಕ್ಷೆ ಮಾಡಿಸಿಕೊಳ್ಳಬೇಕು. 2-3 ದಿನಗಳ ಕಾಲ ರೋಗದ ಲಕ್ಷಣಗಳು ಮುಂದುವರೆದರೆ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಿ.

Recommended Video

Diganth ಹಾಗು Aindrita Ray ಮೊದಲ ದಿನದ ವಿಚಾರಣೆ ಹೇಗಾಯ್ತು | Oneindia Kannada
ಟ್ರಾವೆಲ್ ಹಿಸ್ಟರಿ

ಟ್ರಾವೆಲ್ ಹಿಸ್ಟರಿ

ಫೀವರ್ ಕ್ಲಿನಿಕ್‌ಗಳಲ್ಲಿ ವೈದ್ಯರು ನಿಮ್ಮ ಟ್ರಾವೆಲ್ ಹಿಸ್ಟರಿ, ಜನರ ಸಂಪರ್ಕದ ಕುರಿತು ಮಾಹಿತಿ ಕೇಳುತ್ತಾರೆ.ಗಂಟಲು ನೋವು, ಮೈಕೈನೋವು, ತಲೆನೋವು, ಸಣ್ಣ ಪ್ರಮಾಣದ ಜ್ವರವು ಕೊವಿಡ್ 19 ಲಕ್ಷಣವಾಗಿದೆ.

English summary
With Bengaluru witnessing heavy rainfall in the last few months, the number of residents suffering from cold has seen a rise. Cold as well as sore throat are also the symptoms of COVID-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X